ಕಾವಾ ಕಾಲೇಜಿಗೆ ವಿದ್ಯಾರ್ಥಿಗಳ ಪ್ರವೇಶಾತಿ ಕುಂಠಿತ

ಮೈಸೂರಿನ ಕಾವಾದಲ್ಲಿ ಭಾನುವಾರ ಹಳೆಯ ವಿದ್ಯಾರ್ಥಿಗಳಿಂದ ಬೃಹತ್ ಕಲಾಕೃತಿ ಅನಾವರಣಗೊಳಿಸಲಾಯಿತು. ಎ.ದೇವರಾಜು, ನಿರ್ಮಲ ಮಠಪತಿ,  ಮಂಜುನಾಥ್,  ಎಸ್.ಆರ್.ಮಧುಸೂದನ್,  ಸೂರ್ಯ ಇನ್ನಿತರರಿದ್ದರು.
ಮೈಸೂರಿನ ಕಾವಾದಲ್ಲಿ ಭಾನುವಾರ ಹಳೆಯ ವಿದ್ಯಾರ್ಥಿಗಳಿಂದ ಬೃಹತ್ ಕಲಾಕೃತಿ ಅನಾವರಣಗೊಳಿಸಲಾಯಿತು. ಎ.ದೇವರಾಜು, ನಿರ್ಮಲ ಮಠಪತಿ, ಮಂಜುನಾಥ್, ಎಸ್.ಆರ್.ಮಧುಸೂದನ್, ಸೂರ್ಯ ಇನ್ನಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡೀನ್ ಎ.ದೇವರಾಜು ಆತಂಕ
  • ಕಾವಾ ಹಿರಿಯ ವಿದ್ಯಾರ್ಥಿಗಳ ಪುನರ್ಮಿಲನ ಕಾರ್ಯಕ್ರಮ

ಮೈಸೂರು: 

ಕಾವಾ ಹಳೇ ವಿದ್ಯಾರ್ಥಿಗಳ ಸಂಘದ ವತಿಯಿಂದ ಸಿದ್ಧಾರ್ಥನಗರದಲ್ಲಿರುವ ಚಾಮರಾಜೇಂದ್ರ ದೃಶ್ಯಕಲಾ ಸರ್ಕಾರಿ ಕಾಲೇಜಿನಲ್ಲಿ ಕಾವಾ ಹಿರಿಯ ವಿದ್ಯಾರ್ಥಿಗಳ ಪುನರ್ಮಿಲನ ಕಾರ್ಯಕ್ರಮವನ್ನು ಭಾನುವಾರ ಆಯೋಜಿಸಲಾಗಿತ್ತು.

ಕಾವಾ ಆರಂಭವಾದ 1982ರ ಬ್ಯಾಚ್‌ನಿಂದ ಕಳೆದ ವರ್ಷ ತೇರ್ಗಡೆ ಹೊಂದಿದ ಬ್ಯಾಚ್ ವರೆಗಿನ ಸುಮಾರು 400 ವಿದ್ಯಾರ್ಥಿಗಳು ಭಾಗಿಯಾಗಿ ಕಾಲೇಜು ದಿನಗಳ ಅವಿಸ್ಮರಣೀಯ ನೆನಪುಗಳನ್ನು ಮೆಲುಕು ಹಾಕಿದರು.
 ಕಾರ್ಯಕ್ರಮದ ಅಂಗವಾಗಿ ತಿ.ನರಸೀಪುರದ ಮುಖ್ಯ ರಸ್ತೆಯಿಂದ ಕಾಲೇಜಿಗೆ ಸಂಪರ್ಕ ಕಲ್ಪಿಸುವ ಡಿಸಿ ಕಚೇರಿ ಪಕ್ಕ ಬೃಹದಾಕಾರದ ಕಲಾಕೃತಿ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಯಿತು. 
ಗ್ರೋವಿಂಗ್ ಮಾಸ್ಟರ್‌ಪೀಸ್ ಶೀರ್ಷಿಕೆಯಡಿ ಕಾಲೇಜು ಆವರಣದಲ್ಲಿ ಐತಿಹಾಸಿಕ ಹೆಸರಾಂತ ಕಲಾವಿದರ ಹೆಸರಿನಲ್ಲಿ ಗಿಡಗಳನ್ನು ನೆಡಲಾಯಿತು. ನಂತರ ಕಾಲೇಜು ಕಾಂಪೌಂಡ್ ಗೋಡೆಗೆ ಗ್ರಾಫಿಟಿ ಚಿತ್ರಕಲೆ ರಚಿಸುವ ಕಾರ್ಯಕ್ರಮದಲ್ಲಿ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಕುಂಚ ಹಿಡಿದು ಬಣ್ಣ ಹಚ್ಚಿದರು.
ಕಾವಾ ಡೀನ್ ಎ.ದೇವರಾಜು ಮಾತನಾಡಿ, ಇತ್ತೀಚಿಗೆ ಕಾವಾ ಕಾಲೇಜಿಗೆ ವಿದ್ಯಾರ್ಥಿಗಳ ಪ್ರವೇಶಾತಿ ಕುಂಠಿತವಾಗಿದೆ. ಇದು ಹೀಗೆ ಮುಂದುವರಿದರೆ ಕಾಲೇಜಿನ ಅಸ್ತಿತ್ವಕ್ಕೆ ಧಕ್ಕೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. 
ಹಿರಿಯ ವಿದ್ಯಾರ್ಥಿಗಳ ಸಂಘವು ಕಾಲೇಜು ಹಾಗೂ ಕಾಲೇಜಿನ ವಿದ್ಯಾರ್ಥಿಗಳ ಬಗ್ಗೆ ವಿಶೇಷ ಕಾಳಜಿ ಹೊಂದಿರುವುದು ಸಂತಸದ ವಿಚಾರ. ಈಗಾಗಲೇ ಕಾಲೇಜಿಗೆ ವಿದ್ಯಾರ್ಥಿಗಳ ಪ್ರವೇಶಾತಿ ಕುಂಠಿತದ ಬಗ್ಗೆ ಸಂಘದೊಂದಿಗೆ ಮಾತುಕತೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಕಾಲೇಜಿನ ಉನ್ನತೀಕರಣಕ್ಕೆ ಬೇಕಾದ ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕಾವಾ ನಿಕಟಪೂರ್ವ ಆಡಳಿತಾಧಿಕಾರಿ ನಿರ್ಮಲಾ ಮಠಪತಿ, ಸಂಘದ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಎಸ್.ಆರ್.ಮಧುಸೂದನ್, ಕಾರ್ಯದರ್ಶಿ ಸೂರ್ಯ, ಸಹ ಕಾರ್ಯದರ್ಶಿ ಉಲ್ಲಾಸ್, ಖಜಾಂಚಿ ಹರೀಶ್ ಹೆಗ್ಡೆ, ನಿದೇರ್ಶಕರಾದ ಪಿ.ರಂಜು, ಪವನ್, ಸಯ್ಯದ್ ಮುಜಾಯಿದ್, ರಮೇಶ, ಶ್ವೇತ, ನಿತ್ಯ ಕಲ್ಯಾಣಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net