ರೈಲ್ವೆಯಲ್ಲಿ ಸುರಕ್ಷತೆಯೇ ಮೊದಲ ಆದ್ಯತೆಯಾಗಿದ್ದು, ಪ್ರತಿಯೊಬ್ಬ ಸಿಬ್ಬಂದಿಯೂ ಸುರಕ್ಷತೆಯ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್ ಹೇಳಿದರು.
ಮೈಸೂರು ರೈಲ್ವೆ ಮೈದಾನದಲ್ಲಿ ಶನಿವಾರ 80ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ವಾತನಾಡಿದರು.
ಕಳೆದ ವರ್ಷಕ್ಕೆ ಹೋಲಿಸಿದರೆ ವಿಭಾಗದಲ್ಲಿ ಸರಕು ಸಾಗಣೆ ಶೇ.9.74 ಹಾಗೂ ಸರಕು ರೈಲುಗಳ ವೇಗ ಶೇ.14ರಷ್ಟು ಹೆಚ್ಚಾಗಿದೆ. ಎನ್‌ಎಂಜಿ ಸಾಗಣೆ ಶೇ.43 ಮತ್ತು ದ್ವಿಚಕ್ರ ವಾಹನ ಸಾಗಣೆ ಶೇ.53ರಷ್ಟು ಏರಿಕೆಯಾಗಿದೆ. ಅರಸೀಕೆರೆ-ಯಲಹಂಕ ನಡುವೆ ಹೊಸ ಮೆಮು ರೈಲು ಸೇವೆ ಆರಂಭಿಸಲಾಗಿದೆ. ಕಂಟೈನರ್ ಸರಕು ಟರ್ಮಿನಲ್‌ನಿಂದ ಎರಡು ಸರಕು ರೈಲುಗಳನ್ನು ಓಡಿಸಿ ಸುವಾರು 65 ಲಕ್ಷ ರೂ.ಆದಾಯ ಗಳಿಸಲಾಗಿದೆ ಎಂದರು.
ವಾಣಿಜ್ಯ ವಿಭಾಗವು ವಿಶೇಷ ಪಾರ್ಸಲ್ ರೈಲುಗಳಿಂದ 49.81ಲಕ್ಷ ರೂ.ಆದಾಯ ಗಳಿಸಿದ್ದು, ಟಿಕೆಟ್ ಪರಿಶೀಲನೆಯಿಂದ ಏಪ್ರಿಲ್‌ನಲ್ಲಿ 1.14 ಕೋಟಿ ರೂ.ದಾಖಲೆಯ ಆದಾಯ ಬಂದಿದೆ. ರೈಲ್ವೆ ರಕ್ಷಣಾ ಪಡೆ 42 ಮಕ್ಕಳನ್ನು ರಕ್ಷಿಸಿ, 114 ಪ್ರಯಾಣಿಕರ ಸುವಾರು 60 ಲಕ್ಷ ರೂ.ಮೌಲ್ಯದ ವಸ್ತುಗಳನ್ನು ಪತ್ತೆಹಚ್ಚಿದೆ. 35 ಕೆ.ಜಿ ಗಾಂಜಾವನ್ನೂ ವಶಪಡಿಸಿಕೊಂಡಿದೆ ಎಂದರು.
ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶವ್ಮಾಸ್ ಹಮೀದ್, ಅಧಿಕಾರಿಗಳು, ಲಲಿತಾ ಶಾಲೆಯ ವಿದ್ಯಾರ್ಥಿಗಳು, ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ವಿವಿಧ ಸಂಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.