ಇದೇ ವೇಳೆ ಎಸ್.ಜಾನಕಿ ಅವರ ಆಪ್ತ ಅಭಿಮಾನಿ ನವೀನ್ ಅವರನ್ನು ಗೌರವಿಸಲಾಯಿತು. ರವಿ ಸಂತು ಬಳಗದ ವತಿಯಿಂದ ಶಾಲೆಗೆ ವಾಟರ್ ಪ್ಯೂರಿಫೈಯರ್, ಕ್ರೀಡಾ ಸಾಮಾಗ್ರಿ, ಪುಸ್ತಕ, ನೋಟ್‌ಬುಕ್ಸ್ ಸೇರಿ ಇತರೆ ವಸ್ತುಗಳನ್ನು ವಿತರಿಸಲಾಯಿತು. ದುಬೈಯಿಂದ ಆಗಮಿಸಿದಂತ ಸನತ್, ಮುಖ್ಯ ಶಿಕ್ಷಕ ಎಂ.ಪಿ.ನಂಜುಂಡ, ಶಿಕ್ಷಕರಾದ ಪ್ರಸಾದ್, ಶಿವಮೂರ್ತಿ, ಎಂ.ಕೆ.ಸಹಾನ, ಪವಿತ್ರಾ, ಬಳಗ ಸದಸ್ಯರಾದ ಅನುಭವ್ಯ, ಶ್ರೀಕಂಠ, ಶ್ರೀನಿವಾಸ್, ಲೋಕೇಶ್, ಕುಮಾರ್, ರವಿ ಹಂಸಲೇಖ, ಅನುಷಾ, ಚಂದನ, ಸುಧಾಕರ್ ಇತರರಿದ್ದರು.