ಬೈಲುಕುಪ್ಪೆ: ಪಿರಿಯಾಪಟ್ಟಣ ತಾಲೂಕಿನ ಕೊಪ್ಪ-ಬಿ.ಎಂ.ರಸ್ತೆ ಪಕ್ಕದಲ್ಲಿರುವ ಕಾವೇರಿ ಮಾತೆಗೆ 154ನೇ ಹುಣ್ಣಿಮೆಯ ಪ್ರಯುಕ್ತ ವಿಶೇಷ ಪೂಜೆ ಶನಿವಾರ ಸಂಜೆ ನಡೆಯಿತು.
ಸಂಘದ ಅಧ್ಯಕ್ಷ ಬೆಬಿಂದ್ರ ಪ್ರಸಾದ್ ಅವರ ಸಮ್ಮುಖದಲ್ಲಿ ಪೂಜಾ ಸೇವಾರ್ಥಕರಾದ ಬೆಂಗಳೂರಿನ ಸುನಂದಾ ಕೌಶಿಕ್, ಪೂಜಾ ಕಾರ್ಯಕ್ರಮವನ್ನು ಅರ್ಚಕ ಕೃಷ್ಣಮೂರ್ತಿ ಭಟ್, ಕಾವೇರಿ ನದಿಯಿಂದ ನೀರನ್ನು ತಂದು ಸ್ವಚ್ಛಗೊಳಿಸಿ ಕಾವೇರಿ ಮಾತೆಗೆ ಹೊಸ ಸೀರೆ ಕುಪ್ಪಸ ಒಡವೆಗಳನ್ನು ಧರಿಸಿ ವಿವಿಧ ಹೂಗಳಿಂದ ಅಲಂಕರಿಸಿ ಹಾಲು ತುಪ್ಪ ಎಳೆ ನೀರಿನಿಂದ ಎಡೆ ನೈವೇದ್ಯ ಮಾಡಿ ಮಹಾಮಂಗಳಾರತಿ ನೆರವೇರಿಸಲಾಯಿತು. ಬಂದಂತ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.
ಸಂಘದ ಸದಸ್ಯರಾದ ರವೀಂದ್ರ ಪ್ರಸಾದ್, ವಿಜಯೇಂದ್ರ ಪ್ರಸಾದ್, ತಿಲಕ್ ಪೂಜಾರಿ, ರುದ್ರೇಶ್, ಭಕ್ತಾದಿಗಳಾದ. ಉಮೇಶ್. ಕೊಪ್ಪ ಚಂದ್ರು. ಚಿದಾನಂದ ಮೂರ್ತಿ, ಮಹಿಳೆಯರು ಸೇರಿದಂತೆ ಪಾಲ್ಗೊಂಡಿದ್ದರು.