ಜೆ.ಪಿ. ನಗರದ ಉದ್ಯಮಿ ಹಣ ಕಳೆದುಕೊಂಡವರು. ವಾಟ್ಸ್‌ಆ್ಯಪ್‌ಗೆ ಬಂದ ಮೆಸೇಜ್ ನಂಬಿ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಲು ಮುಂದಾದ ಉದ್ಯಮಿಯು ವಂಚಕರು ನೀಡಿದ ನಾನಾ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿ, ಲಾಭ ಬರಲಿದೆ ಎಂದು ಕಾದಿದ್ದಾರೆ. ಆದರೆ ಯಾವುದೇ ಹಣ ವಾಪಸ್ ಬಾರದೆ ಇದ್ದಾಗ ವಂಚನೆಯಾಗಿರುವುದು ಗೊತ್ತಾಗಿದೆ. ಈ ಸಂಬಂಧ ಸೆನ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.