ಶಿವಾಲಯಗಳಲ್ಲಿ ವಿಶೇಷ ಪೂಜೆ

ಶಿವಾಲಯಗಳಲ್ಲಿ  ವಿಶೇಷ ಪೂಜೆ ನೆರವೇರಿತು.
ಶಿವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿತು.
Published on

ಪ್ರಮುಖ ಮುಖ್ಯಾಂಶಗಳು

  • ಮಹಾಶಿವರಾತ್ರಿ
  • ಗ್ರಾಮೀಣ ಪ್ರದೇಶದ ಶಿವಾಲಯ
ತಿ.ನರಸೀಪುರ: ಮಹಾಶಿವರಾತ್ರಿ ಅಂಗವಾಗಿ ಪಟ್ಟಣದ ತ್ರಿವೇಣಿ ಸಂಗಮದ ಬಳಿಯಿರುವ ಶ್ರೀ ಬಳ್ಳೇಶ್ವರ ಸ್ವಾಮಿ, ತಿರಮಕೂಡಲಿನ ಶ್ರೀ ಅಗಸ್ತ್ಯ, ಹಳೇ ಸಂತೆಮಾಳದಲ್ಲಿನ ಅನಾದಿ ಮೂಲಸ್ಥಾನೇಶ್ವರ, ಗರ್ಗೇಶ್ವರಿಯ ಗಾರ್ಗೇಶ್ವರ ಸ್ವಾಮಿ ಸೇರಿದಂತೆ ಗ್ರಾಮೀಣ ಪ್ರದೇಶದ ಶಿವಾಲಯಗಳಲ್ಲಿ ಭಾನುವಾರ ವಿಶೇಷ ಪೂಜೆ ನೆರವೇರಿತು.
ಶಿವ ದೇವಾಲಯಗಳಲ್ಲಿ ಮುಂಜಾನೆಯೇ ಶಿವನಿಗೆ ಏಕವಾರ, ದಶವಾರ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಭಸ್ಮಾಭಿಷೇಕ, ಬಿಲ್ವಾರ್ಚನೆ, ಗಂಧಾಭಿಷೇಕ, ರುದ್ರಪಾರಾಯಣ ಸೇರಿದಂತೆ ವಿವಿಧ ಪೂಜಾ ಕೈಂಕರ್ಯ ಜರುಗಿದವು. ಬಳ್ಳೇಶ್ವರ ದೇವಾಲಯದಲ್ಲಿ ಪ್ರಧಾನ ಅರ್ಚಕ ಅರುಣ್‌ಕುಮಾರ್ ನೇತೃತ್ವದಲ್ಲಿ ವಿವಿಧ ಪೂಜೆಗಳು ನಡೆದವು. ಇದೇ ವೇಳೆ ಶನೈಶ್ವರ ಸ್ವಾಮಿ, ಆಂಜನೇಯ ಸ್ವಾಮಿ, ಸಾಯಿಬಾಬಾಗೂ ವಿಶೇಷ ಪೂಜೆ ನೆರವೇರಿಸಲಾಯಿತು. ಭಕ್ತರು ಮುಂಜಾನೆಯಿಂದಲೇ ದೇವಾಲಯಗಳಿಗೆ ಆಗಮಿಸಿ ಸರದಿ ಸಾಲಿನಲ್ಲಿ ನಿಂತು ಪೂಜೆ ಸಲ್ಲಿಸಿ ಶಿವನ ದರ್ಶನ ಪಡೆದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net