ಸರಗೂರು: ತಾಲೂಕಿನ ಮೊಳೆಯೂರು ಗ್ರಾಮದಲ್ಲಿ ಭಾನುವಾರ ಶ್ರೀಬಿಲ್ ಕುಮಾರಸ್ವಾಮಿ ಜಾತ್ರಾ ಕೊಂಡೋತ್ಸವ ವಿಜೃಂಭಣೆಯಿಂದ ನೆರವೇರಿತು. .ಜಾತ್ರಾ ಮಹೋತ್ಸವದ ಅಂಗವಾಗಿ ರಥೋತ್ಸವ, ಅಸ್ತಮ್ಮ ಕೊಂಡೋತ್ಸವ ಹಾಗೂ ಗ್ರಾಮ ದೇವತೆ ಮಾರಮ್ಮನಿಗೆ ವಿಶೇಷ ಪೂಜೆ ಜರುಗಿತು..ಜಾತ್ರಾ ಮಹೋತ್ಸವದ ಅಂಗವಾಗಿ ದೇವಸ್ಥಾನವನ್ನು ವಿವಿಧ ಹೂವುಗಳಿಂದ ಅಲಂಕರಿಸಲಾಯಿತು. ದೇವರ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಭಕ್ತರಿಂದ ವಿವಿಧ ಸೇವಾ ಕಾರ್ಯಗಳು ಜರುಗಿತು. .ಗಂಗೆ ತಾಣದಿಂದ ದೇವರ ಉತ್ಸವ ಮೂರ್ತಿಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಸತ್ತಿಗೆ ಸೇರಿದಂತೆ ಇನ್ನಿತರ ಕಲಾ ಪ್ರಕಾರಗಳು ಭಾಗಿಯಾಗಿದ್ದವು..ಗ್ರಾಮದ ಅಸ್ತಮ್ಮ ದೇವಸ್ಥಾನದ ಮುಂಭಾಗ ಕೊಂಡೋತ್ಸವ ನಡೆಯಿತು. .ಮೊಳೆಯೂರು ಗ್ರಾಮಸ್ಥರು ಭಾಗವಹಿಸಿದ್ದರು.