ಮಾರಗೌಡನಹಳ್ಳಿಯಲ್ಲಿ ವಿಬಿ ಜಿ ರಾಮ್‌ಜೀ ಯೋಜನೆಗೆ ಚಾಲನೆ

 ಹುಣಸೂರು ತಾಲೂಕು ಬಿಳಿಗೆರೆ ಗ್ರಾ.ಪಂ.ವ್ಯಾಪ್ತಿಯ ಮಾರಗೌಡನಹಳ್ಳಿಯಲ್ಲಿ ವಿಬಿ ಜಿ ರಾಮ್‌ಜೀ ಯೋಜನೆಗೆ ಚಾಲನೆ ನೀಡಲಾಯಿತು. ಬಿಳಿಗೆರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶೀಲಾ, ಗ್ರಾ.ಪಂ.ಕಾರ್ಯದರ್ಶಿ ಆನಂದ್, ಕಾಯಕ ಮಿತ್ರರಾದ ಸುಮಾ, ಕುಮಾರ್ ಮತ್ತು ಜಾಬ್‌ಕಾರ್ಡ್‌ದಾರರು ಇದ್ದರು.
ಹುಣಸೂರು ತಾಲೂಕು ಬಿಳಿಗೆರೆ ಗ್ರಾ.ಪಂ.ವ್ಯಾಪ್ತಿಯ ಮಾರಗೌಡನಹಳ್ಳಿಯಲ್ಲಿ ವಿಬಿ ಜಿ ರಾಮ್‌ಜೀ ಯೋಜನೆಗೆ ಚಾಲನೆ ನೀಡಲಾಯಿತು. ಬಿಳಿಗೆರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶೀಲಾ, ಗ್ರಾ.ಪಂ.ಕಾರ್ಯದರ್ಶಿ ಆನಂದ್, ಕಾಯಕ ಮಿತ್ರರಾದ ಸುಮಾ, ಕುಮಾರ್ ಮತ್ತು ಜಾಬ್‌ಕಾರ್ಡ್‌ದಾರರು ಇದ್ದರು.
Published on
ಹುಣಸೂರು : ವಿಬಿ ಜಿ ರಾಮ್ ಜಿ ಯೋಜನೆಯಡಿ ಮಾನವ ದಿನಗಳನ್ನು 125 ದಿನಗಳಿಗೆ ಏರಿಕೆ ಹಾಗೂ ಕೂಲಿ ಮೊತ್ತ ರೂ. 382 ರೂ.ಗಳಿಗೆ ಏರಿಸಿದ್ದು, ಕೂಲಿ ಕಾರ್ಮಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಬಿಳಿಗೆರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶೀಲಾ ಹೇಳಿದರು.
ತಾಲೂಕಿನ ಬಿಳಿಗೆರೆ ಗ್ರಾಮ ಪಂಚಾಯಿತಿಯ ಮಾರಗೌಡನಹಳ್ಳಿ ಗ್ರಾಮದಲ್ಲಿ ಗುರುವಾರ ಮಾರಗೌಡನ ಹಳ್ಳಿಯಲ್ಲಿ ವಿಬಿ ಜಿ ರಾಮ್‌ಜೀ ಯೋಜನೆಗೆ ಚಾಲನೆ ನೀಡಿದ ನಂತರ ಕಾಮಗಾರಿ ಅನುಷ್ಠಾನವಾಗಲಿರುವ
ಸ್ಥಳ ಪರಿಶೀಲಿಸಿ ಮಾತನಾಡಿದರು.
