ಮೈಸೂರು ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆಯ ಡೀನ್ ದಾಕ್ಷಾಯಣಿ ಮಾತನಾಡಿ, ಚೆಲುವಾಂಬ ಆಸ್ಪತ್ರೆಯಲ್ಲಿ ಶಿಶು ವೈದ್ಯರು 6 ಸಂಖ್ಯೆ ಬೇಕಿದ್ದು, 5 ಹುದ್ದೆಗಳು ಖಾಲಿ ಇವೆ. ಶುಶ್ರೂಷಕರು 96 ಹುದ್ದೆಗಳು ಇದ್ದು, 59 ಕರ್ತವ್ಯ ನಿರ್ವಹಿಸುತ್ತಿದ್ದಾರೆ. 40 ಹುದ್ದೆಗಳು ಖಾಲಿ ಇವೆ. ಗ್ರೂಪ್ ಡಿ 16 ಹುದ್ದೆಗಳು ಇದ್ದು, 12 ಹುದ್ದೆಗಳು ಖಾಲಿ ಇವೆ. ಚೆಲುವಾಂಬ ಆಸ್ಪತ್ರೆಯಲ್ಲಿ ಹುದ್ದೆಗಳ ಕೊರತೆ ಇದೆ. ಜನವರಿಯಲ್ಲಿ 15, ಫೆಬ್ರವರಿಯಲ್ಲಿ 18, ಮಾರ್ಚ್‌ನಲ್ಲಿ 9 ಶಿಶು ಮರಣ ಸಂಭವಿಸಿವೆ ಎಂದು ಮಾಹಿತಿ ನೀಡಿದರು.