ರಸ ಸಿಲ್ವರ್ ಸಂಸ್ಥೆಯಿಂದ ಮೈಸೂರಿನಲ್ಲಿ ಆರನೇ ಮಳಿಗೆಯ ಶುಭಾರಂಭ

Rasa Silver opens sixth store in Mysore
ರಸ ಸಿಲ್ವರ್ ಸಂಸ್ಥೆಯಿಂದ ಮೈಸೂರಿನಲ್ಲಿ ಆರನೇ ಮಳಿಗೆಯ ಶುಭಾರಂಭ
Published on: 

ದಸರಾ ವೈಭವದಿಂದ ಮೈಸೂರು ಹೊಸತನದಿಂದ ಕಂಗೊಳಿಸುತ್ತಿರುವ ಹೊತ್ತಿನಲ್ಲಿ ರಸ ಸಿಲ್ವರ್ ಸಂಸ್ಥೆಯು ನಗರದಲ್ಲಿ ತನ್ನ ಆರನೇ ಮಳಿಗೆಯನ್ನು ಪ್ರಾರಂಭಿಸಿದೆ. ಇದು ಬ್ರಾಂಡ್ ನ ರೀಟೇಲ್ ಮಾರಾಟದ ಪಯಣದಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದೆ. ಮೈಸೂರಿನ ರಾಜ ಪರಂಪರೆ ಮತ್ತು ಭಾರತೀಯ ಸಂಪ್ರದಾಯಗಳಲ್ಲಿ ಬೆಳ್ಳಿಗಿರುವ ನಿರಂತರ ಸಾಂಸ್ಕೃತಿಕ ಮಹತ್ವದಿಂದ ಪ್ರೇರಿತವಾದ ಈ ಶುಭಾರಂಭವು "ಫಾರ್ ದ ಮಹಾರಾಣಿ ಆಫ್ ನೌ" (ಇಂದಿನ ಮಹಾರಾಣಿಗಾಗಿ) ಎಂಬ ಪರಿಕಲ್ಪನೆಯನ್ನು ಸಂಭ್ರಮಿಸುತ್ತದೆ. ಇದು ತಮ್ಮ ಪರಂಪರೆಯಿಂದ ಪ್ರೇರಣೆ ಪಡೆಯುತ್ತಲೇ, ತಮ್ಮದೇ ಆದ ರೀತಿಯಲ್ಲಿ ಸಂಪ್ರದಾಯವನ್ನು ವ್ಯಾಖ್ಯಾನಿಸುವ ಆಧುನಿಕ ಮಹಿಳೆಯ ಅಭಿವ್ಯಕ್ತಿಯಾಗಿದೆ.

ಈ ಪ್ರಾರಂಭೋತ್ಸವವು ಮೈಸೂರಿನ ಸ್ಪೂರ್ತಿಯನ್ನು ಪ್ರತಿಬಿಂಬಿಸುವ ಅನುಭವದ ಮೂಲಕ ನಗರದ ಶ್ರೀಮಂತ ಸಾಂಸ್ಕೃತಿಕ ಗುರುತು, ಸಾಂಪ್ರದಾಯಿಕ ಕರಕುಶಲತೆ ಮತ್ತು ಆಭರಣಗಳ ಆಧುನಿಕ ಶೈಲಿಯನ್ನು ಒಂದೆಡೆ ತರುತ್ತದೆ. ಈ ಸಂಭ್ರಮಾಚರಣೆಯಲ್ಲಿ ಸಾಂಪ್ರದಾಯಿಕ ಜಾನಪದ ಕಲೆಯಾದ ಡೊಳ್ಳು ಕುಣಿತ, ನೇರ ಮೈಸೂರು ಬಾನಿ ವೀಣಾ ವಾದನ ಮತ್ತು ವೈಯಕ್ತೀಕರಿಸಿದ ಸಂದೂಕ ಕೆತ್ತನೆ ಕಾರ್ಯಕ್ರಮಗಳು ಜರುಗಿದವು. ಇವು ನಗರದ ಸಾಂಸ್ಕೃತಿಕ ಪರಂಪರೆಯನ್ನು ಬ್ರಾಂಡ್ ಅನ್ನು ಆಧುನಿಕ ದೃಷ್ಟಿಕೋನದೊಂದಿಗೆ ಬೆಸೆಯುವಂತಹ ವಾತಾವರಣವನ್ನು ನಿರ್ಮಿಸಿದವು.

