ಶಿಕ್ಷಕರು ದೇಶ ಕಟ್ಟುವ ಸೇನಾನಿನಗಳು

ತಿ.ನರಸೀಪುರದ ಶ್ರೀನಿವಾಸ ಕನ್ವೆನ್ಷನ್ ಹಾಲ್‌ನಲ್ಲಿ ಮಂಗಳವಾರ ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆ ವತಿಯಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯನ್ನು ಶಾಸಕ ಡಾ. ಎಚ್.ಸಿ.ಮಹದೇವಪ್ಪ ಉದ್ಘಾಟಿಸಿದರು. ವಿವೇಕಾನಂದ, ಡಿ. ಉದಯಕುಮಾರ್, ಎಸ್.ಸಿ. ಶಿವಮೂರ್ತಿ, ಆರ್.ಚಲುವರಾಜು, ಕುಕ್ಕೂರು ಗಣೇಶ್, ಸೋಸಲೆ ನಾಗೇಶ, ಎಂ.ವಿ. ಶಿವಶಂಕರಮೂರ್ತಿ ಇದ್ದರು.
ತಿ.ನರಸೀಪುರದ ಶ್ರೀನಿವಾಸ ಕನ್ವೆನ್ಷನ್ ಹಾಲ್‌ನಲ್ಲಿ ಮಂಗಳವಾರ ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆ ವತಿಯಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯನ್ನು ಶಾಸಕ ಡಾ. ಎಚ್.ಸಿ.ಮಹದೇವಪ್ಪ ಉದ್ಘಾಟಿಸಿದರು. ವಿವೇಕಾನಂದ, ಡಿ. ಉದಯಕುಮಾರ್, ಎಸ್.ಸಿ. ಶಿವಮೂರ್ತಿ, ಆರ್.ಚಲುವರಾಜು, ಕುಕ್ಕೂರು ಗಣೇಶ್, ಸೋಸಲೆ ನಾಗೇಶ, ಎಂ.ವಿ. ಶಿವಶಂಕರಮೂರ್ತಿ ಇದ್ದರು.
Published on

ಮಾಜಿ ಸಚಿವ ಡಾ. ಎಚ್.ಸಿ.ಮಹದೇವಪ್ಪ ಬಣ್ಣನೆ

ತಿ.ನರಸೀಪುರ: ಶಿಕ್ಷಕರು ಸುಸಂಸ್ಕೃತ, ವೈಚಾರಿಕತೆ ಮತ್ತು ವೈಜ್ಞಾನಿಕತೆಯ ಸಮಾಜದ ಭಾರತವನ್ನು ಕಟ್ಟುವ ಸೇನಾನಿಗಳು ಎಂದು ಮಾಜಿ ಸಚಿವ ಡಾ. ಎಚ್.ಸಿ.ಮಹದೇವಪ್ಪ ಬಣ್ಣಿಸಿದರು.
ಪಟ್ಟಣದ ಹಳೇ ತಿರುಮಕೂಡಲು ಬಳಿಯಿರುವ ಶ್ರೀನಿವಾಸ ಕನ್ವೆನ್ಷನ್ ಹಾಲ್‌ನಲ್ಲಿ ಮಂಗಳವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಶಿಕ್ಷಕರ ದಿನಾಚರಣೆ ಸಮಿತಿ ಹಾಗೂ ಶಿಕ್ಷಕರ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ್ದ ತಾಲೂಕುಮಟ್ಟದ ಶಿಕ್ಷಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಶಿಕ್ಷಣ ಪ್ರತಿಯೊಬ್ಬರನ್ನೂ ಅಜ್ಞಾನದ ಕತ್ತಲಿನಿಂದ ಜ್ಞಾನದ ಬೆಳಕಿನೆಡೆಗೆ ಕೊಂಡೊಯ್ಯುಲಿದೆ ಎಂದರು.
