ರಾಮಾಯಣ ಮಾನವೀಯ ಮೌಲ್ಯಗಳ ಸಾರ

ಎಚ್.ಡಿ.ಕೋಟೆಯಲ್ಲಿ ಮಹರ್ಷಿ ಜಯಂತಿ
 ಪಿರಿಯಾಪಟ್ಟಣ
ಪಿರಿಯಾಪಟ್ಟಣದ ಡಿ.ದೇವರಾಜ ಅರಸು ಭವನದಲ್ಲಿ ಸೋಮವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ನಿತಿನ್ ವೆಂಕಟೇಶ್ ಉದ್ಘಾಟಿಸಿದರು. ಎಚ್.ಡಿ.ಗಣೇಶ್, ಚಂದ್ರಶೇಖರ್, ಪ್ರಶಾಂತ್, ಪುಟ್ಟಯ್ಯ, ಪಿ.ಎಸ್.ಹರೀಶ್, ತಮ್ಮಣ್ಣಯ್ಯ, ರಾಮಚಂದ್ರ, ಪಿ.ಮಹದೇವ್, ಚಲುವರಾಯ ಇತರರು ಇದ್ದರು. ಪಿರಿಯಾಪಟ್ಟಣ
Published on: 

ಪಿರಿಯಾಪಟ್ಟಣ: ಮಹರ್ಷಿ ವಾಲ್ಮೀಕಿ ವಿರಚಿತ ರಾಮಾಯಣ ಮಹಾಕಾವ್ಯವು ಸಾಹಿತ್ಯ ಕ್ಷೇತ್ರದಲ್ಲಿ ಮಹತ್ವದ ಸ್ಥಾನ ಪಡೆದಿದ್ದು, ಅದರಲ್ಲಿನ ಮಾನವೀಯ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಎಪಿಎಂಸಿ ಸಹಾಯಕ ಕಾರ್ಯದರ್ಶಿ ಚಲುವರಾಯ ತಿಳಿಸಿದರು.

ಪಟ್ಟಣದ ಡಿ.ದೇವರಾಜ ಅರಸು ಭವನದಲ್ಲಿ ಸೋಮವಾರ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ರತ್ನಾಕರನಿಂದ ಮಹರ್ಷಿ ವಾಲ್ಮೀಕಿಯಾಗಿ ರೂಪಾಂತರಗೊಂಡ ಅವರ ಜೀವನ, ನಾರದ ಮುನಿಗಳ ಪ್ರೇರಣೆ ಹಾಗೂ ರಾಮಾಯಣದ ರಚನೆಯ ಹಿಂದಿನ ಕಥನಗಳು ಮಹರ್ಷಿ ವಾಲ್ಮೀಕಿಯ ಜೀವನದ ಪ್ರಮುಖ ಘಟ್ಟಗಳಾಗಿವೆ. ಅವರ ಜೀವನದ ಕಥನವು ಬದಲಾವಣೆ, ಜ್ಞಾನಾರ್ಜನೆ ಹಾಗೂ ಸಾಹಿತ್ಯ ರಚನೆಯ ಮಹತ್ವವನ್ನು ಸಾರುತ್ತದೆ ಎಂದರು.

ಇಪ್ಪತ್ತ ನಾಲ್ಕು ಸಾವಿರ ಶ್ಲೋಕ: ವಾಲ್ಮೀಕಿ ರಾಮಾಯಣವು ಸುಮಾರು 24 ಸಾವಿರ ಶ್ಲೋಕಗಳನ್ನು ಒಳಗೊಂಡಿದ್ದು, ಬಾಲಕಾಂಡ, ಅಯೋಧ್ಯಾಕಾಂಡ, ಅರಣ್ಯಕಾಂಡ, ಕಿಷ್ಕಿಂಧಾಕಾಂಡ, ಸುಂದರಕಾಂಡ, ಯುದ್ಧಕಾಂಡ ಹಾಗೂ ಉತ್ತರಕಾಂಡ ಸೇರಿದಂತೆ ಏಳು ಕಾಂಡಗಳನ್ನು ಹೊಂದಿದೆ. ಈ ಮಹಾಕಾವ್ಯದ ಪ್ರಭಾವದಿಂದ ವಿವಿಧ ಕಾಲಘಟ್ಟಗಳಲ್ಲಿ ಅನೇಕ ರಾಮಾಯಣಗಳು ಹಾಗೂ ಸಾಹಿತ್ಯ ಕೃತಿಗಳು ರಚನೆಯಾಗಿವೆ. ಭಕ್ತಿ ಚಳವಳಿಯ ಸಂದರ್ಭದಲ್ಲಿ ಆಧ್ಯಾತ್ಮಿಕ ದೃಷ್ಟಿಕೋನದಿಂದಲೂ ರಾಮಾಯಣದ ಕಥನಗಳು ವಿಸ್ತಾರಗೊಂಡಿವೆ ಎಂದು ಚಲುವರಾಯ ವಿವರಿಸಿದರು. ರಾಮಾಯಣದ ವಿವಿಧ ರೂಪಗಳು, ಅವುಗಳಲ್ಲಿನ ಪಾತ್ರಗಳ ನಿರೂಪಣೆ ಹಾಗೂ ತಾತ್ವಿಕ ಹಿನ್ನೆಲೆಯನ್ನು ಅಧ್ಯಯನ ಮಾಡುವುದರಿಂದ ಭಾರತೀಯ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆಯ ಬೆಳವಣಿಗೆಯನ್ನು ಅರ್ಥ ಮಾಡಿಕೊಳ್ಳಬಹುದು ಎಂದರು.

ಕಾರ್ಯಕ್ರಮದಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ಮೈಸೂರು ಬಣ್ಣ ಮತ್ತು ಅರಗು (ಮೈಲ್ಯಾಕ್) ಸಂಸ್ಥೆ ಅಧ್ಯಕ್ಷ ಎಚ್.ಡಿ.ಗಣೇಶ್, ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಚಂದ್ರಶೇಖರ್ ಹಾಗೂ ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಪ್ರಶಾಂತ್ ಮಾತನಾಡಿದರು.

ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹೊಸಳ್ಳಿ ಕೃಷ್ಣೇಗೌಡ, ಬಿಇಒ ರವಿ ಪ್ರಸನ್ನ, ಉಪತಹಸೀಲ್ದಾರ್ ಶ್ರೀನಿವಾಸಮೂರ್ತಿ, ತಾಲೂಕು ನಾಯಕ ಸಂಘದ ಅಧ್ಯಕ್ಷ ಪುಟ್ಟಯ್ಯ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಆಲನಹಳ್ಳಿ ರಾಜಣ್ಣ, ಪುರಸಭೆ ಮಾಜಿ ಸದಸ್ಯ ತಿಮ್ಮನಾಯಕ, ಮುಖಂಡರಾದ ಸೀಗೂರು ವಿಜಯಕುಮಾರ್, ಪಿ.ಎಸ್.ಹರೀಶ್, ಆರ್.ತುಂಗಾ ಹರೀಶ್, ಶಫಿ ಅಹಮದ್, ರಮಾನಾಥ್, ರವಿ ಚಪ್ಪರದಹಳ್ಳಿ, ತಮ್ಮಣ್ಣಯ್ಯ, ರಾಮಚಂದ್ರ, ಪಿ.ಮಹದೇವ್, ಚಾಮರಾಜ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net