ಮಾದಕ ವಸ್ತು ತ್ಯಜಿಸಲು ಅರಿವು ಮೂಡಿಸಿ

ಸರಗೂರು ತಾಲೂಕಿನ ಎಂ.ಸಿ.ತಳಲು ಸರ್ಕಾರಿ ಪ್ರೌಢಶಾಲೆಯಲ್ಲಿ ನಶಾಮುಕ್ತ ಭಾರತ ಅಭಿಯಾನ ಕಾರ್ಯಕ್ರಮವನ್ನು ಅತಿಥಿಗಳು ಉದ್ಘಾಟಿಸಿದರು. ದೇವರಾಜು, ಸೋಮೇಶ್, ಬಸವರಾಜು ಇತರರು ಇದ್ದರು.
ಸರಗೂರು ತಾಲೂಕಿನ ಎಂ.ಸಿ.ತಳಲು ಸರ್ಕಾರಿ ಪ್ರೌಢಶಾಲೆಯಲ್ಲಿ ನಶಾಮುಕ್ತ ಭಾರತ ಅಭಿಯಾನ ಕಾರ್ಯಕ್ರಮವನ್ನು ಅತಿಥಿಗಳು ಉದ್ಘಾಟಿಸಿದರು. ದೇವರಾಜು, ಸೋಮೇಶ್, ಬಸವರಾಜು ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ದೇವರಾಜು ಸಲಹೆ
  • ಎಂ.ಸಿ.ತಳಲು ಗ್ರಾಮದಲ್ಲಿ ನಶಾಮುಕ್ತ ಭಾರತ ಅಭಿಯಾನ ಉದ್ಘಾಟನೆ
ಸರಗೂರು: ಧೂಮಪಾನ, ಮದ್ಯಪಾನ ಹಾಗೂ ಇತರ ಮಾದಕ ವಸ್ತುಗಳ ಕುರಿತು ಯುವಜನರಲ್ಲಿ ಅರಿವು ಮೂಡಿಸಿ ಅವುಗಳನ್ನು ತ್ಯಜಿಸುವಂತೆ ಮಾಡಲು ರಾಜ್ಯಾದ್ಯಂತ ನಶಾಮುಕ್ತ ಭಾರತ ಅಭಿಯಾನ ಮಾಡಬೇಕಾಗಿದೆ ಎಂದು ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ತಾಲೂಕು ಸಂಯೋಜಕ ದೇವರಾಜು ಹೇಳಿದರು.
ತಾಲೂಕಿನ ಎಂ.ಸಿ.ತಳಲು ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಸರಗೂರು ತಾಲೂಕು ಪಂಚಾಯಿತಿ ಸಹಯೋಗದಲ್ಲಿ ನಶಾ ಮುಕ್ತ ಭಾರತ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ತಂಬಾಕು ಪದಾರ್ಥಗಳಿಂದ ವಿವಿಧ ರೋಗಗಳಿಗೆ ಒಳಗಾಗಿರುವವರು ಚಿಕಿತ್ಸೆಗಾಗಿ ಕೋಟ್ಯಂತರ ರೂ. ಖರ್ಚು ಮಾಡುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಇತ್ತೀಚಿನ ದಿನಗಳಲ್ಲಿ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಮಾದಕ ವಸ್ತುಗಳನ್ನು ಬಳಸಿ ತೊಂದರೆಗೆ ಒಳಗಾಗುತ್ತಿದ್ದು, ತಂಬಾಕು ಉತ್ಪನ್ನಗಳಿಂದ ಮೃತಪಟ್ಟವರೂ ಇದ್ದಾರೆ ಎಂದರು.
ಯುವಜನರಲ್ಲಿ ಈ ಕುರಿತು ಜಾಗೃತಿ ಮೂಡಿಸಲು ವಿವಿಧ ಕಾಲೇಜುಗಳು, ವಿದ್ಯಾರ್ಥಿ ನಿಲಯಗಳು ಹಾಗೂ ಕೊಳೆಗೇರಿಗಳಲ್ಲಿ ಅಭಿಯಾನ ಕೈಗೊಂಡು ಬೀದಿ ನಾಟಕ, ಸಾಕ್ಷ್ಯಚಿತ್ರ, ಹಾಡುಗಳ ಮೂಲಕ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು. ಸೋಮೇಶ್, ಬಸವರಾಜು ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net