ಸಮುದಾಯ ಭವನಗಳಿಗೆ 3.75 ಕೋಟಿ ರೂ.ಅನುದಾನ

ಸಾಲಿಗ್ರಾಮ ತಾಲೂಕು ಗಾಯನಹಳ್ಳಿ ಗ್ರಾಮದಲ್ಲಿ ವಾಲ್ಮೀಕಿ ಭವನ ನಿರ್ಮಾಣಕ್ಕೆ ಶಾಸಕ ಡಿ.ರವಿಶಂಕರ್ ಭೂಮಿಪೂಜೆ ಸಲ್ಲಿಸಿ ಮಾತನಾಡಿದರು. ಶಿವಣ್ಣ, ಮಹಾದೇವ್, ಶಂಕರ ಮೂರ್ತಿ, ಪ್ರಭಾಕರ್, ಮಂಜುನಾಥ್ ಇದ್ದರು.
ಸಾಲಿಗ್ರಾಮ ತಾಲೂಕು ಗಾಯನಹಳ್ಳಿ ಗ್ರಾಮದಲ್ಲಿ ವಾಲ್ಮೀಕಿ ಭವನ ನಿರ್ಮಾಣಕ್ಕೆ ಶಾಸಕ ಡಿ.ರವಿಶಂಕರ್ ಭೂಮಿಪೂಜೆ ಸಲ್ಲಿಸಿ ಮಾತನಾಡಿದರು. ಶಿವಣ್ಣ, ಮಹಾದೇವ್, ಶಂಕರ ಮೂರ್ತಿ, ಪ್ರಭಾಕರ್, ಮಂಜುನಾಥ್ ಇದ್ದರು.
Published on
ಸಾಲಿಗ್ರಾಮ: ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದ ಸಾಲಿಗ್ರಾಮ ಮತ್ತು ಕೆ.ಆರ್.ನಗರ ಎರಡು ತಾಲೂಕಿನ ವಾಲ್ಮೀಕಿ ಸಮಾಜದ ಸಮುದಾಯ ಭವನಗಳ ಅಭಿವೃದ್ಧಿಗೆ ಒಟ್ಟು 3.75 ಕೋಟಿ ರೂ.ಅನುದಾನ ನೀಡಿದ್ದೇವೆ ಎಂದು ಶಾಸಕ ಡಿ.ರವಿಶಂಕರ್ ತಿಳಿಸಿದರು.
ಸಾಲಿಗ್ರಾಮ ತಾಲೂಕಿನ ಗಾಯನಹಳ್ಳಿ ಗ್ರಾಮದಲ್ಲಿ 20 ಲಕ್ಷ ರೂ.ವೆಚ್ಚದಲ್ಲಿ ವಾಲ್ಮೀಕಿ ಸಮುದಾಯ ಭವನ ನಿರ್ಮಾಣಕ್ಕೆ ಇತ್ತೀಚೆಗೆ ಭೂಮಿಪೂಜೆ ಸಲ್ಲಿಸಿ ಮಾತನಾಡಿದರು. ಕಾಂಗ್ರೆಸ್ ಸರ್ಕಾರ ಕೆ.ಆರ್.ನಗರ ತಾಲೂಕಿನಲ್ಲಿ ಹೆಚ್ಚು ನಾಯಕ ಸಮಾಜ ಇರುವ ಗ್ರಾಮಗಳಲ್ಲಿ ಸುಮಾರು 18 ಸಮುದಾಯ ಭವನಗಳ ನಿರ್ಮಾಣಕ್ಕೆ ಮುಂದಾಗಿದ್ದು ಸುಮಾರು 2 ಕೋಟಿ ರೂ.ಅನುದಾನ ನೀಡಲಾಗಿದೆ. ಚುನಾವಣೆ ಸಂದರ್ಭ ಇಲ್ಲಿನ ನಾಯಕ ಸಮಾಜದವರು ನೀಡಿದ ಮನವಿಯಂತೆ ನಾನು ಶಾಸಕನಾದ ಮೇಲೆ ಮತ್ತೆ 10 ಗ್ರಾಮಗಳಿಗೆ 1.75 ಕೋಟಿ ರೂ.ಅನುದಾನ ನೀಡಿದ್ದೇನೆ ಎಂದರು.
ಕೆಲವೆಡೆ ಸಮುದಾಯ ಭವನಗಳ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದ್ದು ಒಂದಷ್ಟು ಅನುದಾನ ಕೊರತೆ ಇದೆ. ಅವುಗಳನ್ನು ಈಗಾಗಲೇ ಪಟ್ಟಿ ಮಾಡಲಾಗಿದ್ದು ಶೀಘ್ರದಲ್ಲೇ ಬೇಕಿರುವ ಅನುದಾನ ಬಿಡುಗಡೆ ಮಾಡಿಸಿ ಉದ್ಘಾಟಿಸಲಾಗುವುದು. ಕೆ.ಆರ್.ನಗರ ಮತ್ತು ಸಾಲಿಗ್ರಾಮ ಎರಡು ತಾಲೂಕುಗಳಲ್ಲಿ ಯಾವ ಗ್ರಾಮದಲ್ಲಿ ವಾಲ್ಮೀಕಿ ಸಮುದಾಯ ಭವನಗಳು ಆಗಿಲ್ಲ ಎಂದು ತಿಳಿಸಿದರೆ ಅಲ್ಲಿಗೂ ಹೊಸ ಸಮುದಾಯ ಭವನ ನಿರ್ಮಾಣ ಮಾಡಿಕೊಳ್ಳಲು ಅನುದಾನ ನೀಡುತ್ತೇನೆ ಎಂದರು.
