ಗುಡ್‌ಫ್ರೈಡೇಗೆ ವಿಶೇಷ ರೈಲು ಸಂಚಾರ

ವಿಶೇಷ ರೈಲು
ವಿಶೇಷ ರೈಲು
Published on

ಪ್ರಮುಖ ಮುಖ್ಯಾಂಶಗಳು

  • ಯಶವಂತಪುರ, ಮಡಗಾಂವ್, ಬೆಂಗಳೂರು ಕಂಟೋನ್ಮೆಂಟ್ ನಡುವೆ ಪ್ರಯಾಣ
ಮೈಸೂರು: ಗುಡ್‌ಫ್ರೈಡೇ ಹಾಗೂ ಈಸ್ಟರ್ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಕಡಿಮೆ ಮಾಡಲು ನೈಋತ್ಯ ರೈಲ್ವೆಯು ಯಶವಂತಪುರ, ಮಡಗಾಂವ್ ಮತ್ತು ಬೆಂಗಳೂರು ಕಂಟೋನ್ಮೆಂಟ್ ನಡುವೆ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ.
 ಯಶವಂತಪುರ-ಮಡಗಾಂವ್(ರೈಲು ಸಂಖ್ಯೆ 06271) ವಿಶೇಷ ಎಕ್ಸ್‌ಪ್ರೆಸ್ ಏ.2ರಂದು ರಾತ್ರಿ 11.55ಕ್ಕೆ ಯಶವಂತಪುರದಿಂದ ಹೊರಟು, ಏ.3ರಂದು ಸಂಜೆ 5.30 ಕ್ಕೆ ಮಡಗಾಂವ್ ತಲುಪಲಿದೆ. 
ಹಿಂದಿರುಗುವ ಪ್ರಯಾಣದಲ್ಲಿ ಮಡಗಾಂವ್ ಬೆಂಗಳೂರು ಕಂಟೋನ್ಮೆಂಟ್ ವಿಶೇಷ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 06272 )ಏ.5ರಂದು ಬೆಳಗ್ಗೆ 11 ಗಂಟೆಗೆ ಮಡಗಾಂವ್‌ನಿಂದ ಹೊರಡಲಿರುವ ಈ ರೈಲು, ಏ.6ರಂದು ಬೆಳಗ್ಗೆ 5.20ಕ್ಕೆ ಬೆಂಗಳೂರು ಕಂಟೋನ್ಮೆಂಟ್ ತಲುಪಲಿದೆ.
ಈ ವಿಶೇಷ ರೈಲುಗಳು ಮಾರ್ಗಮಧ್ಯೆ ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕಪುತ್ತೂರು, ಬಂಟ್ವಾಳ, ಸುರತ್ಕಲ್, ಮುಲ್ಕಿ, ಉಡುಪಿ, ಬಾರ್ಕೂರು, ಕುಂದಾಪುರ, ಬೈಂದೂರು, ಭಟ್ಕಳ, ಮುರ್ಡೇಶ್ವರ, ಹೊನ್ನಾವರ, ಕುಮಟಾ, ಗೋಕರ್ಣ ರೋಡ್, ಅಂಕೋಲಾ, ಕಾರವಾರ ಮತ್ತು ಕಾಣಕೋಣ ನಿಲ್ದಾಣಗಳಲ್ಲಿ ರೈಲು ನಿಲ್ಲಲಿದೆ.
ಹಿಂದಿರುಗುವ ಪ್ರಯಾಣದಲ್ಲಿ ರೈಲು ಸಂಖ್ಯೆ 06272 ಯಶವಂತಪುರ ನಿಲ್ದಾಣದಲ್ಲಿ ನಿಲುಗಡೆ ಇರುವುದಿಲ್ಲ. ಬೆಂಗಳೂರು ನಿಲ್ದಾಣದಲ್ಲಿ ರೈಲು ನಿಲ್ಲಲಿದೆ. 
ಈ ವಿಶೇಷ ರೈಲು  19 ಬೋಗಿ ಹೊಂದಿರಲಿದೆ. ಇದರಲ್ಲಿ ಎರಡು ಎಸಿ 2-ಟಯರ್, ಎರಡು ಎಸಿ 3-ಟಯರ್, 9 ಸ್ಲೀಪರ್ ಕ್ಲಾಸ್, 4 ಸಾಮಾನ್ಯ ದ್ವಿತೀಯ ದರ್ಜೆ ಹಾಗೂ 2 ಎಸ್‌ಎಲ್‌ಲ್‌ಆರ್/ಡಿ  ಬೋಗಿಗಳು ಇರಲಿವೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net