ಜಂತುಹುಳು ಮಾತ್ರೆ ಸೇವನೆ ಮಕ್ಕಳ ಬೆಳವಣಿಗೆಗೆ ಸಹಕಾರಿ

ಬೆಟ್ಟದಪುರ ಸಮೀಪದ ಚಪ್ಪರದಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಾಷ್ಟ್ರೀಯ ಜಂತು ಹುಳು ನಿವಾರಣೆ ದಿನ ಆಚರಣೆ ಹಮ್ಮಿಕೊಳ್ಳಲಾಗಿತ್ತು. ರವಿ, ಚೈತ್ರಾ, ರಚನಾ, ಮಹೇಶ್, ಮಂಜುನಾಥ್, ಆಶಾ, ರತ್ನಾ ಇದ್ದರು.
ಬೆಟ್ಟದಪುರ ಸಮೀಪದ ಚಪ್ಪರದಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಾಷ್ಟ್ರೀಯ ಜಂತು ಹುಳು ನಿವಾರಣೆ ದಿನ ಆಚರಣೆ ಹಮ್ಮಿಕೊಳ್ಳಲಾಗಿತ್ತು. ರವಿ, ಚೈತ್ರಾ, ರಚನಾ, ಮಹೇಶ್, ಮಂಜುನಾಥ್, ಆಶಾ, ರತ್ನಾ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • deworming pills
ಬೆಟ್ಟದಪುರ: ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಕುಂಠಿತವಾಗದಂತೆ ತಡೆಯಲು ಜಂತು ಹುಳು ಮಾತ್ರೆ ಸೇವನೆಯಿಂದ ಸಾಧ್ಯ ಎಂದು ಚಪ್ಪರದಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿ ಎಚ್.ಎಸ್.ರವಿ ತಿಳಿಸಿದರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಸಮೀಪದ ಚಪ್ಪರದಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಏರ್ಪಡಿಸಿದ್ದ ರಾಷ್ಟ್ರೀಯ ಜಂತು ಹುಳು ನಿವಾರಣೆ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಪೌಷ್ಟಿಕತೆ ಮತ್ತು ರಕ್ಷಹೀನತೆಯಿಂದ ಮಕ್ಕಳನ್ನು ರಕ್ಷಿಸಿಕೊಳ್ಳಲು ಜಂತುಹುಳು ನಿವಾರಣ ಮಾತ್ರೆಯಾದ ಆಲ್‌ಬೆಂಡಜೋಲ್ ಸೇವಿಸಬೇಕು. ಇದರೊಂದಿಗೆ ಮಕ್ಕಳ ಉಗುರುಗಳನ್ನು ಸ್ವಚ್ಛವಾಗಿ ಮತ್ತು ಚಿಕ್ಕದಾಗಿ ಇರಿಸಿಕೊಳ್ಳಬೇಕು. ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಚಪ್ಪರದಹಳ್ಳಿ ಶಾಲೆಯ ಮುಖ್ಯಶಿಕ್ಷಕ ಎಸ್.ಮಹೇಶ್, ಮಂಜುನಾಥ್, ಶಿಕ್ಷಕ ಅಶೋಕ್, ಆರೋಗ್ಯ ಸುರಕ್ಷಾಧಿಕಾರಿ ಯು.ಜಿ ಚೈತ್ರಾ, ಸಮುದಾಯ ಆರೋಗ್ಯಾಧಿಕಾರಿ ಜಿ.ಎಂ ರಚನಾ, ಅಂಗನವಾಡಿ ಕಾರ್ಯಕರ್ತೆಯರಾದ ಸಿ.ಕೆ. ಆಶಾ, ಎ.ಜೆ. ರತ್ನಾ, ಹೇಮಾವತಿ, ರೂಪಾ, ಜಯಂತಿ, ಆಶಾ ಕಾರ್ಯಕರ್ತೆಯರಾದ ರೇವತಿ, ದೇವಿರಮ್ಮ, ಗಿರಿಜಾ, ಆಶಾ, ಶಾಲಿನಿ, ಪುಟ್ಟಲಕ್ಷ್ಮೀ, ಸಿಬ್ಬಂದಿ ಗೀತಾ ಸೇರಿದಂತೆ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net