ಸಾಲಿಗ್ರಾಮ, ಕೆ.ಆರ್.ನಗರ ತಾಲೂಕಿಗೆ ಶೇ.92.13 ಫಲಿತಾಂಶ

ಡಿ.ಜಿ.ವಿನುತಾ
ಡಿ.ಜಿ.ವಿನುತಾ
Published on

ಪ್ರಮುಖ ಮುಖ್ಯಾಂಶಗಳು

  • ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಕೃಷ್ಣಪ್ಪ ಮಾಹಿತಿ
  • ಬಿ.ಎಸ್.ಮಾದಪ್ಪ ಪ್ರೌಢಶಾಲೆಯ ಡಿ.ಜಿ.ವಿನುತಾಗೆ 623 ಅಂಕ
ಕೆ.ಆರ್.ನಗರ: ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕುಗಳಿಂದ ಎಸ್ಸೆಸ್ಸೆಲ್ಸಿಯಲ್ಲಿ 2,658 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 2,449 ಮಂದಿ ಉತ್ತೀರ್ಣರಾಗಿದ್ದಾರೆ. ಒಟ್ಟಾರೆ ಶೇ.92.13 ಫಲಿತಾಂಶ ಬಂದಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಕೃಷ್ಣಪ್ಪ ಹೇಳಿದರು.
ಪಟ್ಟಣದ ಬಿಇಒ ಕಚೇರಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೆ.ಆರ್.ನಗರ ಮತ್ತು ಸಾಲಿಗ್ರಾಮ ಅವಳಿ ತಾಲೂಕುಗಳಲ್ಲಿ 15 ಶಾಲೆಗಳು ಶೇ.100ರಷ್ಟು ಫಲಿತಾಂಶ ಪಡೆದಿವೆ. ಪಟ್ಟಣದ ಸರ್ಕಾರಿ ಪ್ರೌಢಶಾಲೆ ಬನ್ನಿಮಂಟಪ್ಪ, ಬಿ.ಎಸ್.ಮಾದಪ್ಪ, ಲಯನ್ಸ್ ಪ್ರೌಢಶಾಲೆ(ಇಂಗ್ಲಿಷ್ ಮತ್ತು ಕನ್ನಡ ವಿಭಾಗ), ಕನಕ ಪಬ್ಲಿಕ್ ಶಾಲೆ, ಬಿಜಿಎಸ್ ಪ್ರೌಢಶಾಲೆ, ಎಸ್‌ಎನ್‌ಎಸ್ ಪ್ರೌಢಶಾಲೆ, ಡಿ.ಕೆ.ಕೊಪ್ಪಲು ಸರ್ಕಾರಿ ಪ್ರೌಢಶಾಲೆ, ದೊಡ್ಡೆಕೊಪ್ಪಲು ಸಂತ ಅಂತೋಣಿ ಶಾಲೆ, ಹೈ ಕಾಳೇನಹಳ್ಳಿ ಗುರುಕುಲ, ಸಾಲಿಗ್ರಾಮ ತಾಲೂಕಿನ ಹನಸೋಗೆಯ ಸರ್ಕಾರಿ ಪ್ರೌಢಶಾಲೆ, ಹೆಬ್ಸೂರಿನ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ, ಅರಕರೆ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ, ಮಿರ್ಲೆ ಸಿಇಟಿ ಶಾಲೆ, ಸಾ.ರಾ.ವಿದ್ಯಾ ಸಂಸ್ಥೆಗಳು ಸಾಧನೆ ಮಾಡಿವೆ ಎಂದು ತಿಳಿಸಿದರು.
ಸರ್ಕಾರಿ ಶಾಲೆಗಳು ಶೇ 90.5, ಅನುದಾನಿತ ಶಾಲೆಗಳು ಶೇ.88.4, ಅನುದಾನ ರಹಿತ ಶಾಲೆಗಳಿಗೆ ಶೇ 97.72 ರಷ್ಟು ಫಲಿತಾಂಶ ಪಡೆದಿದ್ದು 529 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 944 ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿದ್ದಾರೆ.
ಬಿ.ಎಸ್.ಮಾದಪ್ಪ ಪ್ರೌಢಶಾಲೆಯ ಡಿ.ಜಿ.ವಿನುತಾ 625/623 ಅಂಕ ಪಡೆಯುವ ಮೂಲಕ ಜಿಲ್ಲೆಗೆ ಎರಡನೇ ಸ್ಥಾನ ಪಡೆದಿದ್ದಾಳೆ. 31 ಮಕ್ಕಳು 600ಕ್ಕಿಂತ ಹೆಚ್ಚು ಅಂಕ ಪಡೆದಿದ್ದಾರೆ ಎಂದು ಮಾಹಿತಿ ನೀಡಿದ ಬಿಇಒ ಆರ್.ಕೃಷ್ಣಪ್ಪ ತೇರ್ಗಡೆಗೊಂಡ ಎಲ್ಲ್ಲ ವಿದ್ಯಾರ್ಥಿಗಳನ್ನು ಶಿಕ್ಷಣ ಇಲಾಖೆ ವತಿಯಿಂದ ಅಭಿನಂದಿಸುವುದಾಗಿ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net