ಕಾಲೇಜಿಗೆ ಪ್ರವೇಶ ದ್ವಾರ ನಿರ್ಮಿಸಿಕೊಟ್ಟ ಹಳೇ ವಿದ್ಯಾರ್ಥಿ

ತಿ.ನರಸೀಪುರ ತಾಲೂಕಿನ ಬನ್ನೂರು ಪಟ್ಟಣದ ಸಂತೇಮಾಳದ ಬಳಿಯಿರುವ ಸರ್ಕಾರಿ ಪದವಿ ಕಾಲೇಜು ಮುಂಭಾಗ ಸ್ವಂತ ಹಣದಿಂದ ನಿರ್ಮಿಸಿದ ನೂತನ ಆಕರ್ಷಕ ಪ್ರವೇಶದ್ವಾರವನ್ನು ಮೈಮುಲ್ ಅಧ್ಯಕ್ಷ ಆರ್.ಚಲುವರಾಜು ಉದ್ಘಾಟಿಸಿದರು. ಎಂ.ಬಿ.ನಂಜುಂಡಸ್ವಾಮಿ, ಬಿ.ಚನ್ನಕೇಶವ, ಪ್ರಭಾಕರ್, ನಂದೀಶ್, ಅಶೋಕ್ ಗೌಡ ಇತರರಿದ್ದರು.
ತಿ.ನರಸೀಪುರ ತಾಲೂಕಿನ ಬನ್ನೂರು ಪಟ್ಟಣದ ಸಂತೇಮಾಳದ ಬಳಿಯಿರುವ ಸರ್ಕಾರಿ ಪದವಿ ಕಾಲೇಜು ಮುಂಭಾಗ ಸ್ವಂತ ಹಣದಿಂದ ನಿರ್ಮಿಸಿದ ನೂತನ ಆಕರ್ಷಕ ಪ್ರವೇಶದ್ವಾರವನ್ನು ಮೈಮುಲ್ ಅಧ್ಯಕ್ಷ ಆರ್.ಚಲುವರಾಜು ಉದ್ಘಾಟಿಸಿದರು. ಎಂ.ಬಿ.ನಂಜುಂಡಸ್ವಾಮಿ, ಬಿ.ಚನ್ನಕೇಶವ, ಪ್ರಭಾಕರ್, ನಂದೀಶ್, ಅಶೋಕ್ ಗೌಡ ಇತರರಿದ್ದರು.
Published on
ತಿ.ನರಸೀಪುರ: ಮೈಮುಲ್ ಮಾಜಿ ಅಧ್ಯಕ್ಷ ಆರ್.ಚೆಲುವರಾಜು ಅವರು ವಿದ್ಯಾಭ್ಯಾಸ ಮಾಡಿದ ತಾಲೂಕಿನ ಬನ್ನೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 7 ಲಕ್ಷ ರೂ.ವೆಚ್ಚದಲ್ಲಿ ಪ್ರವೇಶ ದ್ವಾರ ನಿರ್ಮಿಸಿಕೊಟ್ಟು ಕೃತಜ್ಞತೆ ಸಲ್ಲಿಸಿದ್ದಾರೆ.
ಕೆಲ ವಾರಗಳ ಹಿಂದೆ ಕಾಲೇಜು ಆವರಣದಲ್ಲಿ ನೂತನ ಪ್ರವೇಶ ದ್ವಾರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗಿತ್ತು. ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ಆರ್.ಚೆಲುವರಾಜು ಅವರು ನೂತನ ಆಕರ್ಷಕ ಪ್ರವೇಶದ್ವಾರವನ್ನು ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿ, ಹಳೇ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹಾಜರಿದ್ದು, ಶಿಕ್ಷಣ ಸಂಸ್ಥೆ ಅಭಿವೃದ್ಧಿಗೆ ನೀಡಿದ ಮಹತ್ವದ ಕೊಡುಗೆ ಗುರುತಿಸಿ ಆರ್.ಚೆಲುವರಾಜು ಅವರನ್ನು ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಆರ್.ಚೆಲುವರಾಜು, ಜೀವನದಲ್ಲಿ ಸಾಧನೆ ಮಾಡಲು ಉತ್ತಮ ಶಿಕ್ಷಣವೇ ಭದ್ರ ಬುನಾದಿಯಾಗಿದೆ. ಆ ಶಿಕ್ಷಣ ನೀಡಿದ ಶಾಲೆ ಅಥವಾ ಕಾಲೇಜನ್ನು ಎಂದಿಗೂ ಮರೆಯಬಾರದು. ನಾನು ಇಂದು ಈ ಮಟ್ಟಕ್ಕೆ ಬೆಳೆಯಲು ಈ ಕಾಲೇಜು ನೀಡಿದ ಶಿಕ್ಷಣ ಮತ್ತು ಶಿಕ್ಷಕರ ಮಾರ್ಗದರ್ಶನವೇ ಪ್ರಮುಖ ಕಾರಣ. ಆದ್ದರಿಂದ ಈ ಶಿಕ್ಷಣ ಸಂಸ್ಥೆಗೆ ನನ್ನ ಕೃತಜ್ಞತೆಯ ಸಂಕೇತವಾಗಿ ಮುಖ್ಯ ಪ್ರವೇಶದ್ವಾರ ನಿರ್ಮಿಸಿ ಕೊಡುವ ಆವಕಾಶ ದೊರೆತಿರುವುದು ನನಗೆ ಅತ್ಯಂತ ಸಂತಸದ ವಿಷಯವಾಗಿದೆ ಎಂದರು.
