ಶ್ರೀ ರಾಕಸಮ್ಮ ಮಹೋತ್ಸವ ಸಂಪನ್ನ

ಹುಣಸೂರಿನ ಶಿವಜ್ಯೋತಿ ನಗರ ಬಡಾವಣೆಯ ಶ್ರೀ ರಾಕಸಮ್ಮ ದೇವಾಲಯದ ಪೂಜಾ ಮಹೋತ್ಸವದ ಅಂಗವಾಗಿ ವಿಜೃಂಭಣೆಯಿಂದ ದೇವರ ಉತ್ಸವ ನಡೆಯಿತು.
ಹುಣಸೂರಿನ ಶಿವಜ್ಯೋತಿ ನಗರ ಬಡಾವಣೆಯ ಶ್ರೀ ರಾಕಸಮ್ಮ ದೇವಾಲಯದ ಪೂಜಾ ಮಹೋತ್ಸವದ ಅಂಗವಾಗಿ ವಿಜೃಂಭಣೆಯಿಂದ ದೇವರ ಉತ್ಸವ ನಡೆಯಿತು.
Published on
ಹುಣಸೂರು: ನಗರದ ಶಿವಜ್ಯೋತಿ ನಗರ ಬಡಾವಣೆಯ ಶ್ರೀ ರಾಕಸಮ್ಮ ದೇವಾಲಯದ 52ನೇ ವರ್ಷದ ಪೂಜಾ ಮಹೋತ್ಸವ ಭಾನುವಾರ ವಿಜೃಂಭಣೆಯಿಂದ ಸಂಪನ್ನಗೊಂಡಿತು.
ಮೂರು ದಿನಗಳ ಕಾಲ ನಡೆದ ಮಹೋತ್ಸವದಲ್ಲಿ ಹುಣಸೂರು, ಎಚ್.ಡಿ.ಕೋಟೆ ತಾಲೂಕಿನ ಗಾಣಿಗ ಸಮುದಾಯದವರು ಪಾಲ್ಗೊಂಡು ಪೂಜೆ ಸಲ್ಲಿಸಿದರು. ಹರಕೆ ಹೊತ್ತವರು ಹರಕೆ ತೀರಿಸಿದರು. ದೇವಾಲಯ ಹಾಗೂ ರಸ್ತೆಗಳನ್ನು ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು.
ರಾಕಸಮ್ಮ ದೇವಿಯ ಉತ್ಸವ ಮೂರ್ತಿಯನ್ನು ಲಕ್ಷ್ಮಣತೀರ್ಥ ನದಿ ಬಳಿಗೆ ತಂದು ಸಂಪ್ರದಾಯದಂತೆ ಅರ್ಚಕ ಚಿಕ್ಕರಾಜ ನೇತೃತ್ವದಲ್ಲಿ ಹೋಮ-ಹವನ ನಡೆಸಿದರು. ಛತ್ರಿ-ಚಾಮರ, ಮಂಗಳವಾದ್ಯ, ನಗಾರಿ ಸದ್ದಿನೊಂದಿಗೆ ಅಲಂಕೃತ ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿ ಆರಂಭಗೊಂಡಿತು. ಪಂಪ್‌ಹೌಸ್ ವೃತ್ತ, ದಾವಣಿ ಬೀದಿ ವೃತ್ತ, ಎಚ್.ಡಿ.ಕೋಟೆ ವೃತ್ತ, ಜೆಎಲ್‌ಬಿ ರಸ್ತೆ, ಗಣೇಶಗುಡಿ ಬೀದಿ, ದೊಡ್ಡಮಸೀದಿ ರಸ್ತೆ, ಲಾಲ್‌ಬನ್ ಬೀದಿ ಮೂಲಕ ಶಿವಜ್ಯೋತಿ ನಗರದ ದೇವಸ್ಥಾನದಲ್ಲಿ ಅಂತ್ಯಗೊಂಡಿತು.
ಪೂಜಾ ಮಹೋತ್ಸವದಲ್ಲಿ ಮಾಜಿ ಶಾಸಕ ಎಚ್.ಪಿ. ಮಂಜುನಾಥ್ ತಮಟೆ ಸದ್ದಿಗೆ ಕುಣಿದು ಕುಪ್ಪಳಿಸಿದರು. ಶಾಸಕ ಜಿ.ಡಿ.ಹರೀಶ್‌ಗೌಡ ಪತ್ನಿ ವರ್ಷಾ ಹರೀಶ್‌ಗೌಡ, ರಾಜ್ಯ ಗಾಣಿಗರ ಅಭಿವೃದ್ಧಿ ನಿಗಮದ ಅಧ್ಯಕ್ಷ ಅನಂತು, ನಿರ್ದೇಶಕ ಡಾ.ಯೋಗೇಶ್, ಜಿಲ್ಲಾಧ್ಯಕ ಉಮೇಶ್, ಮಂಡ್ಯ ಶಿವಕುಮಾರ್, ಗುಂಡ್ಲುಪೇಟೆ ಸುಬ್ರಹ್ಮಣ್ಯ, ತಾಲೂಕು ಅಧ್ಯಕ್ಷ ಮಾದಶೆಟ್ಟಿ, ಗಾಣಿಗ ವಿದ್ಯಾರ್ಥಿನಿಲಯದ ಅಧ್ಯಕ್ಷ ಪಾರ್ಥಸಾರಥಿ, ಗಾಣಿಗ ಹಿತೈಷಿ ಬಳಗದ ಅಧ್ಯಕ್ಷ ಚೆನ್ನಕೇಶವ, ಮೈಸೂರು ನಗರ ಪಾಲಿಕೆ ಮಾಜಿ ಸದಸ್ಯ ನಂದಕುಮಾರ್, ಸಮಾಜದ ಮುಖಂಡರಾದ ರಾಜು, ಪ್ರಸಾದ್, ಶಿವಸ್ವಾಮಿ, ಬಾಬು, ರಮೇಶ್, ಎಚ್.ಎಸ್.ಸ್ವಾಮಿ, ಶೇಖರ, ಕುಮಾರಸ್ವಾಮಿ, ಪುರಿಬಟ್ಟಿ ಶಿವಣ್ಣ, ಎಚ್.ಎಸ್.ಸ್ವಾಮಿ, ಶಿವರಾಜಣ್ಣ, ಶಿವಪ್ಪ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ರಾಘು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net