ಮೈಸೂರಿನಲ್ಲಿ ರಾತ್ರಿ ಹೊತ್ತಿನಲ್ಲಿ ನಡೆದ ಕಸವಿಲೇವಾರಿ ಕಾರ್ಯವನ್ನು ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್ ವೀಕ್ಷಿಸಿದರು. ಕಾರ್ಯಪಾಲಕ ಅಭಿಯಂತರ ಶ್ರೀನಿವಾಸ್, ಪರಿಸರ ವಿಭಾಗದ ಕಾರ್ಯಪಾಲಕ ಅಭಿಯಂತರ ಮೃತ್ಯುಂಜಯ, ಪರಿಸರ ಅಭಿಯಂತರರರಾದ ಮೈತ್ರಿ, ಕೃಷ್ಣಮೂರ್ತಿ ಇದ್ದರು.
ಹಸಿರು ಮತ್ತು ಸ್ವಚ್ಛ ಮೈಸೂರು ನಿರ್ಮಾಣಕ್ಕಾಗಿ ಹಮ್ಮಿಕೊಂಡ ಈ ಬೃಹತ್ ಆಂದೋಲನ
ರಾತ್ರಿ ವೇಳೆಯಲ್ಲಿ ಕ್ಲೀನ್ ಮೈಸೂರು
ಮೈಸೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಬೃಹತ್ ವರ್ತುಲ ರಸ್ತೆ ಸ್ವಚ್ಛತಾ ಕಾರ್ಯಕ್ಕೆ ಶನಿವಾರ ಚಾಲನೆ ನೀಡಲಾಯಿತು.
ದೊಡ್ಡಕೆರೆ ಮೈದಾನದಲ್ಲಿ ಈ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್ ಅವರು, ಸಾರ್ವಜನಿಕರು ಮತ್ತು ವಿವಿಧ ಸಂಸ್ಥೆಗಳು ಈ ಕಾರ್ಯಕ್ರಮದಲ್ಲಿ ಕೈಜೋಡಿಸಬೇಕು ಎಂದರು. ಪರಿಸರ ಸಂರಕ್ಷಣೆ ಮತ್ತು ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸಿದರು.
ಪಾಲಿಕೆಯ ಅಧೀಕ್ಷಕ ಅಭಿಯಂತರ ಸಿ.ಎಸ್.ಮಂಜು, ಕಾರ್ಯಪಾಲಕ ಅಭಿಯಂತರರಾದ ಮಧುಸೂದನ್, ಶ್ರೀನಿವಾಸ್, ಅಶ್ವಿನ್ ಹಾಗೂ ಮೃತ್ಯುಂಜಯ ಪಾಲ್ಗೊಂಡಿದ್ದರು. ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಮೀನಾಕ್ಷಿ, ನಾಗರಾಜೇಗೌಡ, ರವಿ, ವಲಯ ಆಯುಕ್ತೆ ಪ್ರತಿಭಾ ಹಾಗೂ ಅಭಿವೃದ್ಧಿ ಅಧಿಕಾರಿ ಸತ್ಯಮೂರ್ತಿ ಸ್ವಚ್ಛತಾ ಕಾರ್ಯದ ಮೇಲ್ವಿಚಾರಣೆ ನಡೆಸಿದರು.
ಅಭಿಯಾನದಲ್ಲಿ ಪಾಲಿಕೆಯ ಪರಿಸರ ಅಭಿಯಂತರರು, ಆರೋಗ್ಯ ನಿರೀಕ್ಷಕರು, ಸಹಾಯಕ ಹಾಗೂ ಕಿರಿಯ ಅಭಿಯಂತರರು ಸಕ್ರಿಯವಾಗಿ ಪಾಲ್ಗೊಂಡಿದ್ದರು.
ವಾಹನ ವಿಭಾಗದ ಅಧಿಕಾರಿಗಳು, ಸಿಬ್ಬಂದಿ, ಮತ್ತು ಚಾಲಕರು ಯಾಂತ್ರಿಕ ಸ್ವಚ್ಛತೆಗೆ ಸಾಥ್ ನೀಡಿದರು. ವಿಶೇಷವಾಗಿ ವಿವಿಧ ಸರ್ಕಾರೇತರ ಸಂಸ್ಥೆಗಳು, ಶಾಲಾ, ಕಾಲೇಜು ವಿದ್ಯಾರ್ಥಿಗಳು ಮತ್ತು ನಾಗರಿಕ ಸಂಘ, ಸಂಸ್ಥೆಗಳ ಸದಸ್ಯರು ಉತ್ಸಾಹದಿಂದ ಭಾಗವಹಿಸಿ ತಮ್ಮ ಸಮೀಪದ ವರ್ತುಲ ರಸ್ತೆಯ ಭಾಗಗಳನ್ನು ಸ್ವಚ್ಛಗೊಳಿಸಿದರು. ಹಸಿರು ಮತ್ತು ಸ್ವಚ್ಛ ಮೈಸೂರು ನಿರ್ಮಾಣಕ್ಕಾಗಿ ಹಮ್ಮಿಕೊಂಡ ಈ ಬೃಹತ್ ಆಂದೋಲನವು ನಗರಾದ್ಯಂತ ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಯಿತು.
