ಕಾಯಕ ದಾಸೋಹ ತತ್ವಗಳಿಗೆ ಅನ್ವರ್ಥವಾಗಿ ಬದುಕಿದವರು ಶ್ರೀಶಿವಕುಮಾರ ಸ್ವಾಮೀಜಿ

 ನಗರದ ವಿದ್ಯಾನಗರ ಬಡಾವಣೆಯಲ್ಲಿ ಡಾ. ಶಿವಕುಮಾರ ಶ್ರೀಗಳ ಪುಣ್ಯ ಸ್ಮರಣೆ ಕಾರ್ಯಕ್ರಮ ನಡೆಯಿತು. ಅಖಿಲ ಭಾರತ ವೀರಶೈವ ಮಹಾಸಭಾ ನಿರ್ದೇಶಕ ಕಲ್ಮಲ್ಲಿ ನಟರಾಜು, ಮಹೇಶ್ ಮನಿಶ್ ಇತರರಿದ್ದರು.
ನಗರದ ವಿದ್ಯಾನಗರ ಬಡಾವಣೆಯಲ್ಲಿ ಡಾ. ಶಿವಕುಮಾರ ಶ್ರೀಗಳ ಪುಣ್ಯ ಸ್ಮರಣೆ ಕಾರ್ಯಕ್ರಮ ನಡೆಯಿತು. ಅಖಿಲ ಭಾರತ ವೀರಶೈವ ಮಹಾಸಭಾ ನಿರ್ದೇಶಕ ಕಲ್ಮಲ್ಲಿ ನಟರಾಜು, ಮಹೇಶ್ ಮನಿಶ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಿರ್ದೇಶಕ ಕಲ್ಮಳ್ಳಿ ನಟರಾಜು ಹೇಳಿಕೆ
ನಂಜನಗೂಡು: ಶರಣರ ಅನುಭವದಿಂದ ಹುಟ್ಟಿದ ವಚನಗಳ ಪರಿಕಲ್ಪನೆಯ ಕಾಯಕ ದಾಸೋಹ ತತ್ವ ಸುಳ್ಳಲ್ಲ ಸತ್ಯ ಎನ್ನುವುದಕ್ಕೆ ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಬದುಕು ನಿದರ್ಶನ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ನಿರ್ದೇಶಕ ಕಲ್ಮಳ್ಳಿ ನಟರಾಜು ತಿಳಿಸಿದರು.]
ನಗರದ ವಿದ್ಯಾನಗರ ಬಡಾವಣೆಯಲ್ಲಿ ಇತ್ತೀಚೆಗೆ ಡಾ. ಶಿವಕುಮಾರ ಸ್ವಾಮೀಜಿ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸತ್ಯ, ಶುದ್ಧ, ಕಾಯಕದಿಂದ ಮನುಷ್ಯ ದೇವನಾಗಬಹುದು ಎನ್ನುವುದಕ್ಕೆ ಬೇರೊಂದು ಉದಾಹರಣೆ ಬೇಕಿಲ್ಲ. ಬಸವಣ್ಣನ ವಚನಗಳಲ್ಲಿ ಶಿವಶರಣರು ಇದ್ದ ಕ್ಷೇತ್ರ ಪರಮ ಪಾವನ ಎಂಬುದು ಹುಸಿಯಲ್ಲ. ಈ ನುಡಿ ಅಕ್ಷರಶಃ ದಿನನಿತ್ಯ ಜಾತಿ, ಧರ್ಮ, ಮತ, ಪಂಥ, ಭೇದವಿಲ್ಲದೇ ಸಿದ್ಧಗಂಗಾ ಮಠಕ್ಕೆ ಬರುವ ಭಕ್ತರನ್ನು ನೋಡಿದರೆ ತಿಳಿಯುತ್ತಿದೆ. ಇಲ್ಲಿ ಶಿಕ್ಷಣ ಪಡೆದ ಅನೇಕ ಮಹನೀಯರು ತಾವುಗಳು ಶ್ರೀಗಳ ಜೀವನ ಸಂದೇಶಗಳನ್ನು ವಿವಿಧ ರೀತಿಯಲ್ಲಿ ಅರ್ಥೈಸಿಕೊಂಡು ಶ್ರೀಗಳ ಮಹಿಮೆಯನ್ನು ಕುರಿತ ಗ್ರಂಥಗಳನ್ನು ರಚಿಸಿ ಮುಂದಿನ ಪೀಳಿಗೆಗೆ ಅಮೂಲ್ಯ ಕೊಡುಗೆ ನೀಡಿದ್ದಾರೆ ಎಂದರು.
ಪದಾಧಿಕಾರಿಗಳಾದ ಮಹೇಶ್, ಮನೀಶ್, ಹೊರೆಯಾಲ ಪ್ರಕಾಶ್, ವೀರಭದ್ರಸ್ವಾಮಿ, ಕಿರಣ್, ಸಂಸ್ಕೃತ ಶಿಕ್ಷಕರಾದ ಶಿವಲಿಂಗಸ್ವಾಮಿ, ದೇವನೂರು ಸದಾನಂದ ಇತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net