ಸಾಲಿಗ್ರಾಮ ಪಟ್ಟಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಶ್ರೀ ರಾಘವೇಂದ್ರ ಸ್ವಾಮಿ ಆರಾಧನಾ ಧಾರ್ಮಿಕ ಕಾರ್ಯಕ್ರಮ ನಡೆಯಿತು.
Published on:
Copied
Follow Us
ಸಾಲಿಗ್ರಾಮ: ಹಿಂದೆ ದೇವರ ಸೇವೆ ಮಾಡಿದ ಮನುಷ್ಯನ ಬದುಕು ಬಂಗಾರವಾಗಿತ್ತು. ಈಗ ದೇವರ ಆರಾಧನೆ ಮರೆತ ಮನುಷ್ಯನ ಜೀವನ ನರಕಯಾತನೆ ಆಗುತ್ತಿದೆ ಎಂದು ಅರಕೆರೆ ವಿರಕ್ತ ಮಠದ ಶ್ರೀ ಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಪಟ್ಟಣದ ಬಸಮ್ಮ ಜವರೇಗೌಡ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಸಾಮೂಹಿಕ ಶ್ರೀ ಗುರು ರಾಘವೇಂದ್ರ ಸ್ವಾಮಿ ಆರಾಧನಾ ಪೂಜಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಷ್ಟ ಬಂದಾಗ ದೇವರ ಸೇವೆ ಮಾಡುತ್ತಾರೆ. ಸುಖ ಬಂದಾಗ ದುರಹಂಕಾರದ ನಡವಳಿಕೆ ತೋರಿಸುತ್ತಾರೆ. ಆರೋಗ್ಯ ತಪ್ಪಿದಾಗ ಸಾಕಪ್ಪ ಜೀವನ ಎನ್ನುತ್ತಾರೆ. ಐಶ್ವರ್ಯ ಕೊಟ್ಟರೆ ಇನ್ನಷ್ಟು ಬೇಕು ಎನ್ನುತ್ತಾರೆ. ನೆಮ್ಮದಿ ಇಲ್ಲದಿದ್ದಾಗ ಮತ್ತೆ ದೇವರ ಸೇವೆ ಬೇಕು ಎನ್ನುತ್ತಾರೆ. ಇಂತಹ ಜನರ ಮಧ್ಯೆ ಜೀವನದ ಬಂಡಿ ಹೇಗೆಲ್ಲ ಸಾಗುತ್ತದೆ ಎಂದು ಈಗಾಗಲೇ ನಿಮ್ಮೆಲ್ಲರ ಕಣ್ಮುಂದೆ ನಡೆಯುತ್ತಿರುವ ಘಟನೆಗಳೇ ಸಾಕಷ್ಟಿದೆ. ಇದನ್ನು ನೋಡಿ ನಾವು ಸಾಕಷ್ಟು ಕಲಿಯಬೇಕಾದ ವಿಷಯಗಳಿವೆ ಎಂದು ಹೇಳಿದರು.
ಪ್ರತಿಯೊಬ್ಬ ಮನುಷ್ಯನಲ್ಲೂ ಇತ್ತೀಚಿನ ದಿನಗಳಲ್ಲಿ ಅಸೂಯೆ, ಅಹಂಕಾರ, ದ್ವೇಷ ಹೆಚ್ಚಾಗಿ ಕಂಡುಬರುತ್ತದೆ. ಅದನ್ನು ಬಿಟ್ಟು ಬದುಕಿರುವ ದಿನಗಳಲ್ಲಿ ಇತರರಿಗೆ ಹಿಂಸೆ, ತೊಂದರೆ ಕೊಡದಂತೆ ಎಲ್ಲರನ್ನೂ ಪ್ರೀತಿ, ವಿಶ್ವಾಸ ಸ್ನೇಹದಿಂದ ಕಾಣೋಣ. ದೇವರು ಮೆಚ್ಚುವ ರೀತಿಯಲ್ಲಿ ಜೀವನ ಸಾಗಿಸಿ ಹೋಗುವುದೇ ಮನುಷ್ಯನ ದೊಡ್ಡ ಸಾಧನೆ. ಇಡೀ ಮನುಕುಲದಲ್ಲಿ ದೇವರ ಸೇವೆ ಮತ್ತು ಆರಾಧನೆ ಮಾಡಿದ ವ್ಯಕ್ತಿಗೆ ಮಾತ್ರ ನೆಮ್ಮದಿ ಸಿಗಲು ಸಾಧ್ಯ ಎಂದರು.
ಧರ್ಮಸ್ಥಳ ಸಂಸ್ಥೆಯ ಜಿಲ್ಲಾ ನಿರ್ದೇಶಕಿ ಮಮತಾ ಮಾತನಾಡಿ, ಎಷ್ಟೇ ಸಂಪತ್ತು ಮಾಡಿದರು ಮನುಷ್ಯನಿಗೆ ಬೇಕಾಗಿರುವುದು ಮನಸ್ಸಿಗೆ ನೆಮ್ಮದಿ ಇಷ್ಟೆ. ಇದಕ್ಕಿಂತ ಶ್ರೀಮಂತಿಕೆ ಬೇಕೆ. ನೀವು ಒಮ್ಮೆ ಯೋಚನೆ ಮಾಡಿ. ನಾವು ನಮ್ಮ ಜೀವನಕ್ಕಾಗಿ ಇತರರ ಮೇಲೆ ಅವಲಂಬಿತರಾಗದೆ ನಮ್ಮ ಜೀವನ ನಾವೇ ರೂಪಿಸಿಕೊಳ್ಳುವುದು ಜಗದ ನಿಯಮವಾಗಬೇಕು. ದುಶ್ಚಟಗಳನ್ನು ಬಿಟ್ಟು ದೇವರ ಸೇವೆ ಮಾಡಿ ಎಂದರು.
ತಾಲೂಕು ಯೋಜನಾಧಿಕಾರಿ ಉಮೇಶ್ ಪೂಜಾರಿ, ದಿನೇಶ್, ಆರಾಧನಾ ಕಾರ್ಯಕ್ರಮ ಸಮಿತಿ ಅಧ್ಯಕ್ಷೆ ಗೌರಮ್ಮ, ಸಮಿತಿ ಸದಸ್ಯ ರಾಜೇಗೌಡ, ಧರ್ಮಸ್ಥಳ ಮಹಿಳಾ ಸಂಘಗಳ ಒಕ್ಕೂಟದ ಅಧ್ಯಕ್ಷರು, ವಲಯ ಟ್ರಸ್ಟ್ ಸದಸ್ಯರು, ಯೋಜನಾ ಸಂಸ್ಥೆಯ ಸಿಬ್ಬಂದಿ ಭಾಗವಹಿಸಿದ್ದರು.