ಬೈಲುಕುಪ್ಪೆ: ಗುಡ್ಡೆನಹಳ್ಳಿ ಸಮೀಪ ಆರ್.ಟಿ.ನಗರ ಲೇಔಟ್ ರಸ್ತೆಯಲ್ಲಿ ಗಾಂಜಾ ಸೇವಿಸಿ, ಬೈಕ್ ವ್ಹೀಲಿಂಗ್ ಮಾಡಿದ ಸವಾರರನ್ನು ಸೋಮವಾರ ವಾಹನ ಸಮೇತ ಬಂಧಿಸಿದ್ದಾರೆ.
ಪಿರಿಯಾಪಟ್ಟಣ ತಾಲೂಕಿನ ಗುಡ್ಡೆನಹಳ್ಳಿ ಗ್ರಾಮದ ನಪ್ಸಿರ್(29) ಬಂಧಿತ ಸವಾರ. ಖಚಿತ ಮಾಹಿತಿ ಮೇರೆಗೆ ಬೈಲುಕುಪ್ಪೆ ಪೊಲೀಸರು ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ ಬಳಿಕ ಕುಶಾಲನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ಸಹ ದೃಢಪಟ್ಟಿದೆ. ಸದ್ಯ ಆರೋಪಿಯನ್ನು ಪಿರಿಯಾಪಟ್ಟಣದ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಪೊಲೀಸ್ ಪಿಎಸ್‌ಐಗಳಾದ ರವಿಕುಮಾರ್, ರವಿ, ಸಿಬ್ಬಂದಿ ಮುದ್ದುರಾಜ್, ರುದ್ರೇಶ್, ಕುಮಾರಸ್ವಾಮಿ ಇತರರು ಇದ್ದರು.