ಮೈಸೂರಿನಲ್ಲಿ ಸಚಿವ ಡಾ.ಎಂ.ಬಿ.ಪಾಟೀಲರ ಜನ್ಮ ದಿನವನ್ನುಅರ್ಥಪೂರ್ಣವಾಗಿ ಆಚರಿಸಿದ ಅಭಿಮಾನಿಗಳು

ಮಾವುತರು-ಕಾವಾಡಿಗಳಿಗೆ ರೇನ್‌ಕೋಟ್ ಕೊಡುಗೆ ದಸರಾ ಆನೆಗಳಿಗೆ ಕಣ್ಣುಗಳ ವಿತರಣೆ
Raincoats were distributed to the mausoleums and kavadis as part of Dr. M.B. Patil's birthday.
ಡಾ.ಎಂ.ಬಿ. ಪಾಟೀಲ್ ಅವರ ಜನ್ಮದಿನದ ಅಂಗವಾಗಿ ಮಾವುತರು ಹಾಗೂ ಕಾವಾಡಿಗಳಿಗೆ ರೈನ್‌ಕೋಟ್‌ಗಳನ್ನು ವಿತರಿಸಲಾಯಿತು. ಗಗನ್ ದೀಪ್, ಪವನ್ ಗೌಡ, ಪವನ್ ದೀಪ್, ಯಶ್ಮಾ ಮಾಚ್ಚಮ್ಮ, ಡಾ.ಆದರ್ಶ, ಅಭಿಷೇಕ್ ಗೌಡ, ನಾಗೇಶ್ ಪಾರ್ಥಸಾರಥಿ, ಆಕಾಶ್, ಶ್ರೇಯಸ್ ಗೌಡ, ದರ್ಶನ್ ಗೌಡ ಇತರರಿದ್ದರು.
Published on: 

ಮೈಸೂರು: ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ.ಎಂ.ಬಿ.ಪಾಟೀಲ್ ಅವರ ಜನ್ಮದಿನದ ಅಂಗವಾಗಿ ಅವರ ಅಭಿಮಾನಿ ಬಳಗದಿಂದ ಬುಧವಾರ ಮೈಸೂರು ಅರಮನೆ ಆವರಣದಲ್ಲಿ ಪರಿಸರ ಸ್ನೇಹಿ ಹಾಗೂ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಮೈಸೂರು ದಸರೆಯ ಪ್ರಮುಖ ಅಂಗವಾಗಿರುವ ಆನೆಗಳು ಹಾಗೂ ಅವುಗಳೊಂದಿಗೆ ಹಗಲಿರುಳು ಶ್ರಮಿಸುವ ಮಾವುತರು ಮತ್ತು ಕಾವಾಡಿಗಳೊಂದಿಗೆ ಆಚರಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.

ದಸರಾ ಆನೆಗಳ ಮಾವುತರು ಹಾಗೂ ಕಾವಾಡಿಗಳಿಗೆ ಮಳೆಯ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಲು ಅನುಕೂಲವಾಗುವಂತೆ 150 ರೇನ್‌ಕೋಟ್ ವಿತರಿಸಲಾಯಿತು.

ದಸರಾ ಆನೆಗಳಿಗೆ ಕಲ್ಲಂಗಡಿ ಸೇರಿದಂತೆ ವಿವಿಧ ಬಗೆಯ ಒಂದು ಲೋಡ್ ಹಣ್ಣುಗಳನ್ನು ವಿತರಿಸಿ, ಅವುಗಳಿಗೂ ಸತ್ಕಾರ ಮಾಡಲಾಯಿತು. ಅಲ್ಲದೆ, 300ಕ್ಕೂ ಮಂದಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು.

Raincoats were distributed to the mausoleums and kavadis as part of Dr. M.B. Patil's birthday.
ಡಾ.ಎಂ.ಬಿ.ಪಾಟೀಲ್ ಅವರ ಜನ್ಮದಿನದ ಅಂಗವಾಗಿ ಮಾವುತರು ಹಾಗೂ ಕಾವಾಡಿಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಯಿತು. ಗಗನ್ ದೀಪ್, ಪವನ್ ಗೌಡ, ಪವನ್ ದೀಪ್, ಅಭಿಷೇಕ್ ಗೌಡ, ನಾಗೇಶ್ ಪಾರ್ಥಸಾರಥಿ ಇದ್ದರು.

