ಬರಗೂರು ಮಾಡಿರುವ ಎಲ್ಲ ಸಿನಿಮಾಗಳಲ್ಲಿ, ಕಥೆಗಳಲ್ಲಿ ಹೆಣ್ಣಿನ ಮನಸ್ಸಿನ ದ್ವಂದ್ವಗಳನ್ನು ಹೇಳುತ್ತವೆ. ಹೆಣ್ಣಿನ ಒಳ ಮನಸ್ಸಿನ ಭಾವನೆಗಳನ್ನು ಹೇಳುತ್ತದೆ. ಇದರಲ್ಲಿ ಪ್ರಮುಖವಾದದ್ದು ಭಾಗೀರಥಿ. ಭಾಗೀರಥಿಯ ಜೀವನದಲ್ಲಿರುವ ಆಸೆಗಳು, ಕನಸುಗಳು ಅಂಕುರಗೊಳ್ಳದಿರುವ ಸಮಯದಲ್ಲೇ ತಾನು ಹೊರಟುಹೋಗುವುದನ್ನು ತಾನೇ ನೋಡುತ್ತಾಳೆ. ಭಾಗೀರಥಿ ತನ್ನ ಕಥೆಯನ್ನು ತನ್ನ ಸ್ನೇಹಿತರ ಬಳಿ, ತಂದೆ, ತಾಯಿ ಗಂಡನ ಬಳಿಯೂ ಹೇಳಿಕೊಳ್ಳುತ್ತಾಳೆ. ಅವಳಿಗೆ ಎಲ್ಲಿಯೂ ಉತ್ತರ ಸಿಗದ ಕಾರಣ ತ್ಯಾಗಕ್ಕೆ ಮುಂದಾಗುತ್ತಾಳೆ ಎಂದು ಹೇಳಿದರು.