ದುರ್ಬಲವಾಗುತ್ತಿರುವ ಆರ್‌ಟಿಐ: ಮಾಹಿತಿ ಆಯೋಗದ ಮಾಜಿ ಆಯುಕ್ತ ಡಾ.ಎಲ್.ಕೃಷ್ಣಮೂರ್ತಿ

 ಮಾನಸಗಂಗೋತ್ರಿಯಲ್ಲಿ ಆಯೋಜಿಸಿದ್ದ  ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಡಾ.ಬಾಬು ಜಗಜೀವನರಾಮ್ ಭಾವಚಿತ್ರಕ್ಕೆ ಮೈವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಪುಷ್ಪ ನಮನ ಸಲ್ಲಿಸದರು. ಡಾ.ಎಲ್.ಕೃಷ್ಣಮೂರ್ತಿ, ಪ್ರೊ.ನಂಜಯ್ಯ ಹೊಂಗನೂರು, ಪ್ರೊ.ಮೈಹಳ್ಳಿ ರೇವಣ್ಣ, ಎಚ್.ಆರ್.ಭೀಮಾಶಂಕರ್ ಇನ್ನಿತರರಿದ್ದರು
ಮಾನಸಗಂಗೋತ್ರಿಯಲ್ಲಿ ಆಯೋಜಿಸಿದ್ದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಡಾ.ಬಾಬು ಜಗಜೀವನರಾಮ್ ಭಾವಚಿತ್ರಕ್ಕೆ ಮೈವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಪುಷ್ಪ ನಮನ ಸಲ್ಲಿಸದರು. ಡಾ.ಎಲ್.ಕೃಷ್ಣಮೂರ್ತಿ, ಪ್ರೊ.ನಂಜಯ್ಯ ಹೊಂಗನೂರು, ಪ್ರೊ.ಮೈಹಳ್ಳಿ ರೇವಣ್ಣ, ಎಚ್.ಆರ್.ಭೀಮಾಶಂಕರ್ ಇನ್ನಿತರರಿದ್ದರು
Published on

ಪ್ರಮುಖ ಮುಖ್ಯಾಂಶಗಳು

  • ನಕಲಿ ಆರ್‌ಟಿಐ ಕಾರ್ಯಕರ್ತರಿಂದ ಆರ್‌ಟಿಐ ನಶಿಸಿ ಹೋಗುತ್ತಿರುವುದು ವಿಷಾದನೀಯ
  • ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದಿರುವುದು ಸಾರ್ವಜನಿಕರ ಉಪಯೋಗಕ್ಕೆ.

ಮೈಸೂರು: 

ಪಾರದರ್ಶಕ ಆಡಳಿತಕ್ಕೆ ಅವಕಾಶ ಕಲ್ಪಿಸಿಕೊಡುವ ಮಾಹಿತಿ ಹಕ್ಕು ಕಾಯ್ದೆ(ಆರ್‌ಟಿಐ) ದುರ್ಬಲವಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಮಾಜಿ ಆಯುಕ್ತ ಡಾ.ಎಲ್.ಕೃಷ್ಣಮೂರ್ತಿ ಬೇಸರ ವ್ಯಕ್ತಪಡಿಸಿದರು.