ಗಾಯನಹಳ್ಳಿ ಗ್ರಾಮಕ್ಕೆ ಮೊದಲ ಹಂತದಲ್ಲೇ 20 ಲಕ್ಷ ರೂ.ಅನುದಾನವನ್ನು ವಾಲ್ಮೀಕಿ ಸಮುದಾಯ ಭವನ ನಿರ್ಮಾಣ ಮಾಡಲು ನೀಡಿದ್ದೆ. ಆದರೆ, ಜಾಗದ ಸಮಸ್ಯೆ ಇದ್ದ ಕಾರಣ ಗ್ರಾಮಸ್ಥರ ಅನುಮತಿ ಪಡೆಯದೆ ಬೇರೆ ಕಡೆ ವರ್ಗಾಯಿಸಲಾಗಿತ್ತು. ಇತ್ತೀಚಿನ ದಿನಗಳಲ್ಲಿ ಜಾಗದ ಸಮಸ್ಯೆ ಬಗೆಹರಿದ ಬಳಿಕ ಗ್ರಾಮಸ್ಥರು ಮಾಹಿತಿ ನೀಡುತ್ತಿದ್ದಂತೆ 20 ಲಕ್ಷ ರೂ.ಅನುದಾನ ನೀಡಿ ಭೂಮಿಪೂಜೆ ಸಲ್ಲಿಸಿದ್ದೇವೆ ಎಂದರು.
ವಾಲ್ಮೀಕಿ ಸಂಘದ ತಾಲೂಕು ಅಧ್ಯಕ್ಷ ಸಿ.ಸಿ.ಮಹದೇವ್ ಮಾತನಾಡಿ, 15 ವರ್ಷದಿಂದ ಸಾಲಿಗ್ರಾಮ ತಾಲೂಕು ವಾಲ್ಮೀಕಿ ನಾಯಕರ ಸಂಘಕ್ಕೆ ನಿವೇಶನ ನೀಡಲು ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ನಿರ್ಲಕ್ಷೃ ತೋರಿಸುತ್ತಿದ್ದಾರೆ. ಸಾಲಿಗ್ರಾಮದಲ್ಲಿ ವಾಲ್ಮೀಕಿ ಸಮಾಜದ ಭವನಕ್ಕೆ ಹಾಗೂ ಸ್ಥಳಕ್ಕೆ ಅನುದಾನ ಬೇಕಿದೆ. ಇದನ್ನು ಶಾಸಕರು ಶೀಘ್ರದಲ್ಲೇ ಮಾಡಿಕೊಡಬೇಕು. ಹಲವು ಗ್ರಾಮಗಳಲ್ಲಿ ಅರ್ಧಕ್ಕೆ ನಿಂತಿರುವ ಭವನಗಳನ್ನು ಪೂರ್ಣಗೊಳಿಸಲು ಅನುದಾನ ನೀಡಬೇಕು ಎಂದು ಮನವಿ ಮಾಡಿದರು.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶಂಕರ ಮೂರ್ತಿ, ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಭಾಕರ್, ತಾಪಂ ಮಾಜಿ ಅಧ್ಯಕ್ಷ ಹರದನಹಳ್ಳಿ ಮಂಜುನಾಥ್, ಸಣ್ಣಪ್ಪ, ಸಿಡಿಸಿ ಸದಸ್ಯ ಪರಿಕ್ಷೀತ್, ತಿಪ್ಪೂರು ಮಹದೇವ್, ಗ್ರಾಪಂ ಮಾಜಿ ಸದಸ್ಯ ಮಹದೇವ ನಾಯಕ, ಮಾಜಿ ಸದಸ್ಯೆ ಶಾಂತಮ್ಮ ಚೆಲುವನಾಯಕ, ತೇಜಮೂರ್ತಿ, ಶಂಭುನಾಯಕ, ನರಸಿಂಹನಾಯಕ, ಗಾಯನಹಳ್ಳಿ ನಟರಾಜ್, ಕುಮಾರಸ್ವಾಮಿ, ವಾಲ್ಮೀಕಿ ಸಂಘದ ಅಧ್ಯಕ್ಷ ಶಿವನಾಯಕ, ನಿರ್ದೇಶಕರಾದ ಅನಿಲ್ ಕುಮಾರ್, ಹರೀಶ್ ನಾಯಕ, ಶಿವನಾಯಕ, ಕೃಷ್ಣನಾಯಕ, ಸುನಿಲ್ ಕುಮಾರ್, ಕುಮಾರ್, ಶಿವ ಕುಮಾರ್, ರವಿನಾಯಕ, ಮಹಾದೇವನಾಯಕ, ಸ್ವಾಮಿ ನಾಯಕ, ಅಪ್ಪುನಾಯಕ, ಮಂಜುನಾಯಕ, ಕರುಣೇಶ್ ನಾಯಕ, ಶ್ರೀಧರ್ ನಾಯಕ, ಗಣಪಾಲ್, ವಾಸಿಂ ಪಾಷಾ, ಮಹದೇವ, ಪಾಪಣ್ಣನಾಯಕ, ಡೇರಿ ಅಧ್ಯಕ್ಷೆ ಜ್ಯೋತಿ ಪ್ರಕಾಶ್, ದಾಮೋದರ ನಾಯಕ, ಯಶ್ವಂತ್, ದ್ಯಾವನಾಯಕ, ಸುಂದರ್, ಸ್ವಾಮಿ, ಮಂಜು, ಮಲ್ಲೇಶ್, ಗೋವಿಂದ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net