ರಾತ್ರಿ ವೇಳೆಯಲ್ಲಿ ಕ್ಲೀನ್ ಮೈಸೂರು
ನಗರದ ಸೌಂದರ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಮೈಸೂರು ಮಹಾನಗರ ಪಾಲಿಕೆಯು ರಾತ್ರಿ ವೇಳೆ ಸ್ವಚ್ಛತಾ ಕಾರ್ಯವನ್ನು ಆರಂಭಿಸಿದೆ.
ಮೈಸೂರು ಅರಮನೆಯ ಮುಂಭಾಗದಲ್ಲಿರುವ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಈ ವಿನೂತನ ಅಭಿಯಾನಕ್ಕೆ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್ ಚಾಲನೆ ನೀಡಿದರು.
ಪ್ರಾಯೋಗಿಕವಾಗಿ ಮೊದಲ ಹಂತದಲ್ಲಿ ನಗರದ ಪ್ರಮುಖ ಐದು ಆಯಕಟ್ಟಿನ ಸ್ಥಳಗಳಲ್ಲಿ ರಾತ್ರಿ ಸ್ವಚ್ಛತಾ ಕಾರ್ಯವನ್ನು ಯಶಸ್ವಿಯಾಗಿ ನಡೆಸಲಾಯಿತು.
ನಗರದ ಜನರು ವಿಶ್ರಮಿಸುವ ಸಮಯದಲ್ಲಿ ಸ್ವಚ್ಛತಾ ಕಾರ್ಯ ನಡೆಸುವ ಮೂಲಕ ಬೆಳಗಿನ ವೇಳೆಗೆ ನಗರವು ಅತ್ಯಂತ ಶುಭ್ರವಾಗಿ ಕಾಣುವಂತೆ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ. ಹಗಲಿನಲ್ಲಿ ವಾಹನ ಸಂಚಾರ ಮತ್ತು ಸಾರ್ವಜನಿಕರ ಓಡಾಟ ಹೆಚ್ಚಿರುವುದರಿಂದ ಸ್ವಚ್ಛತೆಗೆ ಅಡ್ಡಿಯಾಗುತ್ತಿತ್ತು. ಇದನ್ನು ಮನಗಂಡು ರಾತ್ರಿ ಸಮಯದಲ್ಲಿ ಯಾಂತ್ರಿಕ ಸ್ವಚ್ಛತೆ ನಡೆಸಲು ಪಾಲಿಕೆ ಮುಂದಾಗಿದೆ.
ನಗರದ ಸ್ವಚ್ಛತೆಯನ್ನು ಕಾಪಾಡಲು ಪಾಲಿಕೆಯು ಅಹೋರಾತ್ರಿ ಶ್ರಮಿಸುತ್ತಿದ್ದು, ಸಾರ್ವಜನಿಕರು ಸಹ ಈ ನಿಟ್ಟಿನಲ್ಲಿ ಕೈಜೋಡಿಸಬೇಕೆಂದು ಅಧಿಕಾರಿಗಳು ಮನವಿ ಮಾಡಿದ್ದಾರೆ. ರಾತ್ರಿಯ ಈ ಕಾಯಕದಿಂದಾಗಿ ನಗರದ ರಸ್ತೆಗಳು, ಪ್ರವಾಸಿ ತಾಣಗಳು ಬೆಳಗಿನ ವೇಳೆಗೆ ಕಂಗೊಳಿಸುತ್ತಿದ್ದು ಪ್ರವಾಸಿಗರು ಮತ್ತು ಸ್ಥಳೀಯರಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ.
ಕಾರ್ಯಪಾಲಕ ಅಭಿಯಂತರ ಶ್ರೀನಿವಾಸ್, ಪರಿಸರ ವಿಭಾಗದ ಕಾರ್ಯಪಾಲಕ ಅಭಿಯಂತರ ಮೃತ್ಯುಂಜಯ, ಪರಿಸರ ಅಭಿಯಂತರರರಾದ ಮೈತ್ರಿ, ಕೃಷ್ಣಮೂರ್ತಿ, ಶ್ರೀದೇವಿ, ಮಹಾದೇವಿ, ಪ್ರಕಾಶ್, ಮಂಜು, ಕುಮಾರ್, ಶಿವಪ್ರಸಾದ್, ಯೋಗೇಶ್, ಅಶ್ವತ್ಥ್ ಮತ್ತು ಆರೋಗ್ಯ ನಿರೀಕ್ಷಕರು ಭಾಗವಹಿಸಿದ್ದರು.