ಪರಿಸರ ಸಂರಕ್ಷಣೆಗೆ ವಿದ್ಯಾರ್ಥಿಗಳಿಂದ ಜಾಥಾ

ತಿ.ನರಸೀಪುರ ತಾಲೂಕಿನ ತಲಕಾಡು ಪಟ್ಟಣದಲ್ಲಿ ಎನ್.ಆರ್.ಪಟೇಲ್ ಶಾಲೆಯ ವಿದ್ಯಾರ್ಥಿಗಳು ಪರಿಸರ ದಿನಾಚರಣೆ ಪ್ರಯುಕ್ತ ಜಾಗೃತಿ ಜಾಥಾ ನಡೆಸಿದರು.
ತಿ.ನರಸೀಪುರ ತಾಲೂಕಿನ ತಲಕಾಡು ಪಟ್ಟಣದಲ್ಲಿ ಎನ್.ಆರ್.ಪಟೇಲ್ ಶಾಲೆಯ ವಿದ್ಯಾರ್ಥಿಗಳು ಪರಿಸರ ದಿನಾಚರಣೆ ಪ್ರಯುಕ್ತ ಜಾಗೃತಿ ಜಾಥಾ ನಡೆಸಿದರು.
Published on
ತಿ.ನರಸೀಪುರ : ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ತಾಲೂಕಿನ ತಲಕಾಡು ಪಟ್ಟಣದಲ್ಲಿ ಇತ್ತೀಚೆಗೆ ಎನ್.ಆರ್.ಪಟೇಲ್ ಶಾಲೆಯ ವಿದ್ಯಾರ್ಥಿಗಳು ಜಾಥಾ ನಡೆಸುವ ಮೂಲಕ ಪರಿಸರ ಸಂರಕ್ಷಣೆ ಕುರಿತು ಜನರಲ್ಲಿ ಅರಿವು ಮೂಡಿಸಿದರು.

ಸಸಿ ನೆಟ್ಟು ನೀರೆರೆದ ಬಳಿಕ ಶಾಲಾವರಣದಿಂದ ಮೆರವಣಿಗೆ ವಿಧ್ಯುಕ್ತವಾಗಿ ಆರಂಭಗೊಂಡಿತು. ಪಟ್ಟಣದ ಹೊಸ ಬೀದಿ ವೃತ್ತದ ವರೆಗೂ ಹೆಜ್ಜೆಹಾಕಿದ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ ಕುರಿತಾದ ಘೋಷಣೆ ಕೂಗುವ ಮೂಲಕ ಸಾರ್ವಜನಿಕರ ಗಮನ ಸೆಳೆದರು. ವಿವಿಧ ದ್ವೇಷ ಭೂಷಣ ತೊಟ್ಟಿದ್ದ ಕೆಲವು ವಿದ್ಯಾರ್ಥಿಗಳು ಪರಿಸರ ರಕ್ಷಣೆ ಕುರಿತು ಬೀದಿ ನಾಟಕ ಪ್ರದರ್ಶಿಸಿದರು. ಬಳಿಕ ನೂರಾರು ಜನರಿಗೆ ಉಚಿತವಾಗಿ ಸಸಿ ವಿತರಿಸಲಾಯಿತು.
ತಲಕಾಡು ಪೊಲೀಸ್ ಠಾಣೆ ಎಎಸ್‌ಐ ನಾಗೇಂದ್ರ ಮೂರ್ತಿ ಮಾತನಾಡಿ, ಶಾಲೆ ವಿದ್ಯಾರ್ಥಿಗಳು ಪರಿಸರದ ಅರಿವು ಮೂಡಿಸುತ್ತಿರುವ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಾಥಾದಲ್ಲಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎನ್.ಆರ್.ಅಶೋಕ್ ಪಟೇಲ್, ಮುಖ್ಯ ಶಿಕ್ಷಕಿ ಭಾರತೀ ಶಂಕರ್, ಸಹ ಶಿಕ್ಷಕರಾದ ಶ್ವೇತಾ, ಶಿಲ್ಪಾ, ಕಿರಣ್ ಕುಮಾರ್, ಉಷಾ, ರಮ್ಯಾ, ಸಂಗೀತಾ, ಮಹೇಶ್, ಅನು, ಸಿಂಧು, ಸೋನು, ತೇಜಸ್ವಿನಿ, ಕೀರ್ತಿ, ಪವಿತ್ರಾ, ಗೀತಾಮಣಿ , ಪುಷ್ಪಲತಾ, ಭಾನುಪ್ರಿಯಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net