ಮಂಜುನಾಥ್ ಆರೋಗ್ಯ ವಿಚಾರಿಸಿದ ಸಿದ್ದರಾಮಯ್ಯ

ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಅವರ ಆರೋಗ್ಯವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಚಾರಿಸಿದರು.
ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಅವರ ಆರೋಗ್ಯವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಚಾರಿಸಿದರು.
Published on
ಹನಗೋಡು: ಬೆಂಗಳೂರಿನಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ಅವರ ಆರೋಗ್ಯವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಚಾರಿಸಿದರು.
ಮೈಸೂರಿನ ಸರಸ್ವತಿಪುರಂ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಮಂಜುನಾಥ್ ಅವರನ್ನು ಶುಕ್ರವಾರ ಭೇಟಿ ಮಾಡಿ ಆರೋಗ್ಯ ವಿಚಾರಿಸಿ, ಶೀಘ್ರ ಗುಣಮುಖರಾಗುವಂತೆ ಶುಭ ಹಾರೈಸಿದರು.
ಸಿದ್ದರಾಮಯ್ಯ
ಈ ವೇಳೆ ಮಂಜುನಾಥ್ ತಂದೆ ಎನ್.ಎನ್.ಪ್ರೇಮಕುಮಾರ್ ಅವರೊಂದಿಗೆ ಕೆಲಹೊತ್ತು ರಾಜಕೀಯ ವಿದ್ಯಮಾನಗಳ ಬಗ್ಗೆ ಮೆಲುಕು ಹಾಕಿದರು.
ರಾಜ್ಯ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಡಾ.ಪುಷ್ಪಾಅಮರ್‌ನಾಥ್, ಮಂಜುನಾಥರ ತಾಯಿ ರತ್ನಾ ಪ್ರೇಮಕುಮಾರ್, ಪುತ್ರ ಪವನ್ ತಪಸ್ವಿ, ಸೊಸೆ ಅಮೂಲ್ಯ ಪವನ್, ಪುತ್ರಿ ಲಕ್ಷ್ಮೀ ಮಾನಸಾ, ಅಳಿಯ ಹೃತಿಕ್ ಸದಾನಂದ, ಕಚೇರಿಯ ನಾಗೇಶ್, ವಿಮಲ್, ರಾಜೇಶ್ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net