

ನಾಗರಹೊಳೆ ಮತ್ತು ಬಂಡೀಪುರದಲ್ಲಿ ನಡೆಯುವ ಸಫಾರಿಯನ್ನು ನೂರಾರು ಕುಟುಂಬಗಳು ಅವಲಂಭಿಸಿವೆ. ಸಫಾರಿ ಇಲ್ಲದಿದ್ದರೆ ಅವರೆಲ್ಲರ ಕುಟುಂಬಗಳಿಗೂ ಬೇರೆ ದಿಕ್ಕು ಇಲ್ಲದಂತಾಗುತ್ತದೆ. ಈ ಭಾಗದಲ್ಲಿರುವ ಎಲ್ಲ ಹೋಟೆಲ್‌ಗಳು ಈ ಪ್ರವಾಸಿ ಆಕರ್ಷಣೆ ಇದೆ ಎಂಬ ಆಧಾರದ ಮೇಲೆ ಸಾವಿರಾರು ಕೋಟಿ ರೂ.ಹೂಡಿಕೆ ಮಾಡಿವೆ. ಕೆಲವು ಹೋಟೆಲ್ ಮಾಲೀಕರು ಇಲ್ಲಿನ ಪ್ರವಾಸೋದ್ಯಮವನ್ನೇ ನಂಬಿ ಬ್ಯಾಂಕ್‌ಗಳಲ್ಲಿ ಕೋಟ್ಯಂತರ ರೂ.ಸಾಲ ಪಡೆದು ರೆಸಾರ್ಟ್ ನಡೆಸುತ್ತಿದ್ದಾರೆ. ಈಗಾಗಲೇ ಬುಕ್ ಆಗಿದ್ದ ರೂಂಗಳೂ ಕ್ಯಾನ್ಸಲ್ ಆಗುತ್ತಿದ್ದು, ಹೋಟೆಲ್ ಹಾಗೂ ರೆಸಾರ್ಟ್ ಮಾಲೀಕರು ಪರದಾಡುವಂತಾಗಿದೆ. ಈ ಹೋಟೆಲ್, ರೆಸಾರ್ಟ್‌ಗಳಿಗೆ ಜನರನ್ನು ಕರೆದುಕೊಂಡು ಬರುವ ಟ್ರಾವಲ್ ಏಜೆಂಟ್‌ಗಳು ಹಾಗೂ ವಾಹನ ಚಾಲಕರಿಗೂ ದೊಡ್ಡ ಹೊಡೆತ ಬಿದ್ದಂತಾಗಿದೆ. ಈ ಹಿನ್ನೆಲೆಯಲ್ಲಿ ಸಫಾರಿ ಪುನರಾರಂಭಿಸಲು ಕ್ರಮ ಕೈಗೊಳ್ಳಬೇಕು.
-ಸಿ.ನಾರಾಯಣಗೌಡ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