ಇಂದು ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ಗ್ರಾಮೀಣ ಭಾಗದ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇಂತಹ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿ ಕೇವಲ ಸರ್ಕಾರದ ಜವಾಬ್ದಾರಿಯಷ್ಟೇ ಅಲ್ಲ, ಇಲ್ಲಿ ವಿದ್ಯಾಭ್ಯಾಸ ಮಾಡಿ ಸಮಾಜದಲ್ಲಿ ಉತ್ತಮ ಸ್ಥಾನ ಪಡೆದಿರುವ ಹಳೇ ವಿದ್ಯಾರ್ಥಿಗಳ ಸಾಮಾಜಿಕ ಹೊಣೆಗಾರಿಕೆಯೂ ಆಗಿದೆ. ಪ್ರತಿಯೊಬ್ಬ ಹಳೇ ವಿದ್ಯಾರ್ಥಿ ತನ್ನ ಸಾಮರ್ಥ್ಯಕ್ಕೆ ಅನುಗುಣವಾಗಿ ಶಾಲೆ ಆಥವಾ ಕಾಲೇಜಿನ ಅಭಿವೃದ್ಧಿಗೆ ಕೈಜೋಡಿಸಿದರೆ ಸರ್ಕಾರಿ ಶಿಕ್ಷಣ ಸಂಸ್ಥೆಗಳ ಮೂಲಸೌಕರ್ಯ ಇನ್ನಷ್ಟು ಉತ್ತಮಗೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟರು.
ಮೈಮುಲ್ ಮಾಜಿ ನಿರ್ದೇಶಕ ಕೇತುಪುರ ಪ್ರಭಾಕರ್, ಗುತ್ತಿಗೆದಾರ ಬಸವನಹಳ್ಳಿ ಮಹೇಂದ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಚನ್ನಕೇಶವ, ಯಾಚನಹಳ್ಳಿ ಅಶೋಕ್, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಬಿ.ಸಿ.ನಂದೀಶ್, ಪುರಸಭಾ ಮಾಜಿ ಸದಸ್ಯ ಮೂರ್ತಿ, ಪ್ರಥಮ ದರ್ಜೆ ಗುತ್ತಿಗೆದಾರ ಎ.ಎನ್.ಸ್ವಾಮಿ, ಕೆ.ಎಂ.ಮಧುಕುಮಾರ್, ಪ್ರಾಂಶುಪಾಲ ಎಂ.ಬಿ.ನಂಜುಂಡಸ್ವಾಮಿ, ಮುಖಂಡರಾದ ಅಶೋಕ್, ಮಧುಕುಮಾರ್, ಕೃಷ್ಣೇಗೌಡ, ನಾಗೇಶ್, ರಾಮಲಿಂಗೇಗೌಡ, ಮಹೇಂದ್ರ, ಸಂತೋಷ್, ಉಮೇಶ್, ಪ್ರಭಾಕರ್, ಉಕ್ಕಲಗೆರೆ ಬಸವಣ್ಣ, ಲೋಕೇಶ್, ಮೂರ್ತಿ, ಗೂಳೇಗೌಡ, ಮಹೇಶ್, ಸುನಿಲ್, ಮರೀಗೌಡ, ಮಂಜು ಬಾಂಬೆ, ದೇವರಾಜು, ಅಬ್ಬಯ್ಯನ ಮಗ ಕೃಷ್ಣ, ರಂಜಿತಾ, ಪುಟ್ಟರಾಜು, ಮಲಿಯೂರು ದೊಳ್ಳಯ್ಯ, ಮನು, ಯಡಹಳ್ಳಿ ನಾಗೇಶ್, ದೊಡ್ಡಸ್ವಾಮಿ, ಕುನ್ನಯ್ಯ, ಮಾದೇವು, ರಾಮಕೃಷ್ಣ, ಲೋಕೇಶ್, ಡೈರಿ ನಿಂಗರಾಜು, ಸಕ್ಕರೆ ನಾಗರಾಜ್, ಪುಟ್ಟಸ್ವಾಮಿ, ರೆಡ್ಡಿ, ಅತ್ತಹಳ್ಳಿ ಲೋಕೇಶ್, ಭಾಸ್ಕರ್ ಹಾಗೂ ಶಿಕ್ಷಕರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net