ಬಸವಣ್ಣನ ರೂಪ ಸಿದ್ದರಾಮಯ್ಯ : ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಬಣ್ಣನೆ

ಜಗಜ್ಯೋತಿ ಬಸವಣ್ಣ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಾಂದರ್ಭಿಕ ಚಿತ್ರ
ಜಗಜ್ಯೋತಿ ಬಸವಣ್ಣ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಾಂದರ್ಭಿಕ ಚಿತ್ರ
Published on
ಮೈಸೂರು: ಜಗಜ್ಯೋತಿ ಬಸವಣ್ಣ ನಾಡಿನ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ಶ್ರೇಯಸ್ಸು ಸಿದ್ದರಾಮಯ್ಯ ಅವರಿಗೆ ಸಲ್ಲಬೇಕು. ಬಸವಣ್ಣ ಅವರ ವ್ಯಕ್ತಿತ್ವವನ್ನು ಪ್ರಸ್ತುತ ಸಿದ್ದರಾಮಯ್ಯ ಅವರ ರೂಪದಲ್ಲಿ ಕಾಣಬಹುದು ಎಂದು ಶ್ರೀ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಬಣ್ಣಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಡಳಿತ ವತಿಯಿಂದ ನಗರದ ಕಲಾಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಸಿದ್ದರಾ ಮೇಶ್ವರ ಜಯಂತಿ ಸಮಾರಂಭದಲ್ಲಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಇದ್ದಹಾಗೆ. ಅವರು ಸಾಕಷ್ಟು ವಿಚಾರಗಳನ್ನು ಕೇಳಿಸಿ ಕೊಂಡು ಒಳಿತನ್ನು ಮಾತ್ರ ಸಮಾಜಕ್ಕೆ ಕೊಡುತ್ತಾರೆ ಎಂದರು.
ಸಿದ್ದರಾಮೇಶ್ವರರು ಕೇವಲ ಶರಣಪಂಥದ ಮಹಾಶರಣ ಮಾತ್ರವಲ್ಲ, ಅವರು ನಾಥಪರಂಪರೆಯ ಅಗ್ರಜ ಆಗಿದ್ದರು. ಶ್ರೀ ಸಿದ್ದರಾಮೇಶ್ವರ ನೀಡಿದ ವಚನ ಧರ್ಮ ಕೇವಲ ಒಂದು ಧರ್ಮವಲ್ಲ, ಅದು ವೈಜ್ಞಾನಿಕ, ವೈಚಾರಿಕ ಧರ್ಮ. ಜ್ಞಾನಿಗಳು, ವಿಜ್ಞಾನಿಗಳು ಒಪ್ಪಿಕೊಳ್ಳಬಹುದಾದ ಧರ್ಮ. ಹಲವಾರು ಸಮಸ್ಯೆಗಳಿಗೆ ಶ್ರೀ ಸಿದ್ದರಾಮೇಶ್ವರ ಅವರ ವಚನ ಸಾಹಿತ್ಯದಲ್ಲಿ ಪರಿಹಾರವಿದೆ. ಶ್ರೀ ಬಸವಣ್ಣ ಅವರ ಜತೆಗೆ ಇದ್ದ ಶ್ರೀ ಸಿದ್ದರಾಮೇಶ್ವರರು ನೀಡಿದ ವಚನ ಧರ್ಮ ಯಾವತ್ತೂ ನಾಶವಾಗದೆ ಇರುವಂತಹದ್ದು ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಶಿವರಾಜ ತಂಗಡಗಿ, ಕೆ.ವೆಂಕಟೇಶ್, ಶಾಸಕರಾದ ಅನಿಲ್ ಚಿಕ್ಕಮಾದು, ಕೆ.ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯರಾದ ಡಿ.ತಿಮ್ಮಯ್ಯ, ಡಾ.ಯತೀಂದ್ರ ಸಿದ್ದರಾಮಯ್ಯ, ವಿವಿಧ ನಿಗಮ ಮಂಡಳಿ ಅಧ್ಯಕ್ಷರಾದ ಎಂ. ರಾಮಪ್ಪ, ಮಾನಸ, ಅಯೂಬ್ ಖಾನ್, ರಂಗಸ್ವಾಮಿ, ಗಣೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಜೆ.ಮಂಜುನಾಥ್, ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ್, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ್ ರೆಡ್ಡಿ ಹಾಗೂ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net