ಶಿಕ್ಷಣದೊಂದಿಗೆ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಿ

ಸುತ್ತೂರಿನ ಜೆಎಸ್‌ಎಸ್ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಗ್ರಾಜುಯೇಷನ್ ಡೇ ಆಚರಿಸಲಾಯಿತು. ಜಿ.ಎಲ್.ತ್ರಿಪುರಾಂತಕ, ಡಾ. ಎಚ್.ಎಂ.ಮಹೇಶ್, ಎಂ.ಆರ್.ರಾಜಶೇಖರಮೂರ್ತಿ, ಜಿ.ಶಿವಮಲ್ಲು, ಎಂ.ಜಿ.ಬಸವಣ್ಣ, ಜಿ.ಎಂ.ಷಡಕ್ಷರಿ, ಜಿ.ಶಿವಸ್ವಾಮಿ, ಪಿ. ಸುಶೀಲಾ ಇದ್ದರು.
ಸುತ್ತೂರಿನ ಜೆಎಸ್‌ಎಸ್ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಗ್ರಾಜುಯೇಷನ್ ಡೇ ಆಚರಿಸಲಾಯಿತು. ಜಿ.ಎಲ್.ತ್ರಿಪುರಾಂತಕ, ಡಾ. ಎಚ್.ಎಂ.ಮಹೇಶ್, ಎಂ.ಆರ್.ರಾಜಶೇಖರಮೂರ್ತಿ, ಜಿ.ಶಿವಮಲ್ಲು, ಎಂ.ಜಿ.ಬಸವಣ್ಣ, ಜಿ.ಎಂ.ಷಡಕ್ಷರಿ, ಜಿ.ಶಿವಸ್ವಾಮಿ, ಪಿ. ಸುಶೀಲಾ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜೆಎಸ್‌ಎಸ್ ಪೂರ್ವ ಪ್ರಾಥಮಿಕ ಶಾಲೆ
  • ಯುಕೆಜಿ ವಿದ್ಯಾರ್ಥಿಗಳಿಗಾಗಿ ಗ್ರಾಜುಯೇಷನ್ ಡೇ
ಸುತ್ತೂರು: ಇಲ್ಲಿನ ಜೆಎಸ್‌ಎಸ್ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಯುಕೆಜಿ ವಿದ್ಯಾರ್ಥಿಗಳಿಗಾಗಿ ಗ್ರಾಜುಯೇಷನ್ ಡೇ ಆಯೋಜಿಸಲಾಗಿತ್ತು.
ಜೆಎಸ್‌ಎಸ್ ಸಂಸ್ಥೆಗಳ ಸಂಯೋಜನಾಧಿಕಾರಿ ಜಿ.ಎಲ್.ತ್ರಿಪುರಾಂತಕ ಮಾತನಾಡಿ, ತಮ್ಮ ಮಕ್ಕಳು ವಿದ್ಯಾವಂತರಾಗಬೇಕೆಂಬ ಕನಸನ್ನು ಪಾಲಕರು ಹೊತ್ತಿರುತ್ತಾರೆ. ಮಕ್ಕಳಿಗೆ ಶಿಕ್ಷಣ ಕೊಡಿಸುವುದರ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಬೇಕು ಎಂದು ಸಲಹೆ ನೀಡಿದರು.
ಅಕ್ಷರ ಕಲಿಸಿ ಪದವೀಧರರನ್ನಾಗಿಸುವದರ ಜತೆಗೆ ಮಕ್ಕಳಿಗೆ ಹೊಂದಾಣಿಕೆಯಿಂದ ಬದುಕುವುದು, ಸೋತು ಬದುಕುವುದನ್ನು ಕಲಿಸಬೇಕು. ಒಳ್ಳೆಯ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರವನ್ನು ಕಲಿಸಿ ಎಂದು ಪಾಲಕರಿಗೆ ಕಿವಿಮಾತು ಹೇಳಿದರು.
ಜೆಎಸ್‌ಎಸ್ ಪ್ರೌಢಶಾಲೆ ಮುಖ್ಯ ಶಿಕ್ಷಕ ಜಿ.ಶಿವಮಲ್ಲು ಮಾತನಾಡಿ, ಮಕ್ಕಳ ಬೆಳವಣಿಗೆಯಲ್ಲಿ ಪಾಲಕರ ಪಾತ್ರ ಮಹತ್ವವಾದದ್ದು. ಮಕ್ಕಳಿಗೆ ಒಳ್ಳೆಯ ಸಂಸ್ಕೃತಿ, ಮಾಗದರ್ಶನ ನೀಡುವ ಮೂಲಕ ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸಬೇಕು ಎಂದು ಹೇಳಿದರು.
ಇದೇ ವೇಳೆ ವಿದ್ಯಾರ್ಥಿಗಳಿಗೆ ಗ್ರಾಜುಯೇಷನ್ ಪತ್ರಗಳನ್ನು ವಿತರಿಸಲಾಯಿತು. ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳು ಹಾಗೂ ಪಾಲಕರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳಾದ ಡಿಂಪನಾ, ಭೂಮಿ, ಥಾನ್ವಿತ, ಪ್ರೇಮ್‌ರಾಜ್, ವಿಶ್ವವಂದ್ಯಶೆಟ್ಟಿ, ಜ್ಞಾನ್ವಿತ ಶೆಟ್ಟಿ ಅನಿಸಿಕೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಕಾಲೇಜುಗಳ ಪ್ರಾಂಶುಪಾಲರಾದ ಡಾ.ಎಚ್.ಎಂ ಮಹೇಶ್, ಎಂ.ಆರ್.ರಾಜಶೇಖರಮೂರ್ತಿ, ಮುಖ್ಯ ಶಿಕ್ಷಕರಾದ ಎಂ.ಜಿ.ಬಸವಣ್ಣ, ಜಿ.ಎಂ.ಷಡಕ್ಷರಿ, ಜಿ.ಶಿವಸ್ವಾಮಿ, ನಿಲಯಪಾಲಕರಾದ ಪಿ.ಸುಶೀಲಾ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net