ಇದೇ ವೇಳೆ ನಂಜನಗೂಡು ತಾಲೂಕಿನ ಮುದ್ದಹಳ್ಳಿಯ ಎಂ.ಚಿಕ್ಕಸ್ವಾಮಿ(ಸಮಗ್ರ ಕೃಷಿ) ಅವರಿಗೆ ರಾಜ್ಯಮಟ್ಟದ ಉದಯೋನ್ಮುಖ ಕೃಷಿ ಪ್ರಶಸ್ತಿ, ನಂಜನಗೂಡು ಹಾಡ್ಯ ಗ್ರಾಮದ ಎಚ್.ಬಿ.ಜಗದೀಶ್(ಸಮಗ್ರ ಕೃಷಿ), ಗೋಪಾಲಪುರ ಗ್ರಾಮದ ವಿಶ್ವನಾಥ(ಸಮಗ್ರ ಕೃಷಿ), ಪಿರಿಯಾಪಟ್ಟಣ ತಾಲೂಕು ಪಿ.ಬಸವನಹಳ್ಳಿ ಗ್ರಾಮದ ಬಿ.ಎ.ಪ್ರಕಾಶ್(ತೋಟಗಾರಿಕೆ), ಹುಣಸೂರು ಬನ್ನಿಕುಪ್ಪೆ ಗ್ರಾಮದ ಪಿ.ಪಿ.ಚೆಲುವರಾಜು(ತೋಟಗಾರಿಕೆ), ಪಿರಿಯಾಪಟ್ಟಣ ಬೆಳ್ಳತ್ತೂರು ಗ್ರಾಮದ ಬಿ.ಎಚ್.ವೆಂಕಟೇಶ್(ಪಶುಪಾಲನೆ), ಹುಣಸೂರು ಕಡೆಮನುಗನಹಳ್ಳಿ ಗ್ರಾಮದ ರುಷಬೇಂದ್ರ(ಪಶುಪಾಲನೆ), ಲಕ್ಷ್ಮೀಪುರ ಗ್ರಾಮದ ವಸಂತಕುಮಾರ್(ರೇಷ್ಮೆ), ತಿ.ನರಸೀಪುರದ ಮುತ್ತತ್ತಿ ಗ್ರಾಮದ ಕೃಷ್ಣ(ರೇಷ್ಮೆ), ಬೀಡನಹಳ್ಳಿ ಗ್ರಾಮದ ಬಸವೇಗೌಡ(ಮೀನುಗಾರಿಕೆ) ಹಾಗೂ ಹುಣಸೂರು ಆಸ್ಪತ್ರೆಕಾವಲ್ ಗ್ರಾಮದ ಎಚ್‌ಎಸ್.ಮಹಾಶೇಷಭಟ್(ಸಮಗ್ರ ಕೃಷಿ) ಅವರಿಗೆ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಲಾಯಿತು.