ಮುದ್ದಬೀರನಹುಂಡಿ ಡೇರಿಗೆ ಮಮತಾ ನಾಗರಾಜ್ ಅಧ್ಯಕ್ಷೆ

ತಿ.ನರಸೀಪುರ ಪಟ್ಟಣದ ಮುದ್ದಬೀರನಹುಂಡಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಮಮತಾ ನಾಗರಾಜ್, ಉಪಾಧ್ಯಕ್ಷರಾಗಿ ಸೋಮಣ್ಣ ಅವಿರೋಧವಾಗಿ ಆಯ್ಕೆಯಾದರು. ಎಚ್ ಮರಿಸ್ವಾಮಿ, ಮಹದೇವ, ಭದ್ರಾ, ಗುರುಸ್ವಾಮಿ, ಪಿ. ಮಹೇಶ್ ಇತರರಿದ್ದರು.
ತಿ.ನರಸೀಪುರ ಪಟ್ಟಣದ ಮುದ್ದಬೀರನಹುಂಡಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಮಮತಾ ನಾಗರಾಜ್, ಉಪಾಧ್ಯಕ್ಷರಾಗಿ ಸೋಮಣ್ಣ ಅವಿರೋಧವಾಗಿ ಆಯ್ಕೆಯಾದರು. ಎಚ್ ಮರಿಸ್ವಾಮಿ, ಮಹದೇವ, ಭದ್ರಾ, ಗುರುಸ್ವಾಮಿ, ಪಿ. ಮಹೇಶ್ ಇತರರಿದ್ದರು.
Published on
ತಿ.ನರಸೀಪುರ: ಮುದ್ದಬೀರನಹುಂಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಮಮತಾ ನಾಗರಾಜ್, ಉಪಾಧ್ಯಕ್ಷರಾಗಿ ಸೋಮಣ್ಣ (ಬುದ್ಧಿವಂತ) ಸೋಮವಾರ ಅವಿರೋಧವಾಗಿ ಆಯ್ಕೆಯಾದರು.
ಸಂಘದ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮಮತಾ ನಾಗರಾಜ್, ಉಪಾಧ್ಯಕ್ಷ ಸ್ಥಾನಕ್ಕೆ ಸೋಮಣ್ಣ ಅವರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಹಸೀನಾ ಅವಿರೋಧ ಆಯ್ಕೆಯನ್ನು ಘೋಷಿಸಿದರು. ಕಳೆದ ಆರು ವರ್ಷಗಳಿಂದ ಸ್ಥಗಿತಗೊಂಡಿದ್ದ ಡೇರಿಗೆ ಪುನಶ್ಚೇತನ ನೀಡಿದ್ದರಿಂದ ಚುನಾವಣೆ ನಡೆಯಿತು.
ನೂತನ ಅಧ್ಯಕ್ಷೆ ಮಮತಾ ನಾಗರಾಜ್ ಮಾತನಾಡಿ, ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅವರ ಸಹಕಾರದಿಂದ ನನಗೆ ಕೊಟ್ಟಿರುವ ಅವಕಾಶ ಸದುಪಯೋಗಪಡಿಸಿಕೊಂಡು ಸಹಕಾರ ಸಂಘದ ಅಭಿವೃದ್ಧಿಗೆ ಶಕ್ತಿಮೀರಿ ಪ್ರಯತ್ನಿಸುತ್ತೇನೆ ಎಂದ ಅವರು, ಈಗಾಗಲೇ ಸಚಿವರು ನೂತನ ಕಟ್ಟಡಕ್ಕೆ ಅನುದಾನ ಬಿಡುಗಡೆ ಮಾಡಿಕೊಡುವಂತೆ ಕೋರಿದರು.
ಸಂಘದ ಕಾರ್ಯದರ್ಶಿ ಪಿ.ಮಹೇಶ್ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಸ್ಥಗಿತಗೊಂಡಿದ್ದ ಡೇರಿಗೆ ಕಾಯಕಲ್ಪ ನೀಡಿ ಮುಖಂಡರ ನೇತೃತ್ವದಲ್ಲಿ ಚುನಾವಣೆ ನಡೆದಿದ್ದು, ಅವಕಾಶ ಕಲ್ಪಿಸಿದ್ದೇನೆ. ಸಂಘ ಅಭಿವೃದ್ಧಿ ಹೊಂದಲು ಗುಣಮಟ್ಟದ ಹಾಲು ಪೂರೈಕೆಯಾಗಬೇಕು. ಕಳಪೆ ಹಾಲಿನಿಂದ ಸಂಘವು ನಷ್ಟ ಅನಿಭವಿಸುವಂತಾಗ ಬಾರದು. ನೂತನ ಅಧ್ಯಕ್ಷರು ಜನ ಕೊಟ್ಟಿರುವ ಅಧಿಕಾರ ಬಳಸಿಕೊಂಡು ಸಂಘ ಉನ್ನತ ಸ್ಥಾನಕ್ಕೇರಲು ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಸಲಹೆ ನೀಡಿದರು.
ನಿರ್ದೇಶಕರಾದ ಎಚ್.ಮರಿಸ್ವಾಮಿ, ಮಹದೇವ, ಭದ್ರಾ, ಗುರುಸ್ವಾಮಿ, ಅಶ್ವಥ್, ಬಣ್ಣ ಮಾದೇಗೌಡ, ಶಂಕ್ರೇಗೌಡ, ಕೃಷ್ಣ, ಲಕ್ಷ್ಮೀಚಿಕ್ಕಮಾದ, ಕೆಡಿಪಿ ಸದಸ್ಯ ಅಮಾಸೆ ಲಿಂಗರಾಜು, ಜಿಲ್ಲಾ ಕಾರ್ಮಿಕರ ವಿಭಾಗದ ಅಧ್ಯಕ್ಷ ಬಣ್ಣ ಬಸವರಾಜು, ಪಿಎಸಿಸಿಎಸ್ ಅಧ್ಯಕ್ಷ ಮನ್ನೆಹುಂಡಿ ಶೇಖರ್, ನಿರ್ದೇಶಕ ಕೂಡ್ಲೂರು ದೇವರಾಜ್, ಮುಖಂಡ ಮರದ ವ್ಯಾಪಾರಿ ನಾಗರಾಜ್, ಭತ್ತದ ವ್ಯಾಪಾರಿ ಮಹೇಶ್, ಸಿಡಿಒ ಪ್ರೇಮಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net