ಮೃತ ಭಾಸ್ಕರ್ ಮನೆಗೆ ಶಾಸಕ, ಸೆಸ್ಕ್ ಅಧಿಕಾರಿ ಭೇಟಿ

ಸಾಲಿಗ್ರಾಮ ಸಮೀಪದ ಬಳ್ಳೂರು ಗ್ರಾಮದಲ್ಲಿ ವಿದ್ಯುತ್ ತಗುಲಿ ಮೃತಪಟ್ಟ ರೈತ ಕುಟುಂಬಕ್ಕೆ ಸೆಸ್ಕ್ ಅಧಿಕಾರಿ ಮಧುಸೂದನ್, ಶಾಸಕ ರವಿಶಂಕರ್ ಭೇಟಿ ನೀಡಿ 5 ಲಕ್ಷ ರೂ.ಪರಿಹಾರ ನೀಡಿದರು.
ಸಾಲಿಗ್ರಾಮ ಸಮೀಪದ ಬಳ್ಳೂರು ಗ್ರಾಮದಲ್ಲಿ ವಿದ್ಯುತ್ ತಗುಲಿ ಮೃತಪಟ್ಟ ರೈತ ಕುಟುಂಬಕ್ಕೆ ಸೆಸ್ಕ್ ಅಧಿಕಾರಿ ಮಧುಸೂದನ್, ಶಾಸಕ ರವಿಶಂಕರ್ ಭೇಟಿ ನೀಡಿ 5 ಲಕ್ಷ ರೂ.ಪರಿಹಾರ ನೀಡಿದರು.
Published on
ಸಾಲಿಗ್ರಾಮ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಮಂಗಳವಾರ ಮೃತಪಟ್ಟಿದ್ದ ಭಾಸ್ಕರ್ ಅವರ ಮನೆಗೆ ಸೆಸ್ಕ್ ಅಧಿಕಾರಿಗಳೊಂದಿಗೆ ಶಾಸಕ ಡಿ.ರವಿಶಂಕರ್ ಭೇಟಿ ನೀಡಿ ಮೃತರ ಕುಟುಂಬದವರಿಗೆ ಸೆಸ್ಕ್ ವತಿಯಿಂದ 5 ಲಕ್ಷ ರೂ.ಪರಿಹಾರದ ಚೆಕ್ ನೀಡಿದರು.
ಶಾಸಕ ಡಿ.ರವಿಶಂಕರ್ ಮಾತನಾಡಿ, ಅವರ ಕುಟುಂಬಕ್ಕೆ ಪರಿಹಾರ ಒದಗಿಸುವುದು ಒಂದು ಕಡೆ ಇರಲಿ. ಅದನ್ನು ಕೊಡಿಸುವ ಕೆಲಸ ಮಾಡಲು ನಾನು ಕುಟುಂಬದವರೊಂದಿಗೆ ಇರುತ್ತೇನೆ. ಆದರೆ ಭಾಸ್ಕರ್ ಅವರನ್ನು ಕಳೆದುಕೊಂಡಿರುವ ಈ ಕುಟುಂಬಕ್ಕೆ ಧೈರ್ಯ ತುಂಬುವ ಕೆಲಸವನ್ನು ನಾವೆಲ್ಲರೂ ಮಾಡೋಣ. ಇದಲ್ಲದೆ ಸರ್ಕಾರದ ವತಿಯಿಂದಲೂ ಪರಿಹಾರ ಕೊಡಿಸಲಾಗುವುದು ಎಂದು ಭರವಸೆ ನೀಡಿದ ಶಾಸಕರು, ಸ್ಥಳದಲ್ಲೇ ವೈಯಕ್ತಿಕವಾಗಿಯೂ ನೆರವು ನೀಡಿ ಕುಟುಂಬದವರಿಗೆ ಧೈರ್ಯ ತುಂಬಿದರು.
ನಂತರ ಮೃತದೇಹವನ್ನು ಸಾಲಿಗ್ರಾಮ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ತಂದು ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಬಳ್ಳೂರು ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.
ಪೊಲೀಸ್ ಇನ್‌ಸ್ಪೆಕ್ಟರ್ ಶಶಿಕುಮಾರ್, ಸೆಸ್ಕ್ ಇಇ ಅನಿತಾ, ಸಾಲಿಗ್ರಾಮ ಎಇಇ ಮಧುಸೂದನ್ ಮತ್ತಿತರರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net