ಮೊಬೈಲ್ ಗೀಳು ಬಿಡಿಸುವ ಕಾರ್ಯದಲ್ಲಿ ಶ್ರೀಪುತ್ತಿಗೆ ಮಠ: ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ

ನಗರದ ಶ್ರೀಕೃಷ್ಣಧಾಮದಲ್ಲಿ ಆಯೋಜಿಸಿದ್ದ ಶ್ರೀಕೃಷ್ಣಧಾಮದ ಸುವರ್ಣ ಸಂಭ್ರಮ ಸಮಾರೋಪ ಸಮಾರಂಭದಲ್ಲಿ ಮಂಡಳಿ ಏಳಿಗೆಗಾಗಿ ಶ್ರಮಿಸಿದವರನ್ನು ಸನ್ಮಾನಿಸಲಾಯಿತು. ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ,  ಕೆ.ಹರೀಶ್‌ಗೌಡ, ರವಿಶಾಸ್ತ್ರಿ, ಪಿ.ಎಸ್. ಶೇಖರ್,  ಕೆ.ವಿ. ಶ್ರೀಧರ್, ಎನ್.ಗೋಪಾಲಕೃಷ್ಣ, ಶ್ರೀವತ್ಸರಾವ್, ಪಿ.ಜಿ. ಗುರುಪ್ರಸಾದ್ ಇತರರು ಇದ್ದರು
ನಗರದ ಶ್ರೀಕೃಷ್ಣಧಾಮದಲ್ಲಿ ಆಯೋಜಿಸಿದ್ದ ಶ್ರೀಕೃಷ್ಣಧಾಮದ ಸುವರ್ಣ ಸಂಭ್ರಮ ಸಮಾರೋಪ ಸಮಾರಂಭದಲ್ಲಿ ಮಂಡಳಿ ಏಳಿಗೆಗಾಗಿ ಶ್ರಮಿಸಿದವರನ್ನು ಸನ್ಮಾನಿಸಲಾಯಿತು. ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ, ಕೆ.ಹರೀಶ್‌ಗೌಡ, ರವಿಶಾಸ್ತ್ರಿ, ಪಿ.ಎಸ್. ಶೇಖರ್, ಕೆ.ವಿ. ಶ್ರೀಧರ್, ಎನ್.ಗೋಪಾಲಕೃಷ್ಣ, ಶ್ರೀವತ್ಸರಾವ್, ಪಿ.ಜಿ. ಗುರುಪ್ರಸಾದ್ ಇತರರು ಇದ್ದರು
Published on

