ಶ್ರೀಕೃಷ್ಣರಾಜೇಂದ್ರ ಸಹಕಾರ ಬ್ಯಾಂಕ್ ಉನ್ನತ ಸಾಧನೆ:ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಮೆಚ್ಚುಗೆ
ನಗರದ ಶ್ರೀಕೃಷ್ಣರಾಜೇಂದ್ರ ಸಹಕಾರ (ಕೆ.ಆರ್.) ಬ್ಯಾಂಕ್‌ನಿಂದ ಆಯೋಜಿಸಿದ್ದ ಸರ್ವ ಸದಸ್ಯರ ಸಭೆಯಲ್ಲಿ ಹಿರಿಯ ಸಹಕಾರಿಗಳಿಗೆ ಸಹಕಾರ ರತ್ನ ಪ್ರಶಸ್ತಿ ನೀಡಲಾಯಿತು. ಶ್ರೀಈಶ್ವರಾನಂದಪುರಿ ಸ್ವಾಮೀಜಿ, ಕೆ.ಶಿವಕುಮಾರ್, ಡಿ.ಬಸವರಾಜು(ಬಸಪ್ಪ), ಎಚ್.ಎಸ್.ಸರ್ವಮಂಗಳಾ, ನಂ.ಸಿದ್ದಪ್ಪ, ಜಿ.ಎಂ.ಪಂಚಾಕ್ಷರಿ, ಎಚ್.ವಿ.ಭಾಸ್ಕರ್, ಎಂ.ಡಿ.ಪಾರ್ಥಸಾರಥಿ(ಪಾತಿ), ಪ್ರತಿಧ್ವನಿ ಪ್ರಸಾದ್, ಬಿ.ನಾಗಜ್ಯೋತಿ, ಎಂ.ಎನ್.ನವೀನ್‌ಕುಮಾರ್ ಇತರರು ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಯಾವುದೇ ಒಂದು ಸಂಸ್ಥೆ ಯಶಸ್ವಿಯಾಗಿ ನಡೆಯಬೇಕಾದರೆ ಸದಸ್ಯರು, ಆಡಳಿತ ಮಂಡಳಿಯ ಸಹಕಾರ ಅಗತ್ಯ
ನೂರು ವರ್ಷಗಳ ಕಾಲ ಕೆ.ಆರ್.ಬ್ಯಾಂಕ್ ಯಶಸ್ವಿಯಾಗಿ ನಡೆದುಕೊಂಡು ಬಂದಿರುವುದಕ್ಕೆ ಪರಸ್ವರ ಸಹಕಾರ ಸಾಕ್ಷಿಯಾಗಿದೆ
ಮೈಸೂರು:
ಆಡಳಿತ ಮಂಡಳಿ, ಸದಸ್ಯರ ನಡುವೆ ಪರಸ್ಪರ ಸಹಕಾರದಿಂದ ಶ್ರೀಕೃಷ್ಣರಾಜೇಂದ್ರ ಸಹಕಾರ ಬ್ಯಾಂಕ್ ಇಂದು ಉನ್ನತ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಹೊಸದುರ್ಗದ ಶ್ರೀಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಹೇಳಿದರು.
ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಆಯೋಜಿಸಿದ್ದ ಎನ್.ಮಾಧವರಾವ್(ಅಗ್ರಹಾರ) ವೃತ್ತದ ಶ್ರೀ ಕೃಷ್ಣರಾಜೇಂದ್ರ ಸಹಕಾರ ಬ್ಯಾಂಕ್‌ನ 101ನೇ ಸರ್ವ ಸದಸ್ಯರ ಸಭೆಯಲ್ಲಿ ಹಿರಿಯ ಸದಸ್ಯರ ಸನ್ಮಾನ, ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಯಾವುದೇ ಒಂದು ಸಂಸ್ಥೆ ಯಶಸ್ವಿಯಾಗಿ ನಡೆಯಬೇಕಾದರೆ ಸದಸ್ಯರು, ಆಡಳಿತ ಮಂಡಳಿಯ ಸಹಕಾರ ಅಗತ್ಯ. ಆಗ ಮಾತ್ರ ಆ ಸಂಸ್ಥೆ ಉನ್ನತಿಯಾಗಿ ನಡೆಯುತ್ತದೆ. ನೂರು ವರ್ಷಗಳ ಕಾಲ ಕೆ.ಆರ್.ಬ್ಯಾಂಕ್ ಯಶಸ್ವಿಯಾಗಿ ನಡೆದುಕೊಂಡು ಬಂದಿರುವುದಕ್ಕೆ ಪರಸ್ವರ ಸಹಕಾರ ಸಾಕ್ಷಿಯಾಗಿದೆ ಎಂದರು.