ಮೈಸೂರು ವಿವಿಯ ಡಾ.ಬಾಬು ಜಗಜೀವನರಾಮ್ ಅಧ್ಯಯನ, ಸಂಶೋಧನ ಮತ್ತು ವಿಸ್ತರಣ ಕೇಂದ್ರದಲ್ಲಿ ಆಯೋಜಿಸಿದ್ದ ಡಾ.ಬಾಬು ಜಗಜೀವನರಾಮ್ ಅವರ 40ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯುಪಿಎ ಸರ್ಕಾರ ಜಾರಿಗೆ ತಂದ ಮಹತ್ವಪೂರ್ಣವುಳ್ಳ ಈ ಕಾಯ್ದೆಯಿಂದ 2ಜಿ ತರಂಗಾಂತರ ಪ್ರಕರಣ ಸೇರಿದಂತೆ ಅನೇಕ ದೊಡ್ಡ, ದೊಡ್ಡ ಹಗರಣಗಳು ಬಹಿರಂಗವಾಗಿ ಹೊರಬಂದವು. ಆದರೆ, ಇಂದು ಇಂತಹ ಬಲಿಷ್ಠವಾದ ಕಾಯ್ದೆ ದುರ್ಬಲವಾಗುತ್ತಿದೆ. ಜತೆಗೆ, ನಕಲಿ ಆರ್‌ಟಿಐ ಕಾರ್ಯಕರ್ತರಿಂದ ಆರ್‌ಟಿಐ ನಶಿಸಿ ಹೋಗುತ್ತಿರುವುದು ವಿಷಾದನೀಯ ಎಂದರು.
ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದಿರುವುದು ಸಾರ್ವಜನಿಕರ ಉಪಯೋಗಕ್ಕೆ. ಆದರೆ, ಅದು ಇಂದು ಹೆಚ್ಚು ದುರುಪಯೋಗವಾಗುತ್ತಿದೆ. ಸುಪ್ರೀಂಕೋರ್ಟ್ ಕೂಡ ಮಾಹಿತಿ ಹಕ್ಕು ಕಾಯ್ದೆಯಡಿ ವೈಯಕ್ತಿಕ ಮಾಹಿತಿ ಕೇಳಬಾರದು ಎಂದು ಸೂಚಿಸಿದ್ದರೂ, ಈಗಲೂ ಅರ್ಜಿ ಸಲ್ಲಿಸಿ ಉತ್ತರ ಕೇಳುತ್ತಿರುವುದು ಕಡಿಮೆಯಾಗಿಲ್ಲ ಎಂದು ಹೇಳಿದರು.
ಆರ್‌ಟಿಐ ಕಾರ್ಯಕರ್ತ ಮಾಹಿತಿ ಕೇಳಿದ ತಕ್ಷಣ ಅದರ ಹಿಂದೆ, ಮುಂದೆ ಎಲ್ಲ ಓದಿಕೊಂಡು ಕುಳಿತುಬಿಡುತ್ತಾರೆ. ಹೀಗಾಗಿ ಅಧಿಕಾರಿಗಳಿಗೆ ಅರಿವಿಲ್ಲದಿದ್ದಾಗ ಇಂತಹ ಅಡಚಣೆಗಳು ಉಂಟಾಗುವುದು ಸಾಮಾನ್ಯದ ಸಂಗತಿ. ಆರ್‌ಟಿಐ ಕಾಯ್ದೆಯಡಿ ಯಾವುದೇ ಒಂದು ಮಾಹಿತಿ ಕೇಳಿದರೆ, ಯಾವ ರೀತಿಯ ಸ್ಪಷ್ಟ ಉತ್ತರ ಕೊಡಬೇಕು ಎಂಬುದನ್ನು ಯೋಚನೆ ಮಾಡಬೇಕು ಎಂದು ಹೇಳಿದರು.
ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಮಾತನಾಡಿ, ಬಾಬೂಜಿ ಅವರು ಹಗಲಿರುಳು ದುಡಿಯುತ್ತಿದ್ದರು. ಎಲ್ಲ ಚಳವಳಿಯಲ್ಲೂ ಭಾಗವಹಿಸಿದ್ದರು. ರಾಜೀವ್ ಗಾಂಧಿ ಅವರು ಬಾಬೂಜಿ ಅವರಿಗೆ ಸ್ವ್ವಾತಂತ್ರೃ ಹೋರಾಟದ ಸೇನಾನಿ ಎಂದು ಬಣ್ಣಿಸಿದ್ದಾರೆ. ಒಂದು ಶಿಕ್ಷಣ, ಒಂದು ರಾಜಕೀಯ ಇಚ್ಛಾಶಕ್ತಿ ನಮ್ಮಲ್ಲಿ ಇದ್ದರೆ ಏನೆಲ್ಲ ಸಾಧನೆ ಮಾಡಬಹುದು ಎಂಬುದಕ್ಕೆ ಬಾಬು ಅವರೇ ಸಾಕ್ಷಿ ಎಂದು ಹೇಳಿದರು.
ಮೈವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ನಂಜಯ್ಯ ಹೊಂಗನೂರು ಮಾತನಾಡಿ, ದೇಶ ಕಂಡ ಅಪ್ರತಿಮ ರಾಜಕಾರಣಿ ಬಾಬು ಜಗಜೀವನರಾಮ್. ಇವರಿಗೆ ಇಂದಿಗೂ ದೇಶಾದ್ಯಂತ ಮಹತ್ವದ ಸ್ಥಾನ ನೀಡಲಾಗಿದೆ. ದೇಶದ ರಾಜಕಾರಣಕ್ಕೆ ಅವರು ನೀಡಿರುವ ಕೊಡುಗೆಯನ್ನು ಇಂದಿನ ತಲೆಮಾರಿನವರು ಸ್ಮರಿಸಿಕೊಳ್ಳಬೇಕು ಎಂದು ಹೇಳಿದರು.
ಮೈವಿವಿ ಡಾ.ಬಾಬು ಜಗಜೀವನರಾಮ್ ಅಧ್ಯಯನ, ಸಂಶೋಧನ ಮತ್ತು ವಿಸ್ತರಣ ಕೇಂದ್ರದ ನಿವೃತ್ತ ನಿರ್ದೇಶಕ ಪ್ರೊ.ಮೈಹಳ್ಳಿ ರೇವಣ್ಣ, ಸಂದರ್ಶಕ ಪ್ರಾಧ್ಯಾಪಕ ಎಚ್.ಆರ್.ಭೀಮಾಶಂಕರ್, ಸಂಯೋಜಕ ಡಾ.ಎಂ.ಶ್ರೀನಿವಾಸಮೂರ್ತಿ, ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಆರ್.ಐಶ್ವರ್ಯಾ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net