ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆಗಳ ಪೌರ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಆರ್ಟಿಸ್ಟ್ ಎಸ್. ನಾಗರಾಜು ಮಾತನಾಡಿ, ನೇರ ಪಾವತಿ ಮತ್ತು ಹೆಚ್ಚುವರಿ ವೇತನದಲ್ಲಿ ಇರುವ ಪೌರ ಕಾರ್ಮಿಕರಿಗೆ ಇಎಸ್‌ಐ, ಪಿಎಫ್ ಸೌಲಭ್ಯವನ್ನು ಕಲ್ಪಿಸಿಕೊಡುವಲ್ಲಿ ನಗರ ಪಾಲಿಕೆ ನಿರ್ಲಕ್ಷೃ ವಹಿಸುತ್ತಿರುವುದರಿಂದ ಪೌರ ಕಾರ್ಮಿಕರು ಎದುರಿಸುತ್ತಿರುವ ತೊಂದರೆಗಳನ್ನು ಕೂಡಲೇ ಪರಿಹರಿಸಬೇಕು, ಪೌರ ಕಾರ್ಮಿಕರ ಹುದ್ದೆಗೆ ನೇಮಕಗೊಂಡವರನ್ನು ಅಡೆಂಟರ್, ಡಿಟಿಪಿ ಆಪರೇಟರ್ ಸೇರಿದಂತೆ ವಿವಿಧ ಕೆಲಸಗಳಿಗ ಬಳಕೆ ಮಾಡುತ್ತಿರುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.