ಸಿದ್ದರಾಮೇಗೌಡ ದೊಡ್ಡಮುಲಗೂಡು ಕೃಷಿ ಪತ್ತಿನ ಸಂಘದ ಅಧ್ಯಕ್ಷ

 ದೊಡ್ಡಮುಲಗೂಡು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಸಿದ್ದರಾಮೇಗೌಡ ಆಯ್ಕೆಯಾದರು. ವೈ.ಎಸ್, ರಾಮುಸ್ವಾಮಿ, ಕಲ್ಪನಾನಾಗರಾಜು, ಕೆ. ಶಶಿಕುಮಾರ್, ಸುರೇಶ್, ಮಾಜಿ ಅಧ್ಯಕ್ಷ ಅಂಕೇಗೌಡ, ಪಂಚಲಿಂಗೇಗೌಡ ಇದ್ದರು.
ದೊಡ್ಡಮುಲಗೂಡು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಸಿದ್ದರಾಮೇಗೌಡ ಆಯ್ಕೆಯಾದರು. ವೈ.ಎಸ್, ರಾಮುಸ್ವಾಮಿ, ಕಲ್ಪನಾನಾಗರಾಜು, ಕೆ. ಶಶಿಕುಮಾರ್, ಸುರೇಶ್, ಮಾಜಿ ಅಧ್ಯಕ್ಷ ಅಂಕೇಗೌಡ, ಪಂಚಲಿಂಗೇಗೌಡ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ದೊಡ್ಡಮುಲಗೂಡು ಗ್ರಾಮ
  • ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ
ಬನ್ನೂರು: ಸಮೀಪದ ದೊಡ್ಡಮುಲಗೂಡು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಸಿದ್ದರಾಮೇಗೌಡ ಅವಿರೋಧವಾಗಿ ಆಯ್ಕೆಯಾದರು.
12 ಸದಸ್ಯರ ಬಲವಿರುವ ಸಂಘದಲ್ಲಿ 7 ಜೆಡಿಎಸ್‌ನ ಬೆಂಬಲಿತರಿದ್ದು, ಅಧ್ಯಕ್ಷರ ಆಯ್ಕೆಗಾಗಿ ಚುನಾವಣಾಧಿಕಾರಿ ನಾರಾಯಣ್ ನೇತೃತ್ವದಲ್ಲಿ ಸಭೆಯಲ್ಲಿ ಜೆಡಿಎಸ್ ಬೆಂಬಲಿತ ಸಿದ್ದರಾಮೇಗೌಡ ಹೊರತುಪಡಿಸಿ ಬೇರಾರೂ ನಾಮಪತ್ರ ಸಲ್ಲಿಸಿರಲಿಲ್ಲ. ಹೀಗಾಗಿ ಅವಿರೋಧ ಆಯ್ಕೆ ನಡೆಯಿತು.
ಸರ್ಕಾರದಿಂದ ದೊರೆಯುವ ಸೌಲಭ್ಯವನ್ನು ಪ್ರಾಮಾಣಿಕವಾಗಿ ಜನರಿಗೆ ತಲುಪಿಸಲಾಗುವುದು ಎಂದು ಸಿದ್ದರಾಮೇಗೌಡ ಹೇಳಿದರು.
ಜೆಡಿಎಸ್‌ನ ರಾಜ್ಯ ಕಾರ್ಯಾಧ್ಯಕ್ಷ ವೈ.ಎಸ್.ರಾಮಸ್ವಾಮಿ ಮಾತನಾಡಿದರು. ಸಹಕಾರ ಸಂಘದ ಉಪಾಧ್ಯಕ್ಷೆ ಕಲ್ಪನಾ ನಾಗರಾಜು, ಕೆ. ಶಶಿಕುಮಾರ್, ಸುರೇಶ್, ಮಾಜಿ ಅಧ್ಯಕ್ಷ ಅಂಕೇಗೌಡ, ಪಂಚಲಿಂಗೇಗೌಡ, ಗೋವಿಂದ, ಲಕ್ಷ್ಮಮ್ಮ, ಡಿ.ಕೆ.ಜಯರಾಂ, ಮೇಲ್ವೀಚಾರಕರಾದ ಮಂಜೇಶ್‌ಗೌಡ, ಮಾಜಿ ತಾಲ್ಲೂಕು ಪಂಚಾಯ್ತಿ ಸದಸ್ಯ ಶ್ರೀನಿವಾಸ್‌ಗೌಡ, ಬಿ.ಆರ್. ಲೋಕೇಶ್, ಮೆಣಸಿಕ್ಯಾತನಹಳ್ಳಿ ಮಧು, ಗ್ರಾಮದ ಮುಖಂಡ ರಾಜೇಶ್, ಕೆ.ಚನ್ನೇಗೌಡ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net