ದೇಶದಲ್ಲಿ ಸುಸ್ಥಿರ ಅಭಿವೃದ್ಧಿ ಮುಖ್ಯ:ಪ್ರಾಧ್ಯಾಪಕ ಪ್ರೊ.ರವಿ ಭಂಡಾರಿ ಅಭಿಮತ

ಅರ್ಥಶಾಸ್ತ್ರ ಮತ್ತು ಸಹಕಾರ ವಿಭಾಗದಿಂದ ಮಾನಸಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಎಂ.ಕೆ.ಸವಿತಾ, ಪ್ರೊ.ರವಿ ಭಂಡಾರಿ, ಪ್ರೊ.ನವೀತಾ ತಿಮ್ಮಯ್ಯ, ಡಾ.ಎಂ.ಮಹೇಶ,ಡಾ.ಎಂ.ವಿ ದಿನೇಶ್ ಇದ್ದರು.
ಅರ್ಥಶಾಸ್ತ್ರ ಮತ್ತು ಸಹಕಾರ ವಿಭಾಗದಿಂದ ಮಾನಸಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಎಂ.ಕೆ.ಸವಿತಾ, ಪ್ರೊ.ರವಿ ಭಂಡಾರಿ, ಪ್ರೊ.ನವೀತಾ ತಿಮ್ಮಯ್ಯ, ಡಾ.ಎಂ.ಮಹೇಶ,ಡಾ.ಎಂ.ವಿ ದಿನೇಶ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸುಸ್ಥಿರ ಅಭಿವೃದ್ಧಿ ಗುರಿಗಳು ಕೇವಲ ಕನಸಾಗಲಿದೆ
  • ದೇಶ ಬೆಳವಣಿಗೆಗೆ ಪರಿಸರದ ನಡುವಿನ ಸಂಬಂಧವನ್ನು ಉತ್ತಮವಾಗಿಟ್ಟುಕೊಂಡಿರಬೇಕು
ಮೈಸೂರು:ಯಾವುದೇ ಒಂದು ದೇಶ ಅಭಿವೃದ್ಧಿ ಕಾಣಬೇಕಾದರೆ ಕೇವಲ ಆರ್ಥಿಕವಾಗಿ ಮುಂದುವರಿದರೆ ಸಾಲದು. ಸುಸ್ಥಿರವಾಗಿ ಅಭಿವೃದ್ಧಿ ಕಂಡಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಮೈಸೂರು ವಿಶ್ವವಿದ್ಯಾಲಯ ಅರ್ಥಶಾಸ್ತ್ರ ಮತ್ತು ಸಹಕಾರ ವಿಭಾಗ ಸಂದರ್ಶಕ ಪ್ರಾಧ್ಯಾಪಕ ಪ್ರೊ.ರವಿ ಭಂಡಾರಿ ಹೇಳಿದರು.
ಮಾನಸಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಅರ್ಥಶಾಸ್ತ್ರ ಮತ್ತು ಸಹಕಾರ ವಿಭಾಗದಿಂದ ಆಯೋಜಿಸಿದ್ದ ಸುಸ್ಥಿರ ಅಭಿವೃದ್ಧಿ ಗುರಿ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಪ್ರಸ್ತುತ ದೇಶಗಳು ಎದುರಿಸುತ್ತಿರುವ ಆರ್ಥಿಕ ಅಡೆತಡೆಗಳು ಮತ್ತು ಸ್ಥಿತಿಗತಿಗಳನ್ನು ಗಮನಿಸಿದರೆ, ಸುಸ್ಥಿರ ಅಭಿವೃದ್ಧಿ ಗುರಿಗಳು ಕೇವಲ ಕನಸಾಗಲಿದೆ ಎಂಬ ಪ್ರಶ್ನೆ ಕಾಡುತ್ತಿದೆ ಎಂದು ಆತಂಕವ್ಯಕ್ತಪಡಿಸಿದರು.
ಜಗತ್ತು ಇಂದು ಸಾಕಷ್ಟು ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಆರ್ಥಿಕತೆ, ಪರಿಸರ, ಸಂಪನ್ಮೂಲ, ಇಂಧನ ಮತ್ತು ಮಿಲಿಟರಿ ಬಿಕ್ಕಟ್ಟುಗಳನ್ನು ಗಮನಿಸಿದರೆ, ದೇಶಗಳ ಸುಸ್ಥಿರ ಅಭಿವೃದ್ಧಿಯಲ್ಲಿ ಇವೆಲ್ಲ ಪ್ರಮುಖ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು.
ದೇಶ ಬೆಳವಣಿಗೆಗೆ ಪರಿಸರದ ನಡುವಿನ ಸಂಬಂಧವನ್ನು ಉತ್ತಮವಾಗಿಟ್ಟುಕೊಂಡಿರಬೇಕು. ಸಂಪನ್ಮೂಲಗಳ ದುರುಪಯೋಗದಿಂದ ಮಾಲಿನ್ಯ ಹೆಚ್ಚುತಿದ್ದು, ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಸುಸ್ಥಿರ ಅಭಿವೃದ್ಧಿ ಅತ್ಯಗತ್ಯ ಎಂದರು.
ಮೈಸೂರು ವಿಶ್ವವಿದ್ಯಾಲಯ ಕುಲಸಚಿವೆ ಎಂ.ಕೆ.ಸವಿತಾ ಮಾತನಾಡಿ, ನಮ್ಮ ಭವಿಷ್ಯವನ್ನು ಉತ್ತಮವಾಗಿ ಕಟ್ಟಿಕೊಳ್ಳಬೇಕಾದರೆ, ಹೆಚ್ಚಿನ ಜ್ಞಾನಾರ್ಜನೆ ಅತ್ಯವಶ್ಯಕ. ಅತ್ಯಾಧುನಿಕ ಕಾಲದಲ್ಲಿ ಪ್ರತಿನಿತ್ಯ ಬದಲಾವಣೆಗೆ ಒಗ್ಗಿಕೊಳ್ಳಬೇಕಿದೆ. ತಂತ್ರಜ್ಞಾನವನ್ನು ಹೆಚ್ಚು ಸಕಾರಾತ್ಮಕವಾಗಿ ಬಳಸಿಕೊಳ್ಳಬೇಕಿದೆ ಎಂದರು.
ಅಂಕಗಳಿಂದ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಕೌಶಲಗಳು, ಜ್ಞಾನ ಅತ್ಯಂತ ಮುಖ್ಯವಾಗಿದೆ. ವಿದ್ಯಾರ್ಥಿ ದೆಸೆಯಲ್ಲಿಯೇ ಕಲಿಕೆ ಹೆಚ್ಚು ಒತ್ತು ನೀಡಬೇಕಿದೆ. ಆದರೆ ಸಾಮಾಜಿಕ ಮಾಧ್ಯಮಗಳ ಗೀಳಿಗೆ ಇವತ್ತಿನ ಯುವ ಜನಾಂಗ ಜೋತು ಬಿದ್ದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಅರ್ಥಶಾಸ್ತ್ರ ಮತ್ತು ಸಹಕಾರ ವಿಭಾಗ ಅಧ್ಯಕ್ಷರು ಪ್ರೊ.ನವೀತಾ ತಿಮ್ಮಯ್ಯ, ಹಿರಿಯ ಪ್ರಾಧ್ಯಾಪಕ ಡಾ.ಎಂ.ಮಹೇಶ, ಪ್ರಾಧ್ಯಾಪಕ ಡಾ.ಎಂ.ವಿ. ದಿನೇಶ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net