ಅಜ್ಞಾನ ಮತ್ತು ಮೂಢನಂಬಿಕೆಗಳನ್ನು ತೊಡೆದು ವೈಚಾರಿಕ ನೆಲೆಗಟ್ಟಿನಲ್ಲಿ ಸಮಾಜವನ್ನು ಕಟ್ಟದೇ ಹೋದರೆ ಭವಿಷ್ಯದಲ್ಲಿ ಭಾರತ ಕತ್ತಲಿನ ದಿನಗಳನ್ನು ಎಣಿಸಲಿದೆ. ಈ ಗಂಭೀರತೆಯನ್ನು ಶಿಕ್ಷಕರು ಅರಿಯಬೇಕು. ಧರ್ಮ ಮತ್ತು ಜಾತಿ ಸಂಕೋಲೆಗೆ ಶಿಕ್ಷಣ ಸಿಲುಕಬಾರದು. ವೈಜ್ಞಾನಿಕ ಯುಗದಲ್ಲಿ ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿ ಮಕ್ಕಳನ್ನು ಅಣಿಗೊಳಿಸಬೇಕು ಎಂದು ಕರೆ ನೀಡಿದರು.
ದೇಶದಲ್ಲಿ ಸ್ವಾತಂತ್ರ ಪೂರ್ವದಲ್ಲಿ ಶೇ.10 ಇದ್ದ ಶಿಕ್ಷಣದ ಪ್ರಮಾಣ ಶೇ.76 ಆಗಿದೆ. ಕೌಶಲ ಆಧಾರಿತ ಶಿಕ್ಷಣ ಒಳಗೊಂಡಂತೆ ಭಾರತೀಯ ಶಿಕ್ಷಣ ನೀತಿ ಜಾರಿಯಲ್ಲಿದೆ. ಯುವ ಜನತೆಯಲ್ಲಿ ಶೇ.48 ಶಿಕ್ಷಣ ಪ್ರಮಾಣವಿದೆ. ದೇಶದ ಭವಿಷ್ಯವೇ ಯುವಕರ ಮೇಲೆ ಅಡಕವಾಗಿದೆ. ಪ್ರತಿಯೊಬ್ಬ ಮಗುವಿಗೆ ತಾಯಿಯೇ ಮೊದಲ ಗುರು. 1848ರಲ್ಲಿಯೇ ಸಾವಿತ್ರಿಬಾಯಿ ಫುಲೆ ಅವರು ಮನುವಾದ ವಿರೋಧವನ್ನು ಲೆಕ್ಕಿಸದೆ ಶಿಕ್ಷಣ ನೀಡಿ, ದೇಶದ ಮೊದಲ ಮಹಿಳಾ ಶಿಕ್ಷಕಿಯಾದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಶಿಕ್ಷಕರಾಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ವೃತ್ತಿಯ ಮೇಲೆ ವಿಶೇಷ ಗೌರವ ಇದ್ದುದ್ದರಿಂದ ಅವರ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸುವಂತೆ ಹೇಳಿದ್ದಾರೆ. ಉತ್ತಮ ಸಮಾಜವನ್ನು ಕಟ್ಟುವಲ್ಲಿ ಶಿಕ್ಷಣ ಹಾಗೂ ಶಿಕ್ಷಕರ ಜವಾಬ್ದಾರಿ ಮಹತ್ವದ್ದಾಗಿದೆ ಎಂದು ಡಾ. ಎಚ್.ಸಿಮಹದೇವಪ್ಪ ತಿಳಿಸಿದರು.
ವಿಧಾನಪರಿಷತ್ ಸದಸ್ಯ ವಿವೇಕಾನಂದ ಮಾತನಾಡಿ, ರಾಜ್ಯ ಹಾಗೂ ಕೇಂದ್ರ ಸರ್ಕಾರ ಶಿಕ್ಷಕರ ಮೇಲೆ ಸರ್ಕಾರಿ ಅನ್ಯ ಕಾರ್ಯಗಳ ಒತ್ತಡ ಏರುವುದನ್ನು ನಿಲ್ಲಿಸಬೇಕು. ಶಿಕ್ಷಣ ಕ್ಷೇತ್ರದಲ್ಲಿ ಮುಖ್ಯವಾಗಿ ಸೇವೆ ಸಲ್ಲಿಸುವ ಅವಕಾಶವನ್ನ ಕಲ್ಪಿಸಬೇಕು. ಈ ಬಗ್ಗೆ ಅಧಿವೇಶನಗಳಲ್ಲಿ ಶಾಸಕರು ಮತ್ತು ಸಂಸದರು ಧ್ವನಿ ಎತ್ತಬೇಕು. ಆ ಮೂಲಕ ಶಿಕ್ಷಕರ ಕಾರ್ಯಭಾರವನ್ನು ತಗ್ಗಿಸಬೇಕೆಂದು ತಿಳಿಸಿದರು.
