ಸಮಯಪಾಲನೆ ಕಲಿಸುವ ಕ್ರೀಡೆಗಳು

 ಬೆಟ್ಟದಪುರದ ಎಸ್‌ಎಂಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಥ್ರೋಬಾಲ್ ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ಟ್ರೋಫಿ ನೀಡಿ ಅಭಿನಂದಿಸಲಾಯಿತು. ಗಣೇಶ್ ಟಿ.ಅಂಬಲಾರೆ, ಬಿ.ವಿ.ಮಂಜುನಾಥ್, ದಿನೇಶ್, ಜ್ಯೋತಿ ಪ್ರಸಾದ್, ಮಣಿಕಂಠ, ಎ.ವಿ.ಛಾಯಾ, ರಾಜು ಇತರರಿದ್ದರು.
ಬೆಟ್ಟದಪುರದ ಎಸ್‌ಎಂಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಥ್ರೋಬಾಲ್ ಪಂದ್ಯಾವಳಿಯಲ್ಲಿ ವಿಜೇತ ತಂಡಗಳಿಗೆ ಟ್ರೋಫಿ ನೀಡಿ ಅಭಿನಂದಿಸಲಾಯಿತು. ಗಣೇಶ್ ಟಿ.ಅಂಬಲಾರೆ, ಬಿ.ವಿ.ಮಂಜುನಾಥ್, ದಿನೇಶ್, ಜ್ಯೋತಿ ಪ್ರಸಾದ್, ಮಣಿಕಂಠ, ಎ.ವಿ.ಛಾಯಾ, ರಾಜು ಇತರರಿದ್ದರು.
Published on

ಬೆಟ್ಟದಪುರ:

ಕ್ರೀಡೆಯಲ್ಲಿ ಗೆಲುವು ಮುಖ್ಯವಾದರೂ ವಿಜಯಕ್ಕಿಂತ ಕ್ರೀಡಾ ಸ್ಫೂರ್ತಿ, ಭಾಗವಹಿಸುವಿಕೆ, ಸೋಲು-ಗೆಲುವು ಸಮಾನವಾಗಿ ಸ್ವೀಕರಿಸುವ ಮನೋಭಾವ ಅಗತ್ಯ ಎಂದು ಅಂತಾರಾಷ್ಟ್ರೀಯ ಸಿಟ್ಟಿಂಗ್ ಪ್ಯಾರಾ ವಾಲಿಬಾಲ್ ಕ್ರೀಡಾಪಟು ಗಣೇಶ್ ಟಿ.ಅಂಬಲಾರೆ ಹೇಳಿದರು.

ಪಿರಿಯಾಪಟ್ಟಣ ತಾಲೂಕು ಬೆಟ್ಟದಪುರದ ಎಸ್‌ಎಂಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ 19 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ಥ್ರೋಬಾಲ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡೆಯಲ್ಲಿ ಗೆಲುವು ಸಿಗಲಿ, ಸೋಲು ಬರಲಿ ಎರಡನ್ನೂ ಸಮಾನ ಮನೋಭಾವದಿಂದ ಸ್ವೀಕರಿಸುವ ಗುಣವನ್ನು ಕ್ರೀಡಾಪಟುಗಳು ಬೆಳೆಸಿಕೊಳ್ಳಬೇಕು. ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ದೈಹಿಕ ಸಾಮರ್ಥ್ಯದ ಜತೆಗೆ ಮಾನಸಿಕ ಆರೋಗ್ಯವೂ ವೃದ್ಧಿಯಾಗುತ್ತದೆ. ಕ್ರೀಡೆಯು ಶಿಸ್ತು, ಆತ್ಮವಿಶ್ವಾಸ, ಸಮಯಪಾಲನೆ ಹಾಗೂ ತಂಡದೊಂದಿಗೆ ಹೊಂದಾಣಿಕೆಯಿಂದ ಕಾರ್ಯನಿರ್ವಹಿಸುವ ಗುಣಗಳನ್ನು ಬೆಳೆಸುತ್ತದೆ ಎಂದರು.
ಸಂಸ್ಥೆಯ ಅಧ್ಯಕ್ಷ ಬಿ.ವಿ.ಮಂಜುನಾಥ್ ಮಾತನಾಡಿ, ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ಪರಸ್ಪರ ಸಹಕಾರ, ನಂಬಿಕೆ ಹಾಗೂ ಸಂವಹನ ಕೌಶಲ ಬೆಳೆಸುತ್ತವೆ. ತಂಡವಾಗಿ ಆಡುವುದರಿಂದ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವ ಮತ್ತು ಗೌರವಿಸುವ ಮನೋಭಾವ ಬೆಳೆಯುತ್ತದೆ. ಇದು ವಿದ್ಯಾರ್ಥಿಗಳು ಸಾಮಾಜಿಕವಾಗಿ ಬೆರೆಯಲು ಹಾಗೂ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಆಯ್ಕೆ: ಪಂದ್ಯಾವಳಿಯಲ್ಲಿ ಬಾಲಕ ಹಾಗೂ ಬಾಲಕಿಯರ ಎರಡೂ ವಿಭಾಗಗಳಲ್ಲಿ ಬೆಟ್ಟದಪುರದ ಎಸ್‌ಎಂಎಸ್ ಪದವಿ ಪೂರ್ವ ಕಾಲೇಜು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಯಿತು. ಬಾಲಕರ ವಿಭಾಗದಲ್ಲಿ ಬೆಟ್ಟದಪುರದ ಡಿಟಿಎಂಎನ್ ಪದವಿ ಪೂರ್ವ ಕಾಲೇಜು ದ್ವಿತೀಯ ಸ್ಥಾನ, ಬಾಲಕಿಯರ ವಿಭಾಗದಲ್ಲಿ ಪಿರಿಯಾಪಟ್ಟಣದ ಅಕ್ಷರ ಪದವಿ ಪೂರ್ವ ಕಾಲೇಜು ದ್ವಿತೀಯ ಸ್ಥಾನ ಪಡೆಯಿತು.
ತಾಲೂಕು ನೋಡಲ್ ಅಧಿಕಾರಿಗಳಾದ ದಿನೇಶ್, ಜ್ಯೋತಿ ಪ್ರಸಾದ್, ಮಣಿಕಂಠ, ಸಂಸ್ಥೆಯ ಕಾರ್ಯದರ್ಶಿ ಎ.ವಿ.ಛಾಯಾ, ಪ್ರಾಂಶುಪಾಲ ರಾಜು, ಮುಖ್ಯ ಶಿಕ್ಷಕರಾದ ವೆಂಕಟೇಶ್, ಕುಮಾರ್, ಕ್ರೀಡಾ ಮಾರ್ಗದರ್ಶಕ ಶಿವಕುಮಾರ್, ಉಪನ್ಯಾಸಕರಾದ ಕುಬೇರ್, ವಸಂತ್, ಯಶವಂತ್ ಕುಮಾರ್, ಸತೀಶ್, ಬಸವರಾಜು, ಸುನಿಲ್, ಪ್ರತಾಪ್, ರಾಮೇಗೌಡ, ಶಿವನಂಜು, ಸೈಫುಲ್ಲ ಖಾನ್, ಅರುಣ್, ಹರ್ಷಿತಾ, ರಶ್ಮಿ, ರಮ್ಯಾ, ಅಕ್ಷತಾ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net