ಸಮಸ್ಯೆ ಲೆಕ್ಕಿಸದೆ ರೈತರಿಗೆ ಬೆಳೆ ಸಾಲ ವಿತರಣೆ

ತಿ.ನರಸೀಪುರ ತಾಲೂಕಿನ ಬಿಲಿಗೆರೆಹುಂಡಿ ಗ್ರಾಮದಲ್ಲಿರುವ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಆಯೋಜಿಸಿದ್ದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಗಣ್ಯರು ಉದ್ಘಾಟಿಸಿದರು. ಎಂ.ಶೇಖರ್, ಚಿನ್ನಬುದ್ಧಿ, ಎಂ.ಎಸ್.ಮಹದೇವಸ್ವಾಮಿ, ಬಸವ, ಬಸವಣ್ಣ ಎಂ.ವೆಂಕಟೇಶ್, ರಾಜೀವ್, ಎಸ್.ವಸಂತ, ಗೌರಮ್ಮಣಿ ಇದ್ದರು.
ತಿ.ನರಸೀಪುರ ತಾಲೂಕಿನ ಬಿಲಿಗೆರೆಹುಂಡಿ ಗ್ರಾಮದಲ್ಲಿರುವ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಆಯೋಜಿಸಿದ್ದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಗಣ್ಯರು ಉದ್ಘಾಟಿಸಿದರು. ಎಂ.ಶೇಖರ್, ಚಿನ್ನಬುದ್ಧಿ, ಎಂ.ಎಸ್.ಮಹದೇವಸ್ವಾಮಿ, ಬಸವ, ಬಸವಣ್ಣ ಎಂ.ವೆಂಕಟೇಶ್, ರಾಜೀವ್, ಎಸ್.ವಸಂತ, ಗೌರಮ್ಮಣಿ ಇದ್ದರು.
Published on
ತಿ.ನರಸೀಪುರ: ಸಹಕಾರ ಸಂಘ ಸ್ಥಾಪನೆಯಾಗಿ 2 ವರ್ಷಗಳ ಅವಧಿಯಲ್ಲಿ ಯಾವುದೇ ಸಮಸ್ಯೆ ಎದುರಾದರೂ ನಿಭಾಯಿಸಿ, ರೈತರಿಗೆ ಬೆಳೆ ಸಾಲ ನೀಡುತ್ತಿದ್ದೇವೆ ಎಂದು ಬಿಲಿಗೆರೆಹುಂಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಶೇಖರ್ ತಿಳಿಸಿದರು.
ತಾಲೂಕಿನ ಬಿಲಿಗೆರೆಹುಂಡಿ ಗ್ರಾಮದಲ್ಲಿರುವ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾವು ಈಗಾಗಲೇ ಕಳೆದೆರಡು ವರ್ಷಗಳಲ್ಲಿ 100 ರೈತರಿಗೆ ಸಂಘದಿಂದ ಸಾಲ ಸೌಲಭ್ಯ ನೀಡಿದ್ದೇವೆ ಎಂದರು.
ವರುಣ ವಿಧಾನಸಭಾ ಕ್ಷೇತ್ರದ ಶಾಸಕರೂ ಆದ ಮಾಜಿ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಹಕಾರ ಸಂಘಕ್ಕೆ ಹಣ ಬಿಡುಗಡೆ ಮಾಡಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಭರವಸೆ ನೀಡಿದ್ದಾರೆ. ಕೆಲವರು ಸಂಘದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ರೈತರು ಯಾವುದಕ್ಕೂ ಕಿವಿಕೊಡಬಾರದು. ಸಂಘ ಸುಭದ್ರವಾಗಿದೆ. ರೈತರು ಮುಕ್ತವಾಗಿ ಸಂಘಕ್ಕೆ ಆಗಮಿಸಿ ಸಾಲ ಪಡೆದು ಸಕಾಲಕ್ಕೆ ಮರುಪಾವತಿಸಿ ಸಂಘದ ಅಭಿವೃದ್ಧಿಗೆ ಸಹರಿಸಬೇಕು ಎಂದು ಮನವಿ ಮಾಡಿದರು.
ಸಂಘದ ಮುಖ್ಯ ಕಾರ್ಯನಿರ್ವಾಹಕ ಸಿದ್ದರಾಜು ಮಾತನಾಡಿ, ನಾವು ಈಗಾಗಲೇ ರೈತರಿಗೆ ಸಂಘದಿಂದ 26 ಲಕ್ಷ ರೂ.ಗೂ ಹೆಚ್ಚು ಸಾಲ ನೀಡಿದ್ದೇವೆ. ಮುಂದೆಯೂ ರೈತರು ಸಂಘದಿಂದ ಕೃಷಿ ಸಾಲ ಪಡೆಯಬಹುದು. ಸಂಘ ಉತ್ತಮವಾಗಿ ನಡೆದುಕೊಂಡು ಹೋಗುತ್ತಿದೆ ಎಂದರು.
ಸಹಕಾರ ಸಂಘಗಳ ಮೇಲ್ವಿಚಾರಕ ಎಂ.ಎನ್.ಶೇಖರ್ ಮಾತನಾಡಿ, ಅಧಿಕಾರಿಯಾಗಿ ನಾನು ಸಹಕಾರ ಸಂಘಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ಸಂಘದಲ್ಲಿ ಯಾವುದೇ ಸಮಸ್ಯೆ ಇದ್ದರೂ ಸರಿಪಡಿಸಿಕೊಂಡು ರೈತರು ಸಹಕಾರ ಸಂಘದಲ್ಲಿ ಸಾಲ ಪಡೆದು ಸಕಾಲಕ್ಕೆ ಮರುಪಾವತಿಸುವ ಮೂಲಕ ಸಹಕಾರ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು. ತಾಲೂಕಿನಲ್ಲಿ 31 ಸಹಕಾರ ಸಂಘಗಳಿದ್ದು, ಯಾವುದೇ ತಾರತಮ್ಯ ಮಾಡದೆ ಎಲ್ಲ ಸಂಘಗಳನ್ನು ಒಂದೇ ರೀತಿ ನೋಡಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಉಪಾಧ್ಯಕ್ಷ ಚಿನ್ನಬುದ್ಧಿ, ನಿರ್ದೇಶಕರಾದ ಎಂ.ಎಸ್.ಮಹದೇವಸ್ವಾಮಿ, ಬಸವ, ಬಸವಣ್ಣ ಎಂ.ವೆಂಕಟೇಶ್, ರಾಜೀವ್, ಎಸ್.ವಸಂತ, ಗೌರಮ್ಮಣಿ, ಕೆ.ಎಂ.ದೇವರಾಜು, ಎನ್.ಅಶ್ವಿನ್, ನಾಗರಾಜು, ಮಹದೇವ, ಡೇರಿ ಅಧ್ಯಕ್ಷ ಮಹದೇವಸ್ವಾಮಿ, ಮಾಜಿ ಅಧ್ಯಕ್ಷ ಮಹದೇವ, ನಂಜುಂಡೇಗೌಡ, ನಂಜುಂಡಸ್ವಾಮಿ, ಕುಮಾರ, ಚಂದ್ರ, ಚಿನ್ನಸ್ವಾಮಿ, ಮಧುಕುಮಾರ್, ಮಹದೇವಸ್ವಾಮಿ ಹಾಗೂ ರೈತ ಮುಖಂಡರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net