ವೆಂಕಟೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಸಂಕ್ರಾಂತಿ, ರಥಸಪ್ತಮಿ, ಗ್ರಾಮ ದೇವತೆ ಹಬ್ಬ, ಶ್ರಾವಣ ಶನಿವಾರ ಮತ್ತಿತರ ವಿಶೇಷ ಸಂದರ್ಭಗಳಲ್ಲಿ ದೇವರ ಉತ್ಸವ ಮೂರ್ತಿಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ. ನಾಡಹಬ್ಬ ದಸರಾ ಉತ್ಸವದ 9 ದಿನಗಳಲ್ಲೂ ವಿಶೇಷ ಪೂಜೆ ನೆರವೇರುತ್ತದೆ. ಹಬ್ಬ ಹರಿದಿನ ಸೇರಿದಂತೆ ಸೋಮವಾರ, ಶುಕ್ರವಾರ ಮತ್ತು ಭಾನುವಾರಗಳಂದು ದೇವಾ ಲಯದ ಹಿಂಭಾಗದಲ್ಲಿ ಭಕ್ತರಿಗೆ ಪ್ರಸಾದ ವಿತರಣೆ ವ್ಯವಸ್ಥೆಯೂ ಇರುತ್ತದೆ.