ಅವರಿಗೆ ಪತ್ನಿ ಒಬ್ಬ ಪುತ್ರ, ಒಬ್ಬ ಪುತ್ರಿ ಇದ್ದಾರೆ. ಡಿ.9ರಂದು ನಗರದ ಸೆಸ್ಕ್ ಉಪ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಸಂಭವಿಸಿದ ವಿದ್ಯುತ್ ಅವಘಡದಿಂದ ತೀವ್ರವಾಗಿ ಗಾಯಗೊಂಡು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 20 ದಿನಗಳ ಸಾವು-ಬದುಕಿನ ಹೋರಾಟದ ನಂತರ ಶುಕ್ರವಾರ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರು. ಮೃತರ ಅಂತ್ಯಕ್ರಿಯೆ ಹುಟ್ಟೂರು ಧರ್ಮಾಪುರದಲ್ಲಿ ಸಂಜೆ ನಡೆಯಿತು.