ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಾಲಯ ಉದ್ಘಾಟನೆ

 ಕಂಪಲಾಪುರ ಸಮೀಪದ ಬೋರೆಹೊಸಹಳ್ಳಿ ಗೇಟ್ ಬಳಿ ನಿರ್ಮಿಸಿರುವ ಶ್ರೀ ಲಕ್ಷ್ಮೀ ವೆಂಕಟೇಶ್ವರ  ದೇವಾಲಯವನ್ನು ಸೋಮವಾರ ಸೇವೆಗೆ ಸಮರ್ಪಣೆ ಮಾಡಿದ ಸಂದರ್ಭ ಸಮಾವೇಶಗೊಂಡಿದ್ದ ನೂರಾರು ಭಕ್ತರು.
ಕಂಪಲಾಪುರ ಸಮೀಪದ ಬೋರೆಹೊಸಹಳ್ಳಿ ಗೇಟ್ ಬಳಿ ನಿರ್ಮಿಸಿರುವ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಾಲಯವನ್ನು ಸೋಮವಾರ ಸೇವೆಗೆ ಸಮರ್ಪಣೆ ಮಾಡಿದ ಸಂದರ್ಭ ಸಮಾವೇಶಗೊಂಡಿದ್ದ ನೂರಾರು ಭಕ್ತರು.
Published on
ಕಂಪಲಾಪುರ : ಸಮೀಪದ ಬೋರೆಹೊಸಹಳ್ಳಿ ಗೇಟ್ ಬಳಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಾಲಯ ಸೋಮವಾರ ಸೇವೆಗೆ ಸಮರ್ಪಣೆಗೊಂಡಿತು. ಮೈಸೂರು ಒಂಟಿಕೊಪ್ಪಲಿನ ವೆಂಕಟೇಶ್ವರ ದೇವಾಲಯದ ಪ್ರಧಾನ ಅರ್ಚಕ ಸತ್ಯನಾರಾಯಣ ಮತ್ತು ತಂಡದವರಿಂದ ಪೂಜಾ ವಿಧಿ ವಿಧಾನಗಳು ನೆರವೇರಿದವು. ಸೋಮವಾರ ಸಂಜೆ ವಿದ್ಯುತ್ ದೀಪಾಲಂಕಾರದ ಮಂಟಪದಲ್ಲಿ ದೇವಿ ಹಾಗೂ ವೆಂಕಟೇಶ್ವರ ಮೂರ್ತಿಗಳನ್ನು ಇರಿಸಿ ಚಿಲ್ಕುಂದ ಮುಖ್ಯ ರಸ್ತೆ ಹಾಗೂ ಕಂಪ್ಲಾಪುರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕೇರಳದ ಚೆಂಡೆ, ಮಂಗಳವಾದ್ಯ ಮೇಳಗಳೊಂದಿಗೆ ರಾತ್ರಿಯಿಡೀ ಮೆರವಣಿಗೆ ಮಾಡಲಾಯಿತು.
ತಮಿಳುನಾಡಿನ ಶಿಲ್ಪಿ ರಾಜಕುಮಾರ್ ಅವರನ್ನು ದೇವಾಲಯ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ನೂರಾರು ಭಕ್ತಾದಿಗಳು ದೇವರಿಗೆ ಪೂಜೆ ಸಲ್ಲಿಸಿ ಧನ್ಯತೆ ಮೆರೆದರು. ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ನೆರವೇರಿತು. ಪ್ರಮುಖರಾದ ಗುಡ್ಡಪ್ಪ ವಿನಯ್, ಅರ್ಚಕರಾದ ಜಯರಾಂ, ಶ್ರೀನಿವಾಸ, ವಿನೋದ್, ನಾಗಣ್ಣ, ಕುಮಾರಾಚಾರ್ ಸೇರಿದಂತೆ ಸಾವಿರಾರು ಭಕ್ತರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net