ಕಬಿನಿ ನದಿ ಎರಡನೇ ಹಂತದ ಯೋಜನೆಯಡಿ ಬರುವ 45 ಎಂಎಲ್‌ಡಿ ನೀರಿನಲ್ಲಿ ನಗರಪಾಲಿಕೆಗೆ 30, ಸ್ಥಳೀಯ ಸಂಸ್ಥೆಗಳಿಗೆ 15 ಟಿಎಂಸಿ ಹಂಚಿಕೆಯಾಗಿದೆ. ಇದರಲ್ಲಿ ಹೂಟಗಳ್ಳಿಗೆ 6, ಶ್ರೀರಾಂಪುರಕ್ಕೆ 3,ಬೋಗಾದಿಗೆ 4, ಕಡಕೊಳಕ್ಕೆ 2ಟಿಎಂಸಿ ಹಂಚಿಕೆಯಾಗಿದೆ. ಹೂಟಗಳ್ಳಿಗೆ 6ರ ಬದಲಿಗೆ 4 ಟಿಎಂಸಿ, ಶ್ರೀರಾಂಪುರಕ್ಕೆ 3ರ ಬದಲಿಗೆ 2 ಟಿಎಂಸಿ ಕೊಡಲಾಗುತ್ತಿದೆ. ತಕ್ಷಣವೇ ನಗರಪಾಲಿಕೆ ಅಧಿಕಾರಿಗಳು ಹಂಚಿಕೆಯಾಗಿರುವ ನೀರಿನ ಪ್ರಮಾಣವನ್ನು ಕೊಡಬೇಕು. ಡಿಯುಡಿಸಿ, ಸ್ಥಳೀಯ ಸಂಸ್ಥೆಗಳು, ನಗರಪಾಲಿಕೆ ಅಧಿಕಾರಿಗಳು ಸಮನ್ವಯತೆಯಿಂದ ಹಂಚಿಕೆ ಮಾಡಿ ನೀರು ಪೂರೈಕೆ ಮಾಡಬೇಕು ಎಂದು ತಾಕೀತು ಮಾಡಿದರು.