ಕೃಷರ್, ಜೆಲ್ಲಿ, ಸಾಗಿಸುವ ವಾಹನಗಳ ತಡೆದು ಆಕ್ರೋಶ

ಬೈಲುಕುಪ್ಪೆ. ನಿಲವಾಡಿ ಹೋಗುವ ಮುಖ್ಯ ರಸ್ತೆಯಲ್ಲಿ ಸ್ಥಳೀಯ ಗ್ರಾಮಸ್ಥರು ಅಕ್ರಮ ಗಣಿಗಾರಿಕೆ ಹಾಗೂ ಅತಿ ಬಾರಾ ಹಾಕಿ ಕಲ್ಲು,  ಕೃಷರ್, ಜೆಲ್ಲಿ, ಸಾಗಿಸುವ ವಾಹನಗಳ ತಡೆದು ಪ್ರತಿಭಟಿಸಿ ಭಾನುವಾರ ಆಕ್ರೋಶ ಹೂರ ಹಾಕಿದರು.
ಬೈಲುಕುಪ್ಪೆ. ನಿಲವಾಡಿ ಹೋಗುವ ಮುಖ್ಯ ರಸ್ತೆಯಲ್ಲಿ ಸ್ಥಳೀಯ ಗ್ರಾಮಸ್ಥರು ಅಕ್ರಮ ಗಣಿಗಾರಿಕೆ ಹಾಗೂ ಅತಿ ಬಾರಾ ಹಾಕಿ ಕಲ್ಲು, ಕೃಷರ್, ಜೆಲ್ಲಿ, ಸಾಗಿಸುವ ವಾಹನಗಳ ತಡೆದು ಪ್ರತಿಭಟಿಸಿ ಭಾನುವಾರ ಆಕ್ರೋಶ ಹೂರ ಹಾಕಿದರು.
Published on
ಬೈಲುಕುಪ್ಪೆ. ನಿಲವಾಡಿ ಹೋಗುವ ಮುಖ್ಯ ರಸ್ತೆಯಲ್ಲಿ ಸ್ಥಳೀಯ ಗ್ರಾಮಸ್ಥರು ಅಕ್ರಮ ಗಣಿಗಾರಿಕೆ ಹಾಗೂ ಅತಿ ಬಾರಾ ಹಾಕಿ ಕಲ್ಲು, ಕೃಷರ್, ಜೆಲ್ಲಿ, ಸಾಗಿಸುವ ವಾಹನಗಳ ತಡೆದು ಪ್ರತಿಭಟಿಸಿ ಭಾನುವಾರ ಆಕ್ರೋಶ ಹೂರ ಹಾಕಿದರು.
ಪಿರಿಯಾಪಟ್ಟಣ ತಾಲೂಕಿನ ಬೆಣಗಾಲು ಗ್ರಾಮ ಪಂಚಾಯಿತಿ ವ್ಯಾಪ್ತಿ ನಿಲವಾಡಿ ಬೋವಿ ಕಾಲೋನಿ ಸುತ್ತಮುತ್ತ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದು ಸಂಬಂಧಪಟ್ಟ ಪೊಲೀಸ್ ಹಾಗೂ ಗಣಿಗಾರಿಕೆ ಇಲಾಖೆಯ ಮೌನವಾಗಿರುವುದರಿಂದ ನಿಲವಾಡಿ ಹೋಗುವ ಮುಖ್ಯ ರಸ್ತೆ ಸಂಪೂರ್ಣ ಹದಗೆಟ್ಟಿರುವುದರಿಂದ ಇಲ್ಲಿಯ ಸಾರ್ವಜನಿಕರಿಗೆ, ಶಾಲಾ ಮಕ್ಕಳಿಗೆ ತುಂಬಾ ನರಕ ಯೋಜನೆ ಅನುಭವಿಸುವಂತಾಗಿದೆ ಎಂದು ಹೇಳಿ,ಕೃಷರ್ ಜೆಲ್ಲಿ ಕಲ್ಲು ಸಾಗಿಸುವ ವಾಹನಗಳ ತಡೆದು ಸಾರ್ವಜನಿಕರು ದೂರಿದ್ದಾರೆ.
ಚೆನ್ನಕಲ್ಲು. ನಿಲವಾಡಿ. ಭೂಮಿ ಕಾಲೋನಿ. ಸುಂಕದ ಹಳ್ಳಿ. ಆವರ್ತಿ. ಮಾರ್ಗ ಓಡಾಡುವ ಶಾಲಾ ಮಕ್ಕಳಿಗೆ ವೃದ್ಧರಿಗೆ ಸಾರ್ವಜನಿಕರಿಗೆ ಕೃಷರು ಸಾಗಿಸುವ ವಾಹನಗಳ ಮೇಲೆ ಯಾವುದೇ ಟಾರ್ಪಲ್ ಕಟ್ಟದೇ ಓಡಾಡುವುದರಿಂದ ಮತ್ತು ಅತಿ ಭಾರ ಹಾಕಿ ಸಾಗಿಸುವುದರಿಂದ ರಸ್ತೆ ಅಲ್ಲಲ್ಲೇ ಗುಂಡಿಮಯವಾಗಿದ್ದು . ಹಗಲಿರುಳು ಓಡಾಡುವ ಈ ರಸ್ತೆಯಲ್ಲಿ ಧೂಳೋ ಧೂಳು. ಇನ್ನಿತರ ವಾಹನ ಸವಾರರಿಗೆ ಈ ರಸ್ತೆಯ ಮಾರ್ಗವಾಗಿ ಓಡಾಡಲುತುಂಬಾ ತೊಂದರೆಯಾಗಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net