ಹುಣಸೂರು ರಸ್ತೆಯ ಐಶ್ವರ್ಯ ಪೆಟ್ರೋಲ್ ಬಂಕ್ ಎದುರಿಗೆ ಇರುವ ನಿವೇಶನದಲ್ಲಿ ಸೋಮನಾಥ ದರ್ಶನ ತದ್ರೂಪ ಮಂದಿರ ನಿರ್ಮಾಣ ಮಾಡಲು ಭೂಮಿಪೂಜೆ ನೆರವೇರಿಸಲಾಯಿತು. ಫೆಬ್ರವರಿ 8 ರಿಂದ 22 ರವರೆಗೆ ಸಾರ್ವಜನಿಕವಾಗಿ ಮಾದರಿಯನ್ನು ತೆರೆಯಲಾಗುತ್ತದೆ. ಇದರಲ್ಲಿ ಪ್ರತಿನಿತ್ಯ ವೇದಿಕೆ ಸಭೆಗಳು, ಸಾಂಸ್ಕೃತಿಕ, ನೃತ್ಯ, ಸಂಗೀತ, ಸನ್ಮಾನಗಳು, ನವಚೈತನ್ಯ ದುರ್ಗೆಯರ ದರ್ಶನ, ಮೈಂಡ್ ಸ್ಪಾ, ಸಾಹಿತ್ಯ ಪ್ರದರ್ಶನ ಮುಂತಾದ ಕಾರ್ಯಕ್ರಮಗಳಿರುತ್ತವೆ.