ಡಾ.ಎಂ.ಬಿ.ಪಾಟೀಲ ಅವರಿಗೆ ಇನ್ನಷ್ಟು ಜನಸೇವೆಗೆ ಶಕ್ತಿ ದೊರೆಯಲಿ

ಉದ್ಯಮಿ, ಅಭಿಮಾನಿ ಬಳಗದ ಗಗನ್ ದೀಪ್ ಮಾತನಾಡಿ, ಡಾ.ಎಂ.ಬಿ. ಪಾಟೀಲ್ ಅವರ ಜನ್ಮದಿನವನ್ನು ವಿಭಿನ್ನವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ. ಜನ್ಮದಿನದಂದು ಕೇವಲ ಶುಭಾಶಯ ಕೋರಿ, ಕೇಕ್ ಕತ್ತರಿಸುವುದಕ್ಕಿಂತ ಸಮಾಜಕ್ಕೆ ಮತ್ತು ಪರಿಸರಕ್ಕೆ ಉಪಯೋಗವಾಗುವಂತಹ ಕಾರ್ಯ ಮಾಡಬೇಕು ಎಂಬುದು ನಮ್ಮ ಆಶಯ. ದಸರಾ ಆನೆಗಳೊಂದಿಗೆ ನೇರವಾಗಿ ಕೆಲಸ ಮಾಡುವ ಮಾವುತರು ಮತ್ತು ಕಾವಾಡಿಗಳ ಶ್ರಮವನ್ನು ಗುರುತಿಸಿ, ಅವರ ಅನುಕೂಲಕ್ಕಾಗಿ ರೇನ್‌ಕೋಟ್ ನೀಡಲಾಗಿದೆ. ಮೈಸೂರು ದಸರೆಯ ವೈಭವ ಹಿಂದೆ ಈ ಸಿಬ್ಬಂದಿಯ ಪರಿಶ್ರಮ ಪ್ರಮುಖವಾಗಿದೆ ಎಂದರು.

ಈ ಕಾರ್ಯಕ್ರಮದ ಉದ್ದೇಶ ದೊಡ್ಡ ಪ್ರದರ್ಶನ ಮಾಡುವುದಲ್ಲ. ನಮ್ಮ ನೆಚ್ಚಿನ ನಾಯಕನ ಜನ್ಮದಿನವನ್ನು ಸಮಾಜಕ್ಕೆ ಮತ್ತು ಪರಿಸರಕ್ಕೆ ಉಪಯೋಗವಾಗುವ ರೀತಿಯಲ್ಲಿ ಆಚರಿಸುವುದು. ಇದೇ ನಿಜವಾದ ಅಭಿಮಾನ. ಡಾ.ಎಂ.ಬಿ. ಪಾಟೀಲ್ ಅವರಿಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ಇನ್ನಷ್ಟು ಜನಸೇವೆಗೆ ಶಕ್ತಿ ದೊರೆಯಲಿ. ರಾಜ್ಯದ ಅಭಿವೃದ್ಧಿಗೆ ಅವರ ಸೇವೆ ಇನ್ನಷ್ಟು ಮುಂದುವರಿಯಲಿ ಎಂದು ಹಾರೈಸುತ್ತೇನೆ ಎಂದರು.

ಡಾ.ಎಂ.ಬಿ.ಪಾಟೀಲ ಅವರು ಆಧುನಿಕ ಭಗೀರಥ

ಉದ್ಯಮಿ ಪವನ್ ಗೌಡ ಮಾತನಾಡಿ, ಡಾ.ಎಂ.ಬಿ.ಪಾಟೀಲ್ ಜಲಸಂಪನ್ಮೂಲ ಸಚಿವರಾಗಿದ್ದ ಸಂದರ್ಭದಲ್ಲಿ ನೀರಾವರಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು. ಕೆರೆಗಳಿಗೆ ನೀರು ತುಂಬಿಸುವುದು ಸೇರಿದಂತೆ ಹಲವು ನೀರಾವರಿ ಯೋಜನೆಗಳಿಗೆ ಒತ್ತು ನೀಡಿ ರೈತರು ಹಾಗೂ ಗ್ರಾಮೀಣ ಜನರ ಬದುಕಿಗೆ ನೆರವಾಗುವ ಕೆಲಸ ಮಾಡಿದ್ದಾರೆ. ಅವರ ಈ ಕೊಡುಗೆಯಿಂದಾಗಿ ಅವರನ್ನು ಆಧುನಿಕ ಭಗೀರಥ ಎಂದು ಗುರುತಿಸಲಾಗುತ್ತದೆ. ಪ್ರಸ್ತುತ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾಗಿ ಕರ್ನಾಟಕಕ್ಕೆ ಹೊಸ ಹೂಡಿಕೆಗಳನ್ನು ತರಲು ಹಾಗೂ ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡಲು ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಕೈಗಾರಿಕಾ ಬೆಳವಣಿಗೆಗೆ ಅವರ ಪ್ರಯತ್ನಗಳು ಮಹತ್ವದ್ದಾಗಿವೆ ಎಂದರು.