ಪ್ರಮುಖ ಮುಖ್ಯಾಂಶಗಳು

  • ಇತ್ತೀಚೆಗೆ ಮಕ್ಕಳು ಮೊಬೈಲ್ ವ್ಯಸನಕ್ಕೆ ಒಳಗಾಗಿದ್ದು, ಇದೊಂದು ಸಾಮಾಜಿಕ ಪಿಡುಗಾಗಿ ಪರಿಣಮಿಸಿದೆ.
  • ಮೊಬೈಲ್ ಗೀಳು ಜೀವನದ ಮೇಲೆ ಗಂಭೀರ ಪರಿಣಾಮ ಬೀರುವ ಹಂತಕ್ಕೆ ತಲುಪಿದೆ
ಮೈಸೂರು:ಮೊಬೈಲ್‌ಗೀಳು ಇತ್ತೀಚೆಗೆ ಹೆಚ್ಚಾಗುತ್ತಿದೆ. ಆದ್ದರಿಂದ ಮಕ್ಕಳು ಹಾಗೂ ಪಾಲಕರಿಗೆ ಈ ಮೊಬೈಲ್ ಗೀಳು ಬಿಡಿಸುವ ಸಾಮಾಜಿಕ ಕಾರ್ಯದಲ್ಲಿ ಶ್ರೀಪುತ್ತಿಗೆ ಮಠ ತೊಡಗಿಸಿಕೊಂಡಿದೆ ಎಂದು ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ತಿಳಿಸಿದರು.
ಶ್ರೀಕೃಷ್ಣ ಟ್ರಸ್ಟ್‌ನಿಂದ ಸರಸ್ವತಿಪುರಂನ ಶ್ರೀಕೃಷ್ಣಧಾಮದಲ್ಲಿ ಆಯೋಜಿಸಿದ್ದ ಶ್ರೀಕೃಷ್ಣಧಾಮದ ಸುವರ್ಣ ಸಂಭ್ರಮ ಸಮಾರೋಪ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಇತ್ತೀಚೆಗೆ ಮಕ್ಕಳು ಮೊಬೈಲ್ ವ್ಯಸನಕ್ಕೆ ಒಳಗಾಗಿದ್ದು, ಇದೊಂದು ಸಾಮಾಜಿಕ ಪಿಡುಗಾಗಿ ಪರಿಣಮಿಸಿದೆ. ಇದರಿಂದ ಎಷ್ಟೋ ಮಕ್ಕಳು ಮಾನಸಿಕ ಸಮತೋಲನ ಕಳೆದುಕೊಳ್ಳುತ್ತಿದ್ದಾರೆ. ಇದು ಅವರ ಜೀವನದ ಮೇಲೆ ಗಂಭೀರ ಪರಿಣಾಮ ಬೀರುವ ಹಂತಕ್ಕೆ ತಲುಪಿವೆ ಎಂದು ವಿಷಾದಿಸಿದರು.
ಆದ್ದರಿಂದ ಮಕ್ಕಳು ಹಾಗೂ ಪಾಲಕರಿಗೂ ಮೊಬೈಲ್ ವ್ಯಸನ ಬಿಡಿಸುವ ನಾಲ್ಕು ದಿನಗಳ ಶಿಬಿರ ಆಯೋಜಿಸಿ ಅವುಗಳಿಂದ ದೂರ ಉಳಿಯುವುದು ಹೇಗೆ ಎನ್ನುವ ಸಾಮಾಜಿಕ ಕಾರ್ಯದಲ್ಲಿ ಶ್ರೀಮಠ ತೊಡಗಿಸಿಕೊಂಡಿದೆ ಎಂದರು.
ಸ್ವಾಮೀಜಿ ಎಲ್ಲರನ್ನೂ ಸಂಘಟಿಸಿ ನಾನಾ ಧಾರ್ಮಿಕ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ಧರ್ಮದ ಉಳಿವಿಗೆ ಕೊಡುಗೆ ನೀಡುತ್ತಿದ್ದಾರೆ. ಬ್ರಾಹ್ಮಣ ಸಮಾಜದ ಸಂಘಟನೆಗೂ ಒತ್ತು ನೀಡಲಾಗುತ್ತಿದೆ. ಅಲ್ಲದೆ ವಿಶ್ವಾದ್ಯಂತ ನಮ್ಮ ಸಂಸ್ಕೃತಿ ರಕ್ಷಣೆಯಾಗಬೇಕು ಎಂಬ ಕಾರಣಕ್ಕೆ ಅಮೆರಿಕ, ಆಸ್ಟ್ರೇಲಿಯಾ, ಕೆನಡಾ, ಇಂಗ್ಲೆಂಡ್ ಸೇರಿದಂತೆ ಎಲ್ಲೆಡೆ ಹಲವು ಸಾಂಸ್ಕೃತಿಕ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ಶಾಸಕ ಕೆ. ಹರೀಶ್‌ಗೌಡ ಮಾತನಾಡಿ, ಶ್ರೀಕೃಷ್ಣಧಾಮ, ಶ್ರೀಕೃಷ್ಣಮಿತ್ರ ಮಂಡಳಿಯಿಂದ ಸಮಾಜಕ್ಕೆ ಒಳ್ಳೆಯ ಕೆಲಸಗಳಾಗುತ್ತಿವೆ. ಈ ಸುವರ್ಣ ಸಂಭ್ರಮದ ಸಂದರ್ಭದಲ್ಲಿ ಪುತ್ತಿಗೆ ಶ್ರೀಗಳ ಆಶೀರ್ವಾದ ಪಡೆದಿರುವುದು ಸಂತೋಷವಾಗಿದೆ. ಅಲ್ಲದೆ ಕಾರ್ಯಕ್ರಮದಲ್ಲಿ ಶ್ರೀಕೃಷ್ಣಧಾಮದ ಅಭಿವೃದ್ಧಿಗೆ ಕಾರಣರಾದ ಪ್ರಮುಖರಿಗೆ ಸನ್ಮಾನ ಮಾಡಿರುವುದು ಶ್ಲಾಘನೀಯ ಎಂದರು.
ಶ್ರೀಕೃಷ್ಣ ಟ್ರಸ್ಟ್ ಉಪಾಧ್ಯಕ್ಷ ರವಿಶಾಸ್ತ್ರಿ ಮಾತನಾಡಿ, ಶ್ರೀಕೃಷ್ಣಧಾಮದಿಂದ ನಾನಾ ಧಾರ್ಮಿಕ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ಸಮಾಜದಲ್ಲಿ ಸಂಸ್ಕೃತಿ, ಸಂಸ್ಕಾರವನ್ನು ಉಳಿಸಿ ಬೆಳೆಸುವ ಕಾರ್ಯವಾಗುತ್ತಿದೆ. 50 ವರ್ಷದಿಂದ ಸಮಾಜದಲ್ಲಿ ಸಾಮರಸ್ಯ ಮೂಡಿಸುವ ಕೆಲಸ ಮಾಡುತ್ತಿದೆ. ಈ ಕೆಲಸ ಹೀಗೆ ಮುಂದುವರಿದುಕೊಂಡು ಹೋಗಬೇಕಿದೆ ಎಂದು ಹೇಳಿದರು.
ಮಂಡಳಿ ಏಳಿಗೆಗೆ ಶ್ರಮಿಸಿದ ಎಂ.ಕೃಷ್ಣದಾಸ ಪುರಾಣಿಕ್, ಎಲ್. ಅನಂತ ತಂತ್ರಿ, ಬಿ. ಬಾಲಕೃಷ್ಣ ಆಚಾರ್ಯ, ಎಸ್. ರಘುರಾಮ್ ಭಟ್, ಕೆ.ಎಸ್.ರಾಮಕೃಷ್ಣ ಬಲ್ಲಾಳ್ ಅವರನ್ನು ಸನ್ಮಾನಿಸಲಾಯಿತು.
ಶ್ರೀಕೃಷ್ಣ ಟ್ರಸ್ಟ್ ಉಪಾಧ್ಯಕ್ಷ ಪಿ.ಎಸ್.ಶೇಖರ್, ಕಾರ್ಯದರ್ಶಿ ಕೆ.ವಿ.ಶ್ರೀಧರ್, ಕೃಷ್ಣ ಮಿತ್ರಮಂಡಳಿ ಅಧ್ಯಕ್ಷ ಎನ್.ಗೋಪಾಲಕೃಷ್ಣ, ಉಪಾಧ್ಯಕ್ಷ ಶ್ರೀವತ್ಸರಾವ್, ಕಾರ್ಯದರ್ಶಿ ಪಿ.ಜಿ. ಗುರುಪ್ರಸಾದ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net