ಬನ್ನೂರು ಪಟ್ಟಣದ ಸಮಾಜ ಸೇವಕ ಮಹೇಂದ್ರ ಸಿಂಗ್ ಕಾಳಪ್ಪ ಸೇರಿದಂತೆ ನಿವೃತ್ತ ಶಿಕ್ಷಕರು, ಜಿಲ್ಲಾ ಪ್ರಶಸ್ತಿ ಪುರಸ್ಕೃತರು ಹಾಗೂ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ತಾಲೂಕುಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಐದು ಶಾಲೆಗಳ ಮುಖ್ಯಶಿಕ್ಷಕರನ್ನು ಸನ್ಮಾನಿಸಲಾಯಿತು. ಸಾಹಿತಿ ಹಾಗೂ ಕತೆಗಾರ ಹನೂರು ಚನ್ನಪ್ಪ ಮುಖ್ಯ ಭಾಷಣ ಮಾಡಿದರು. ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಡಿ. ಉದಯ್ ಕುಮಾರ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿ.ಶಿವಮೂರ್ತಿ ಮಾತಾಡಿದರು.
ತಹಸೀಲ್ದಾರ್ ಟಿ.ಜಿ.ಸುರೇಶಾಚಾರ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ.ರಂಗಸ್ವಾಮಿ, ಶಿಕ್ಷಣ ಇಲಾಖೆಯ ಡಿವೈಟಿಸಿ ಶೋಭಾ ಸುರೇಶ್, ಪುರಸಭೆ ಮುಖ್ಯಾಧಿಕಾರಿ ಸಿ.ಶ್ರೀನಿವಾಸ್, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ನಾಗೇಶ್ ಗಂಗವಾಡಿ, ಸಿಆರ್‌ಪಿ ಸೋಸಲೆ ನಾಗೇಶ್, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಎಂ.ವಿ.ಶಿವಶಂಕರ್ ಮೂರ್ತಿ, ಶಿಕ್ಷಕರ ಸಂಘದ ನಿಕಟಪೂರ್ವ ಕಾರ್ಯದರ್ಶಿ ಕುಪ್ಯ ಪುಟ್ಟಸ್ವಾಮಿ, ಅಧ್ಯಕ್ಷ ಎ.ಗಜೇಂದ್ರ, ಮೈಮುಲ್ ಮಾಜಿ ಅಧ್ಯಕ್ಷ ಆರ್.ಚಲುವರಾಜು, ಜಿಪಂ ಮಾಜಿ ಸದಸ್ಯರಾದ ಎಸ್. ಎನ್.ಸಿದ್ಧಾರ್ಥ, ಹೊನ್ನನಾಯಕ, ಆಪ್ತ ಸಹಾಯಕ ಬಿ.ಬಸವರಾಜು, ತಾಪಂ ಮಾಜಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನಸ್ವಾಮಿ, ಮಾಜಿ ಸದಸ್ಯ ಕುಕ್ಕೂರು ಗಣೇಶ್, ಮುಖಂಡರಾದ ಸೋಸಲೆ ಮಹದೇವಸ್ವಾಮಿ, ಉಕ್ಕಲಗೆರೆ ಬಸವಣ್ಣ, ಮುನಾವರ್ ಪಾಷ, ಕೆ.ವಜ್ರೇಗೌಡ, ಕೆ.ಎಂ.ಮಧುಕುಮಾರ್, ಹೆಮ್ಮಿಗೆ ಶೇಷಾದ್ರಿ, ನರಸಿಂಹ ಮಾದನಾಯಕ ಹಾಗೂ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net