ಮೊಬೈಲ್ ವ್ಯಸನ ಜಾಗೃತಿ ಮೂಡಿಸಿ

ನಗರದಲ್ಲಿ ಸೋಮವಾರ ಆಯೋಜಿಸಿದ್ದ ಮಕ್ಕಳ ರಂಗ ಬೇಸಿಗೆ ಶಿಬಿರವನ್ನು ರಂಗಕರ್ಮಿ ರಾಜಶೇಖರ ಕದಂಬ ಉದ್ಘಾಟಿಸಿದರು. ಮಡ್ಡೀಕೆರೆ, ದಿನೇಶ್ ಚವ್ಮಾಳಿಗೆ (ನೀನಾಸಂ), ನಿಖಿಲ್, ರಂಗಕರ್ಮಿ ಅಶ್ವಥ್ ಕದಂಬ ಇದ್ದರು.
ನಗರದಲ್ಲಿ ಸೋಮವಾರ ಆಯೋಜಿಸಿದ್ದ ಮಕ್ಕಳ ರಂಗ ಬೇಸಿಗೆ ಶಿಬಿರವನ್ನು ರಂಗಕರ್ಮಿ ರಾಜಶೇಖರ ಕದಂಬ ಉದ್ಘಾಟಿಸಿದರು. ಮಡ್ಡೀಕೆರೆ, ದಿನೇಶ್ ಚವ್ಮಾಳಿಗೆ (ನೀನಾಸಂ), ನಿಖಿಲ್, ರಂಗಕರ್ಮಿ ಅಶ್ವಥ್ ಕದಂಬ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪಾಲಕರಿಗೆ ರಂಗಕರ್ಮಿ ರಾಜಶೇಖರ ಕದಂಬ ಸಲಹೆ
  • ರಂಗ ಬೇಸಿಗೆ ಶಿಬಿರ
ಮೈಸೂರು: ಮೊಬೈಲ್ ವ್ಯಸನದ ಕುರಿತು ಶಾಲಾ ಹಂತದಿಂದಲೇ ಮಕ್ಕಳಿಗೆ ಜಾಗೃತಿ ಮೂಡಿಸಬೇಕಿದೆ ಎಂದು ರಂಗಕರ್ಮಿ ರಾಜಶೇಖರ ಕದಂಬ ಸಲಹೆ ನೀಡಿದರು.
ನಾಲ್ವಡಿ ಸೋಷಿಯಲ್ ಕಲ್ಚರಲ್ ಆ್ಯಂಡ್ ಎಜುಕೇಷನಲ್ ಟ್ರಸ್ಟ್ ವತಿಯಿಂದ ವಿಜಯನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಮಕ್ಕಳ ರಂಗ ಬೇಸಿಗೆ ಶಿಬಿರ ಉದ್ಘಾಟಿಸಿ ವಾತನಾಡಿದರು.
ಡಿಜಿಟಲ್ ಮಾಧ್ಯಮಕ್ಕೆ ತೆರೆದುಕೊಂಡಿರುವ ಈಗಿನ ಮಕ್ಕಳಲ್ಲಿ ಮೊಬೈಲ್ ಖಯಾಲಿ ಹೆಚ್ಚಾಗಿದೆ. ಇದು ಅನೇಕ ರೀತಿಯಲ್ಲಿ ದುಷ್ಪರಿಣಾಮ ಬೀರುತ್ತಿದೆ. ಆದ್ದರಿಂದ ಮೊಬೈಲ್ ವೀಕ್ಷಣೆ ದುಶ್ಚಟಗಳ ಕುರಿತು ಶಾಲಾ ಮಟ್ಟದಲ್ಲೇ ಮಕ್ಕಳಿಗೆ ಜಾಗೃತಿ ಕಾರ್ಯಕ್ರಮ ಕೈಗೊಳ್ಳಬೇಕಿದೆ ಎಂದರು.
ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಬೇಸಿಗೆ ಶಿಬಿರ ಹೆಚ್ಚು ನಡೆಯಬೇಕು. ಇದರಿಂದ ಉತ್ತಮ ಸವಾಜದ ನಿರ್ವಾಣ ಸಾಧ್ಯ. ಮಕ್ಕಳು ರಜಾ ದಿನಗಳನ್ನು ಸದುಪಯೋಗಪಡಿಸಿಕೊಂಡು ಇನ್ನಷ್ಟು ಕ್ರಿಯಾಶೀಲರಾಗಲು ಬೇಸಿಗೆ ಶಿಬಿರ ಉತ್ತಮ ಆಯ್ಕೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್ ಮಾತನಾಡಿ, ವಿಶೇಷ ತರಬೇತಿಗಳಿಂದ ಮಕ್ಕಳಲ್ಲಿರುವ ಸುಪ್ತ ಪ್ರತಿಭೆ ಹೊರಹೊಮ್ಮಲು ಸಾಧ್ಯವಾಗುತ್ತದೆ. ಬೇಸಿಗೆ ಶಿಬಿರದಲ್ಲಿ ತೊಡಗಿದಾಗ ಮಕ್ಕಳ ವ್ಯಕ್ತಿತ್ವ ವಿಕಸನ ಹೊಂದಲೂ ಸಾಧ್ಯ ಎಂದರು.
ಟ್ರಸ್ಟ್ ಅಧ್ಯಕ್ಷ ದಿನೇಶ್ ಚವ್ಮಾಳಿಗೆ (ನೀನಾಸಂ), ನಿಖಿಲ್, ರಂಗಕರ್ಮಿ ಅಶ್ವಥ್ ಕದಂಬ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net