ಹಿಂದೂ ಸಮಾಜೋತ್ಸವ ಸಮಿತಿಯಿಂದ ಶೋಭಾ ಯಾತ್ರೆ

ಹಿಂದೂ ಸಮಾಜೋತ್ಸವ ಸಮಿತಿಯಿಂದ ಶೋಭಾ ಯಾತ್ರೆ
ಹಿಂದೂ ಸಮಾಜೋತ್ಸವ ಸಮಿತಿಯಿಂದ ಶೋಭಾ ಯಾತ್ರೆ
Published on
ಹಿಂದೂ ಸಮಾಜೋತ್ಸವ ಸಮಿತಿ ಲಕ್ಷ್ಮೀಪುರಂ ವತಿಯಿಂದ ಶನಿವಾರ ನಗರದಲ್ಲಿ ಶೋಭಾ ಯಾತ್ರೆ ನಡೆಯಿತು. ಜಯನಗರದ ರಾಮ ಮಂದಿರದಿಂದ ಆರಂಭಗೊಂಡ ಯಾತ್ರೆ ಕೃಷ್ಣಮೂರ್ತಿಪುರಂನ ಬಿಎಸ್‌ಎಸ್ ವಿದ್ಯೋದಯ ಆವರಣದವರೆಗೆ ನೆರವೇರಿತು.
ಮೆರವಣಿಗೆಯನ್ನು ನಗರಪಾಲಿಕೆ ಮಾಜಿ ಸದಸ್ಯ ಚನ್ನಪ್ಪ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು. ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ವನವಾಸಿ ಕಲ್ಯಾಣ ಕರ್ನಾಟಕ ಪ್ರಾಂತದ ಸಂಘಟನಾ ಕಾರ್ಯದರ್ಶಿ ಮಣಿವಣ್ಣನ್ ಮಾತನಾಡಿ, ಹಿಂದೂ ಸಮಾಜದಲ್ಲಿ ಹಿಂದುತ್ವ ಮುಖ್ಯ. ಧರ್ಮದ ಎಲ್ಲ ಸಮಾಜದವರು ಒಗ್ಗಟ್ಟಾಗಿರಬೇಕು. ನಮ್ಮೆಲ್ಲರ ವ್ಯವಹಾರಗಳು ಕೂಡ ನಮ್ಮವರ ಜತೆಯೇ ಇರಬೇಕು. ಇವತ್ತು ನಾವೆಲ್ಲರೂ ವಿವೇಕಾನಂದರ ಆದರ್ಶ ಪಾಲನೆ ಮಾಡಬೇಕು. ನಾವೆಲ್ಲರೂ ಧರ್ಮದ ಕೆಲಸ ಮಾಡಬೇಕು. ಸ್ವದೇಶಿ ವಸ್ತುಗಳಿಗೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕು ಎಂದರು.
ಶ್ರೀ ಇಮ್ಮುಡಿ ಗುರುಲಿಂಗ ಸ್ವಾಮೀಜಿ ಮಾತನಾಡಿದರು. ಮಾ.ವೆಂಕಟರಾಮು, ಶಾಸಕ ಟಿ.ಎಸ್.ಶ್ರೀವತ್ಸ, ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ, ಪ್ರಮುಖರಾದ ಜೋಗಿ ಮಂಜು, ರಾಕೇಶ್‌ಗೌಡ, ವಿ.ಶೈಲೇಂದ್ರ, ನಿಶಾಂತ್, ಕೃಷ್ಣನಾಯಕ್, ಅಜಯ್ ಶಾಸ್ತ್ರಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net