ಈ ಬ್ರಾಂಡ್ ನ ಆಭರಣ ಸಂಗ್ರಹಗಳು ಬಿಐಎಸ್ ಹಾಲ್ಮಾರ್ಕ್ ಹೊಂದಿರುವ 92.5 ಸ್ಟರ್ಲಿಂಗ್ ಬೆಳ್ಳಿಯ ಆಭರಣಗಳನ್ನು ಒಳಗೊಂಡಿದ್ದು, 24 ಕ್ಯಾರಟ್ ಚಿನ್ನದ ಮೆರುಗನ್ನು ಪಡೆದಿವೆ. ಸಾಂಪ್ರದಾಯಿಕ ಚಿನ್ನದ ಆಭರಣ ತಯಾರಿಕಾ ತಂತ್ರಗಳಲ್ಲಿ ಪರಿಣಿತರಾದ ಕುಶಲಕರ್ಮಿಗಳಿಂದ ರಚಿಸಲ್ಪಟ್ಟ ಈ ಆಭರಣಗಳು ಕತ್ತರಿಸದ ಕುಂದನ್ ಗ್ಲಾಸ್ವರ್ಕ್, ದೇವಾಲಯ ಪ್ರೇರಿತ ವಿನ್ಯಾಸಗಳು, ಪೋಲ್ಕಿ, ಜಡಾವೂ ಮತ್ತು ನವರತ್ನ ಸೇರಿದಂತೆ ಭಾರತೀಯ ಕಲಾ ಸಂಪ್ರದಾಯಗಳಿಂದ ಪ್ರೇರಣೆ ಪಡೆದಿವೆ. ಈ ಸಂಗ್ರಹಗಳು ಭವ್ಯವಾದ ವಧುವಿನ ಹಾಗೂ ಹಬ್ಬದ ಆಭರಣಗಳ ಜೊತೆಗೆ ದೈನಂದಿನ ಮತ್ತು ಆಧುನಿಕ ವಿನ್ಯಾಸಗಳನ್ನು ಒಳಗೊಂಡಿದ್ದು, ಗ್ರಾಹಕರು ಕರಕುಶಲತೆ ಅಥವಾ ವಿನ್ಯಾಸದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ವಿವಿಧ ಸಂದರ್ಭಗಳಿಗೆ ತಕ್ಕಂತೆ ಆಭರಣಗಳನ್ನು ಆಯ್ಕೆ ಮಾಡಲು ಅವಕಾಶ ನೀಡುತ್ತವೆ.

