ಅಡುಗೆ ಅನಿಲ ಸಿಲಿಂಡರ್‌ಗಾಗಿ ಪರದಾಟ

ನಂಜನಗೂಡು ನಗರದ ಗ್ಯಾಸ್ ಏಜೆನ್ಸಿ ಎದುರು ಸೋಮವಾರ ಅಡುಗೆ ಅನಿಲ ಸಿಲಿಂಡರ್ ಬುಕ್ಕಿಂಗ್ ಮಾಡಲು ಗ್ರಾಹಕರು ಸಾಲಿನಲ್ಲಿ ನಿಂತಿದ್ದರು.
ನಂಜನಗೂಡು ನಗರದ ಗ್ಯಾಸ್ ಏಜೆನ್ಸಿ ಎದುರು ಸೋಮವಾರ ಅಡುಗೆ ಅನಿಲ ಸಿಲಿಂಡರ್ ಬುಕ್ಕಿಂಗ್ ಮಾಡಲು ಗ್ರಾಹಕರು ಸಾಲಿನಲ್ಲಿ ನಿಂತಿದ್ದರು.
Published on
ನಂಜನಗೂಡು: ಇಸ್ರೇಲ್-ಇರಾನ್-ಅಮೆರಿಕ ಯುದ್ಧದ ಪರಿಣಾಮ ನಗರದಲ್ಲಿ ಅಡುಗೆ ಅನಿಲ ಸಿಲಿಂಡರ್‌ಗಾಗಿ ಗ್ರಾಹಕರು ನಿತ್ಯ ಪರದಾಡುವಂತಾಗಿದೆ ಎಂಬ ದೂರುಗಳು ಗ್ರಾಹಕರಿಂದ ಕೇಳಿಬರುತ್ತಿವೆ.
ನಗರದಲ್ಲಿರುವ ಗ್ಯಾಸ್ ಏಜೆನ್ಸಿ ಕಚೇರಿಯೊಂದರ ಎದುರು ಸೋಮವಾರ ಗ್ಯಾಸ್ ಬುಕ್ಕಿಂಗ್ ಮಾಡಲು ಬೆಳಗ್ಗೆ 6 ಗಂಟೆಯಿಂದಲೇ ನೂರಾರು ಗ್ರಾಹಕರು ನಿಂತಿರುವುದು ಕಂಡುಬಂತು. ಈ ಕುರಿತು ಕಲ್ಕುಂದ ರಾಹುಲ್ ಮಾತನಾಡಿ, ಸುಮಾರು 600 ರಿಂದ 700 ಜನ ಪ್ರತಿನಿತ್ಯ ಕಚೇರಿಗೆ ಅಲೆಯುತ್ತಿದ್ದಾರೆ. ಈ ಕುರಿತು ಏಜೆನ್ಸಿಯ ಕಚೇರಿಯಲ್ಲಿ ವಿಚಾರಿಸಿದರೆ ಸರ್ಕಾರದಿಂದ ಕಡಿಮೆ ಸಂಖ್ಯೆಯಲ್ಲಿ ಸಿಲಿಂಡರ್ ಸರಬರಾಜು ಆಗುತ್ತದೆ. ನಾವು ಏನು ಮಾಡಲು ಸಾಧ್ಯವಾಗುವುದಿಲ್ಲ ಎನ್ನುವ ಉತ್ತರವನ್ನು ಗ್ರಾಹಕರಿಗೆ ನೀಡುತ್ತಿದ್ದಾರೆ ಎಂದು ಹೇಳಿದರು.
ಏಜೆನ್ಸಿಯ ಸಿಬ್ಬಂದಿ ಇಲ್ಲ ಸಲ್ಲದ ಉತ್ತರವನ್ನು ನೀಡಿ ಗ್ರಾಹಕರನ್ನು ದಿನ ನಿತ್ಯ ಅಲೆಸುತ್ತಿದ್ದಾರೆ. ಸುಮಾರು 30 ರಿಂದ 40 ಕಿ.ಮೀ. ದೂರದಿಂದ ಬರುವಂತಾಗಿದೆ. ಗ್ಯಾಸ್ ಯಾವಾಗ ಸಿಗಲಿದೆ ಎಂಬುದನ್ನು ತಿಳಿಸುತ್ತಿಲ್ಲ. ತಾಲೂಕು ಆಡಳಿತ ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಗ್ರಾಹಕರ ಸಮಸ್ಯೆ ಬಗೆಹರಿಸಬೇಕು ಎಂದು ಗ್ರಾಹಕರು ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net