ಪ್ರಸ್ತುತ ಮಹಾತ್ಮಗಾಂಧಿ ನರೇಗಾ ಯೋಜನೆ ಬದಲಿಗೆ ವಿಬಿ ಜಿ ರಾಮ್ ಜಿ ಯೋಜನೆ ಚಾಲ್ತಿಯಲ್ಲಿದೆ. ಸಂಪೂರ್ಣ ಪಾರದರ್ಶಕತೆ ಮತ್ತು ತಂತ್ರಜ್ಞಾನದೊಂದಿಗೆ ಈ ಕಾಯ್ದೆ ಜಾರಿಯಾಗಿದೆ. ಗ್ರಾಮೀಣ ಭಾಗದ ಕೂಲಿ ಕಾರ್ಮಿಕರು ಈ ಯೋಜನೆಯನ್ನು ಸದ್ಭಳಕೆ ಮಾಡಿಕೊಳ್ಳುವಂತೆ ತಿಳಿಸಿದರು. ತಾಲೂಕು ಐಇಸಿ ಸಂಯೋಜಕಿ ಪುಷ್ಪಾವತಿ ಮಾತನಾಡಿ, ಕೂಲಿ ಕಾರ್ಮಿಕರಿಗೆ 100 ರಿಂದ 125 ಮಾನವ ದಿನ ಸೃಜನೆಗೆ ಅವಕಾಶ ಕಲ್ಪಿಸಲಾಗಿದೆ. 370 ರಿಂದ 382ಕ್ಕೆ ಕೂಲಿ ಮೊತ್ತ ಹೆಚ್ಚಳಗೊಂಡಿದೆ. ನಿರಂತರ ಕೆಲಸದಿಂದ ಸುಮಾರು ರೂ. 47,750 ರೂ. ಗಳಿಸಬಹುದಾಗಿದೆ. ಯೋಜನೆಯಲ್ಲಿ 318 ರೀತಿಯ ಕಾಮಗಾರಿಗಳಿವೆ.
ವೈಯಕ್ತಿಕವಾಗಿಯೂ ಗ್ರಾಮೀಣ ಭಾಗದ ರೈತರು ಇದರ ಸದುಪಯೋಗ ಪಡೆದುಕೊಳ್ಳಬಹುದೆಂದು ತಿಳಿಸಿದರು.
ರೈತರಿಗೆ ಅನುಕೂಲವಾಗಲೆಂದು ಬಿತ್ತನೆ ಮತ್ತು ಕಟಾವು ಸಮಯದಲ್ಲಿ 60 ದಿನಗಳ ಬಿಡುವು ನೀಡಿದ್ದು, ರೈತರು ಆ ಸಮಯದಲ್ಲಿ ವಿಬಿ ಜಿ ರಾಮ್ ಜಿ ಯೋಜನೆಗೆ ವಿರಾಮ ನೀಡಿ ತಮ್ಮ ಸ್ವಂತ ಕೆಲಸದಲ್ಲಿ ತೊಡಗಿ ಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಗ್ರಾಮ ಪಂಚಾಯಿತಿ ಸಂಪರ್ಕಿಸಬಹುದಾಗಿದೆ. ವಿಬಿ ಜಿ ರಾಮ್ ಜಿ ನಲ್ಲಿ ಉದ್ಯೋಗ ಕೋರಲು ನಮೂನೆ 6 ರ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದರು.
ಜಾಬ್ ಕಾರ್ಡ್ ಹೊಂದಿರುವ ರೈತಮಹಿಳೆ ಶಶಿಕಲಾ ಮಾತನಾಡಿ, ವಿಬಿ ಜಿ ರಾಮ್ ಜಿ ಯೋಜನೆಯಡಿ ದಿನವೊಂದರ ಕೂಲಿ ಮೊತ್ತ 382ಕ್ಕೆ ಹೆಚ್ಚಳಗೊಂಡಿದೆ. 125 ದಿನ ಕೆಲಸಕ್ಕೆ 47 ಸಾವಿರ ದೊರೆಯಲಿದೆ. ಇದರಿಂದಾಗಿ ಬಿತ್ತನೆ ಬೀಜ, ಗೊಬ್ಬರ ಅಥವಾ ಮನೆಯ ನಿರ್ವಹಣೆಗೆ ಅನುಕೂಲವಾಗಲಿದೆ ಎಂದರು.
ಗ್ರಾ.ಪಂ.ಕಾರ್ಯದರ್ಶಿ ಆನಂದ್, ಕಾಯಕ ಮಿತ್ರರಾದ ಸುಮಾ, ಕುಮಾರ್ ಸೇರಿದಂತೆ ಗ್ರಾಮ ಪಂಚಾಯಿತಿಯ ಸಿಬ್ಬಂದಿ ಹಾಗೂ ಕೂಲಿ ಕಾರ್ಮಿಕರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net