ಬ್ಯಾಂಕ್ ಅಧ್ಯಕ್ಷ ಡಿ.ಬಸವರಾಜು(ಬಸಪ್ಪ) ಮಾತನಾಡಿ, ಎಲ್ಲ ಸಹಕಾರದಿಂದ ಈ ಸಾಲಿನಲ್ಲಿ ಬ್ಯಾಂಕ್ 33 ಲಕ್ಷ ರೂ. ಲಾಭ ಗಳಿಸಿದೆ. 9,400 ಸದಸ್ಯರಿದ್ದು, ವಾರ್ಷಿಕ ವಹಿವಾಟು 110 ಕೋಟಿ ರೂ. ಹಾಗೂ ಸ್ವಂತ ಬಂಡವಾಳ 70 ಕೋಟಿ ಇದೆ. ಆರ್‌ಬಿಐ ನಿರ್ದೇಶನ ಬಂದ ಬಳಿಕ ಶೇ.10ರಷ್ಟು ಲಾಭಾಂಶ ವಿತರಣೆಗೆ ತೀರ್ಮಾನಿಸಲಾಗಿದೆ. ಮುಂದಿನ ದಿನಗಳಲ್ಲಿ ಎಟಿಎಂ ಸ್ಥಾಪನೆ ಹಾಗೂ ಸಿಎ ನಿವೇಶನ ಪಡೆಯುವ ಸಂಬಂಧ ಸದಸ್ಯರಿಂದ ಸಲಹೆ ಬಂದಿದ್ದು, ಅದನ್ನು ಕಾರ್ಯಗತ ಮಾಡುವ ನಿಟ್ಟಿನಲ್ಲಿ ಶ್ರಮಿಸಲಾಗುವುದು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯರಾದ ಕೌಟಿಲ್ಯ ರಘು, ಕೆ.ಶಿವಕುಮಾರ್ ಅತಿಥಿಯಾಗಿ ಆಗಮಿಸಿದ್ದರು. ಬ್ಯಾಂಕ್‌ನ ಉಪಾಧ್ಯಕ್ಷೆ ಎಚ್.ಎಸ್.ಸರ್ವಮಂಗಳಾ, ನಿರ್ದೇಶಕರಾದ ನಂ.ಸಿದ್ದಪ್ಪ, ಜಿ.ಎಂ.ಪಂಚಾಕ್ಷರಿ, ಎಚ್.ವಿ.ಭಾಸ್ಕರ್, ಎಂ.ಡಿ.ಪಾರ್ಥಸಾರಥಿ(ಪಾತಿ), ಪ್ರತಿಧ್ವನಿ ಪ್ರಸಾದ್, ತಾಯೂರು ಗಣೇಶ್‌ಮೂರ್ತಿ, ಬಿ.ನಾಗಜ್ಯೋತಿ, ಎಂ.ಎನ್.ನವೀನ್‌ಕುಮಾರ್, ಎಂ.ಎಸ್.ಅರುಣ್ ಸಿದ್ದಪ್ಪ, ಎಂ.ಶಿವಪ್ರಸಾದ್, ವೃತ್ತಿಪರ ನಿರ್ದೇಶಕರಾದ ಎಚ್.ಕೆ.ಅನಂತ, ವಿ.ಶ್ರೀನಿವಾಸಶೆಟ್ಟಿ, ಪ್ರಭಾರ ವ್ಯವಸ್ಥಾಪಕಿ ಶಾಂತಲಾ ಇತರರು ಇದ್ದರು.
ಸಮಾರಂಭದಲ್ಲಿ ಹಲವು ಹಿರಿಯ ಸದಸ್ಯರಿಗೆ ‘ಸಹಕಾರ ಸೇವಾ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಲ್ಲದೆ ಎಸ್‌ಎಸ್‌ಎಲ್‌ಸಿ ಹಾಗೂ ಪಿಯು ಪರೀಕ್ಷೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿದ ಬ್ಯಾಂಕ್‌ನ ಸದಸ್ಯರ ಮಕ್ಕಳನ್ನು ಪುರಸ್ಕರಿಸಲಾಯಿತು.