ಈ ಶುಭಾರಂಭದ ಕುರಿತು ಮಾತನಾಡಿದ ರಸ ಸಿಲ್ವರ್ ಸಂಸ್ಥಾಪಕರಾದ ಮನನ್ ಬೋಹ್ರಾ ಅವರು, “ಮೈಸೂರು ತನ್ನ ರಾಜ ಪರಂಪರೆ, ಕಲಾತ್ಮಕ ಸಂಪ್ರದಾಯಗಳು ಮತ್ತು ನಗರವನ್ನು ವಿಶಿಷ್ಟ ರೀತಿಯಲ್ಲಿ ಒಂದಾಗಿಸುವ ದಸರಾ ಮಹೋತ್ಸವದ ಉತ್ಸಾಹದೊಂದಿಗೆ ಭಾರತದ ಸಾಂಪ್ರದಾಯಿಕ ಭೂಪಟದಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ಇಲ್ಲಿ ನಮ್ಮ ಆರನೇ ಮಳಿಗೆಯನ್ನು ಪ್ರಾರಂಭಿಸುತ್ತಿರುವುದು ರಸ ಸಿಲ್ವರ್ ಗೆ ಅತ್ಯಂತ ಅರ್ಥಪೂರ್ಣವಾದ ಮೈಲಿಗಲ್ಲಾಗಿದೆ. 'ಫಾರ್ ದ ಮಹಾರಾಣಿ ಆಫ್ ನೌ' ಎಂಬ ಪರಿಕಲ್ಪನೆಯೊಂದಿಗೆ, ನಾವು ತಮ್ಮ ಸಾಂಪ್ರದಾಯಿಕ ಪರಂಪರೆಯನ್ನು ಗೌರವಿಸುತ್ತಲೇ ತಮ್ಮ ಪ್ರತ್ಯೇಕತೆಯನ್ನು ವ್ಯಕ್ತಪಡಿಸುವ ಮತ್ತು ಸಂಪ್ರದಾಯದೊಂದಿಗೆ ತಮ್ಮದೇ ಆದ ಸಂಬಂಧವನ್ನು ವ್ಯಾಖ್ಯಾನಿಸುವ ಮಹಿಳೆಯರನ್ನು ಸಂಭ್ರಮಿಸಲು ಬಯಸಿದ್ದೇವೆ. 'ನ್ಯೂ ಹೇರ್ಲೂಮ್' (ಹೊಸ ಪರಂಪರೆ) ತತ್ವದಲ್ಲಿ ನಮಗಿರುವ ನಂಬಿಕೆಯು ಈ ಆಲೋಚನೆಯನ್ನು ಪ್ರತಿಬಿಂಬಿಸುತ್ತದೆ — ಆಭರಣಗಳನ್ನು ಧರಿಸಬೇಕು, ಪ್ರೀತಿಯಿಂದ ಜೋಪಾನ ಮಾಡಬೇಕು ಮತ್ತು ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಅರ್ಥಪೂರ್ಣವಾಗಿ ಸಾಗಿಸುವ ಪ್ರಮುಖ ಕ್ಷಣಗಳ ಭಾಗವಾಗಿಸಬೇಕು.

ಮೈಸೂರಿನ ಸಾಂಸ್ಕೃತಿಕ ಹಾಗೂ ಚಿಲ್ಲರೆ ವ್ಯಾಪಾರದ ಭಾಗವಾಗಲು ಮತ್ತು ಇಲ್ಲಿನ ಗ್ರಾಹಕರೊಂದಿಗೆ ಸುದೀರ್ಘ ಸಂಬಂಧವನ್ನು ಬೆಳೆಸಲು ನಾವು ಕಾತುರರಾಗಿದ್ದೇವೆ” ಎಂದು ಹೇಳಿದರು.

ಮೈಸೂರಿನಲ್ಲಿ ನಡೆದ ಈ ಮಳಿಗೆಯ ಶುಭಾರಂಭವು ಸಾಂಪ್ರದಾಯಿಕ ಭಾರತೀಯ ಆಭರಣಗಳನ್ನು ಆಧುನಿಕ ಗ್ರಾಹಕರಿಗೆ ಸೂಕ್ತವಾಗುವಂತೆ ಮರುರೂಪಿಸುವ ರಸ ಸಿಲ್ವರ್ ನ ವಿಸ್ತಾರ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ. ಚಿನ್ನದ ಲೇಪನ ಮತ್ತು ಸಾಂಪ್ರದಾಯಿಕ ಆಭರಣ ತಯಾರಿಕಾ ತಂತ್ರಗಳನ್ನೊಳಗೊಂಡ ಸ್ಟರ್ಲಿಂಗ್ ಬೆಳ್ಳಿಯ ಬಳಕೆಯು, ಗ್ರಾಹಕರಿಗೆ ಅತ್ಯುತ್ತಮ ಚಿನ್ನದ ಆಭರಣಗಳ ಸೌಂದರ್ಯದಿಂದ ಪ್ರೇರಿತವಾದ ವಿನ್ಯಾಸಗಳನ್ನು ಹೆಚ್ಚು ಕೈಗೆಟುಕುವ ದರದಲ್ಲಿ ಪಡೆದುಕೊಳ್ಳುವ ಅವಕಾಶವನ್ನು ನೀಡುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net