ಉದ್ಯಮಿ ಪವನ್ ದೀಪ್ ಮಾತನಾಡಿ, ಮೈಸೂರು ದಸರೆಯ ಆನೆಗಳು ನಾಡಿನ ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕವಾಗಿವೆ. ಅವುಗಳ ಆರೈಕೆಯಲ್ಲಿ ಮಾವುತರು ಮತ್ತು ಕಾವಾಡಿಗಳು ವಹಿಸುವ ಜವಾಬ್ದಾರಿ ಅತ್ಯಂತ ಮಹತ್ವದ್ದಾಗಿದೆ. ಆನೆಗಳನ್ನು ಕಾಡಿನಿಂದ ಕರೆತಂದು ತರಬೇತಿ ನೀಡುವುದರಿಂದ ಹಿಡಿದು ದಸರಾ ಮೆರವಣಿಗೆಯವರೆಗೆ ಅವುಗಳೊಂದಿಗೆ ನಿರಂತರವಾಗಿ ದುಡಿಯುವ ಸಿಬ್ಬಂದಿಯ ಸೇವೆಯನ್ನು ಗೌರವಿಸುವುದು ನಮ್ಮ ಕರ್ತವ್ಯ. ಈ ಹಿನ್ನೆಲೆಯಲ್ಲಿ ಆನೆಗಳಿಗೆ ಕಲ್ಲಂಗಡಿ ಸೇರಿದಂತೆ ವಿವಿಧ ಹಣ್ಣುಗಳನ್ನು ನೀಡಿ, ಅವುಗಳೊಂದಿಗೆ ಡಾ.ಎಂ.ಬಿ.ಪಾಟೀಲರ ಜನ್ಮದಿನದ ಸಂಭ್ರಮ ಹಂಚಿಕೊಳ್ಳಲಾಗಿದೆ. ಮುಂದೆಯೂ ಪರಿಸರ, ಪ್ರಾಣಿ ಸಂರಕ್ಷಣೆ ಹಾಗೂ ಸಮಾಜಮುಖಿ ಕಾರ್ಯಗಳಿಗೆ ಅಭಿಮಾನಿ ಬಳಗದಿಂದ ಬೆಂಬಲ ನೀಡಲಾಗುವುದು ಎಂದರು.

ಆರ್‌ಎಫ್‌ಒ ಯಶ್ಮಾ ಮಾಚ್ಚಮ್ಮ, ಪಶುವೈದ್ಯಾಧಿಕಾರಿ ಡಾ.ಆದರ್ಶ, ಅಭಿಮಾನಿ ಬಳಗದ ಅಭಿಷೇಕ್ ಗೌಡ, ನಾಗೇಶ್ ಪಾರ್ಥಸಾರಥಿ, ಆಕಾಶ್, ಶ್ರೇಯಸ್ ಗೌಡ, ದರ್ಶನ್ ಗೌಡ, ಗಗನ್ ಗೌಡ, ನಾರಾಯಣ್, ಮಾದೇಶ್, ನಿಖಿಲ್, ನಿತಿನ್ ಪೃಥ್ವಿ, ಆದಿತ್ಯ ಹಾಗೂ ನಿಶ್ಚಯ್ ಸೇರಿದಂತೆ ಅಭಿಮಾನಿ ಬಳಗದ ಸದಸ್ಯರು ಭಾಗವಹಿಸಿದ್ದರು.

Raincoats were distributed to the mausoleums and kavadis as part of Dr. M.B. Patil's birthday.
ಡಾ.ಎಂ.ಬಿ.ಪಾಟೀಲ್ ಅವರ ಜನ್ಮದಿನದ ಅಂಗವಾಗಿ ಮಾವುತರು ಹಾಗೂ ಕಾವಾಡಿಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಯಿತು. ಗಗನ್ ದೀಪ್, ಪವನ್ ಗೌಡ, ಪವನ್ ದೀಪ್, ಅಭಿಷೇಕ್ ಗೌಡ, ನಾಗೇಶ್ ಪಾರ್ಥಸಾರಥಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net